ಹುಬ್ಬಳ್ಳಿ KMCRIನಲ್ಲಿ ವೈದ್ಯಲೋಕಕ್ಕೆ ಅಚ್ಚರಿ: ಮಗುವಿನೊಳಗೆ ಮತ್ತೊಂದು ಮಗು ಪತ್ತೆ!

ಹುಬ್ಬಳ್ಳಿ: ಹಲವು ಮಹಿಳೆಯರಿಗೆ ಎರಡು, ಮೂರು, ನಾಲ್ಕು ಮಕ್ಕಳು ಜನಿಸಿರುವುದನ್ನು ಕೇಳಿದ್ದೇವೆ. ಆದರೆ ಇಲ್ಲಿನ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ(ಕೆಎಂಸಿಆರ್ಐ) ಮಗುವಿನೊಳಗೆ ಮತ್ತೊಂದು ಮಗು ಇರುವ ಸಂಗತಿ ಪತ್ತೆಯಾಗಿದ್ದು, ವೈದ್ಯಲೋಕಕ್ಕೇ ಅಚ್ಚರಿ ಮೂಡಿಸಿದೆ.

ಕ್ರಿಯೆಯಲ್ಲಿಒಂದು ಸಯಾಮಿ ಅವಳಿಗಳು ಜನಿಸುವ ಸಂಭವನೀಯತೆ ಇದೆ ಎಂದು ವೈದ್ಯಕೀಯ ಸಂಶೋಧನೆಗಳು ಅಂದಾಜಿಸಿವೆ. ಸಾಮಾನ್ಯವಾಗಿ ಜನಿಸುವಾಗಲೇ ಈ ಅವಳಿಗಳ ದೇಹ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ ಮತ್ತು ತದ್ರೂಪವಾಗಿರುತ್ತವೆ. ಆದರೆ, ಮಗುವಿನಲ್ಲಿಮಗು ಕಂಡುಬರುವ ಪ್ರಕರಣಗಳು ಅತ್ಯಂತ ವಿರಳ. ಜಗತ್ತಿನಲ್ಲಿಬೆರಳೆಣಿಕೆಯಷ್ಟು ಪ್ರಕರಣಗಳು ಪತ್ತೆಯಾಗಿವೆ. ಇತ್ತೀಚಿನ ದಿನಗಳಲ್ಲಿವೈದ್ಯಕೀಯ ಅವಿಷ್ಕಾರ ಹಾಗೂ ತಂತ್ರಜ್ಞಾನ ಮುಂದುವರಿದಿದೆ. ಆದರೂ ಮಗು ಜನನಕ್ಕೂ ಮುನ್ನವೇ ಈ ಸಂಗತಿ ಪತ್ತೆಯಾಗದಿರುವುದು ಗಮನಾರ್ಹ. ಹೀಗಾಗಿ ಇದು ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ.
ವೈದ್ಯರು ಏನಂತಾರೆ?
ಜಗತ್ತಿನಲ್ಲಿಯೇ ಇದೊಂದು ಅಪರೂಪದ ಪ್ರಕರಣ. ಈಗಾಗಲೇ ಅಲ್ಟಾರಸೌಂಡ್, ಎಂಆರ್ಐ ತಪಾಸಣೆ ಮಾಡಲಾಗಿದೆ. ಮಗುವಿನ ದೇಹದೊಳಗೆ ಮತ್ತೊಂದು ಮಗುವಿನ ಆಕೃತಿಯಂತಹ(ಬೆನ್ನು ಮೂಳೆ)ಅಂಶಗಳು ಪತ್ತೆಯಾಗಿವೆ. ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಲು ಎಲ್ಲಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹುಬ್ಬಳ್ಳಿಯ ಕೆಎಂಸಿಆರ್ಐನ ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ ಅವರು ಹೇಳಿದರು.