ಕಾರ್ಕಳ – ಚಾರ್ಜ್ ಗಿಟ್ಟ ಮೊಬೈಲ್ ಸ್ಪೋಟ – ಇಡೀ ಮನೆಗೆ ಬೆಂಕಿ.
ಕಾರ್ಕಳ : ಚಾರ್ಚ್ ಗಿಟ್ಟ ಮೊಬೈಲ್ ಪೋನ್ ಸ್ಸ್ಪೋಟಗೊಂಡ ಪರಿಣಾಮ ಇಡೀ ಮನೆ ಬೆಂಕಿಗಾಹುತಿಯಾದ ಘಟನೆ ತೆಳ್ಳಾರು ರಸ್ತೆಯ 11ನೇ ಕ್ರಾಸ್‌ನ ಮರತ್ತಪ್ಪ ಶೆಟ್ಟಿ ಕಾಲನಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ.


ಮರತ್ತಪ್ಪ ಶೆಟ್ಟಿ ಕಾಲನಿಯ ಕಿಶೋರ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಎರಡು ಅಂತಸ್ತುಗಳ 6 ಕೋಣೆಗಳ ಮನೆಯಲ್ಲಿ ಮುಂಜಾನೆ 4 ಗಂಟೆ ವೇಳೆಗೆ ಅವಘಡ ಸಂಭವಿಸಿದೆ. ಮೊಬೈಲನ್ನು ಸೋಫಾದ ಮೇಲೆ ಇರಿಸಿದ್ದ ಕಾರಣ ಸ್ಫೋಟಗೊಂಡ ಕೂಡಲೇ ಬೆಂಕಿ ಹತ್ತಿಕೊಂಡು ಇಡೀ ಮನೆಯನ್ನು ಆವರಿಸಿತು. ಮಾಹಿತಿ ತಿಳಿದ ತತ್‌ಕ್ಷಣ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿ ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಈ ವೇಳೆ ಮನೆಯಲ್ಲಿ ಎಸಿ ಆನ್ ಇದ್ದುದು ಕೂಡ ಬೆಂಕಿ ವ್ಯಾಪಿಸಲು ಕಾರಣವಾಯಿತು.
ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಎರಡೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಆದರೆ ಅಷ್ಟರಲ್ಲಿ ಟಿವಿ, ಕಿಟಕಿ, ಫ್ಯಾನ್, ಮೊಬೈಲ್, ಇಂಟೀರಿಯರ್, ಸೋಫಾ ಸೇರಿದಂತೆ ವಿವಿಧ ಪೀಠೋಪಕರಣಗಳು ಬೆಂಕಿಗಾಹುತಿಯಾಗಿದೆ. ಸುಮಾರು 7 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ. ಮನೆಯ ಮಾಲಕ ಕಿಶೋರ್ ಕುಮಾರ್ ಶೆಟ್ಟಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.