Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಿದ್ದೆ ಮಂಪರು: ರಾಯಚೂರಿನಲ್ಲಿ ಸರ್ಕಾರಿ ಬಸ್ ಪಲ್ಟಿ, ಪ್ರಯಾಣಿಕನ ಕಾಲು ಮುರಿತ

Spread the love

ರಾಯಚೂರು: ಸರ್ಕಾರಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕನ (Passenger) ಕಾಲು ಮುರಿದಿದ್ದು, ಬಸ್‌ನಲ್ಲಿದ್ದ 15 ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ರಾಯಚೂರು (Raichur) ನಗರದ ಹೊರವಲಯದ ಸಾಥಮೈಲ್ ಕ್ರಾಸ್ ಬಳಿ ನಡೆದಿದೆ.ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ (Sleeper Coach Bus) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಪಕ್ಕದ ಜಮೀನಿಗೆ ಉರುಳಿದೆ. ಬಸ್‌ನಲ್ಲಿ ಕಾಲು ಸಿಲುಕಿ ನೋವಿನಿಂದ ಒದ್ದಾಡಿದ ಪ್ರಯಾಣಿಕ ವಿಶ್ವನಾಥ್‌ನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಟಿ ಜಿಟಿ ಮಳೆಯಲ್ಲೇ ಕ್ರೇನ್ ಮೂಲಕ ಬಸ್ ಮೇಲೆತ್ತಲಾಗಿದ್ದು, ಉಳಿದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ವಾಣಿವಿಲಾಸ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ – ಸಿಎಂ ಅವ್ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ!


Spread the love
Share:

administrator

Leave a Reply

Your email address will not be published. Required fields are marked *