ದಾರುಣ ಹತ್ಯೆ: ಬಸ್ ಮಾಲೀಕ ಸೈಪುದ್ದೀನ್ ದುಷ್ಕರ್ಮಿಗಳಿಂದ ಬಲಿ

ಉಡುಪಿ: ರೌಡಿ ಶೀಟರ್ ಸೈಫುದ್ದೀನ್ ನನ್ನು ಮಲ್ಪೆಯಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಸೆಪ್ಟೆಂಬರ್ 27 ರ ಶನಿವಾರ ಬೆಳಕಿಗೆ ಬಂದಿದೆ.

ಮಣಿಪಾಲ ಮೂಲದ ಸಾರಿಗೆ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದ ಸೈಫುದ್ದೀನ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.ಆತನ ಮೇಲೆ ಗುಂಡು ಹಾರಿಸಿದ ನಂತರ, ದಾಳಿಕೋರರು ಆತನ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
