ನಿರ್ಮಾಣವಾಗಿದ್ದ ಹೊಸ ಕಟ್ಟಡವೇ ಬದಿಗೆ ವಾಲು: ಬೆಂಗಳೂರಿನ ಜಕ್ಕಸಂದ್ರದಲ್ಲಿ ಆತಂಕ

ಬೆಂಗಳೂರು : ಸಾಮಾನ್ಯವಾಗಿ ಹಳೆಯದಾದ, ಶಿಥಿಲಾವಸ್ಥೆಗೊಂಡ ಕಟ್ಟಡಗಳು (Old building) ಮಳೆಯ ಹೊಡೆತಕ್ಕೆ ಅಥವಾ ಅಡಿಪಾಯದಲ್ಲಿ ಕುಸಿತ ಕಂಡ ಕಾರಣ ಕಟ್ಟಡ ಒಂದು ಬಾಡಿಗೆ ವಾಲುವುದು ಅಥವಾ ಸಂಪೂರ್ಣ ನೆಲಸಮ ಆಗಿರುವುದನ್ನು ನೋಡಿದ್ದೇವೆ. ಆದ್ರೆ ಬೆಂಗಳೂರಿನ (Bengaluru) ಜಕ್ಕಸಂದ್ರದಲ್ಲಿ ಈಗಷ್ಟೇ ನಿರ್ಮಾಣವಾಗಿದ್ದ ನೂತನ ಕಟ್ಟಡದಲ್ಲಿ (Building collapse) ಈ ರೀತಿಯ ಲೋಪ ಕಂಡುಬಂದಿದೆ.

ಹೌದು, ಜಕ್ಕಸಂದ್ರದ ಬಳಿ ಐದು ಅಂತಸ್ತಿನ ಕಟ್ಟಡವೊಂದು ಒಂದೇ ಕಡೆಗೆ ವಾಲಿದ್ದು, ಅಕ್ಕಪಕ್ಕದ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.
ಕೋರಮಂಗಲದ ಜಕ್ಕಸಂದ್ರದಲ್ಲಿ ಈ ಘಟನೆ ನಡೆದಿದ್ದು, ಕಳೆದ ಆರು ತಿಂಗಳಿನಿಂದ ಕಟ್ಟಡ ನಿರ್ಮಾಣ ಕಾರ್ಯ ನಡೆದಿತ್ತು. ಆದ್ರೆ ಕಟ್ಟಡದಲ್ಲಿ ಜನವಸ್ತಿ ಆರಂಭವಾಗುವ ಮೊದಲೇ ಕಟ್ಟಡ ಪಕ್ಕಕ್ಕೆ ವಾಲಿದೆ. ಇದು ಶಾಂತಮ್ಮ ಎಂಬುವವರಿಗೆ ಸೇರಿದ ಕಟ್ಟಡ ಎನ್ನಲಾಗಿದೆ.
ಇದೊಂದು ಪಿ.ಜಿ ಕಟ್ಟಡ ಎಂದು ತಿಳಿದುಬಂದಿದ್ದು, ನಿರ್ಮಾಣ ಕಾರ್ಯ ಮುಗಿದು, ಇನ್ನೇನು ಗೃಹ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುವ ವೇಳೆ ಬಿಲ್ಡಿಂಗ್ ಈ ರೀತಿ ಒಂದು ಬದಿಗೆ ವಾಲಿದೆ. ಇಂದು (ಸೆ.26) ಬೆಳಗ್ಗೆ ಇದ್ದಕ್ಕಿದ್ದ ಹಾಗೆ ಬಿಲ್ಡಿಂಗ್ ವಾಲಿದೆ ಎನ್ನಲಾಗಿದ್ದು, ಮಾಹಿತಿ ತಿಳಿದು ಸ್ಥಳದಿಂದ ಬಿಲ್ಡಿಂಗ್ ಮಾಲೀಕ ನಾಪತ್ತೆಯಾಗಿದ್ದಾನೆ. ಇದೀಗ ಬಿಲ್ಡಿಂಗ್ ತೆರವು ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿದ್ದು, ಅಕ್ಕಪಕ್ಕದ ನಿವಾಸಿಗಳಿಗೆ ಹಾನಿಯಾಗದಂತೆ ತೆರವು ಕಾರ್ಯ ಮಾಡಬೇಕಿದೆ.
