ನೆಲಮಂಗಲ ಟೋಲ್ ಬಳಿ ಕಂಟೇನರ್ ಪಲ್ಟಿ: 1 ಕಿ.ಮೀ. ವರೆಗೆ ಟ್ರಾಫಿಕ್ ಜಾಮ್

ನೆಲಮಂಗಲ: ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಪಲ್ಟಿಯಾದ (Accident) ಘಟನೆ ನೆಲಮಂಗಲ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ನೆಲಮಂಗಲ ಟೋಲ್ (Nelamangala Toll) ಬಳಿ ತುಮಕೂರು ಕಡೆಯಿಂದ ಬೆಂಗಳೂರು ಕಡೆ ಬರುತ್ತಿದ್ದ ಕಂಟೇನರ್ ಲಾರಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಪರಿಣಾಮ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. 1 ಕಿ.ಮೀ ವರೆಗೆ ವಾಹನಗಳು ಸಾಲಾಗಿ ನಿಂತಿವೆ.

ಲಾರಿಯನ್ನ ತೆರವು ಮಾಡಲು ಟೋಲ್ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರು ಹರಸಾಹಸಪಡುತ್ತಿದ್ದಾರೆ.