ಶಾರದಾ ಪೀಠದ ಸ್ವಾಮೀಜಿ ಕೃತ್ಯ: ಚೈತನ್ಯಾನಂದ ಸ್ವಾಮಿಯಿಂದ ಆದ ಕಿರುಕುಳದ ವಿವರಗಳನ್ನು ಬಿಚ್ಚಿಟ್ಟ ಸಂತ್ರಸ್ತ ವಿದ್ಯಾರ್ಥಿನಿಯರು

ನವದೆಹಲಿ: ದೆಹಲಿಯ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ವಾಮಿ ಚೈತನ್ಯಾನಂದ ಸರಸ್ವತಿ (Chaitanyananda Saraswati)ವಿದ್ಯಾ ರ್ಥಿನಿಯರಿಗೆ ನೀಡಿದ ಕಿರುಕುಳದ ಕುರಿತು ಸಂತ್ರಸ್ತೆಯರು ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಸ್ಟೆಲ್ ನಲ್ಲಿ ಗುಪ್ತ ಸಿಸಿಟಿವಿ ಕ್ಯಾಮೆರಾಗಳು, ವಿದ್ಯಾರ್ಥಿನಿಯರಿಗೆ ಅಶ್ಲೀಲ ಪ್ರಶ್ನೆಗಳು, ತಡರಾತ್ರಿಯ ವಾಟ್ಸಾಪ್ ಸಂದೇಶಗಳು ಮತ್ತು ವಿದೇಶ ಪ್ರವಾಸದ ಭರವಸೆ ನೀಡಿ ಶೋಷಣೆ ಸೇರಿದಂತೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

2016 ರಲ್ಲಿ ಚೈತನ್ಯಾನಂದ ಸರಸ್ವತಿ, ಪಾರ್ಥಸಾರಥಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದ ಯುವತಿಯೊಬ್ಬರು, ತಮ್ಮ ಆಘಾತಕಾರಿ ಅನುಭವವನ್ನು ವಿವರಿಸಿದ್ದಾರೆ. ನೈಋತ್ಯ ದೆಹಲಿಯ ವಸಂತ್ ಕುಂಜ್‌ನಲ್ಲಿರುವ ತಮ್ಮ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನಲ್ಲಿ 17 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ 62 ವರ್ಷದ ವ್ಯಕ್ತಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ದೆಹಲಿ ಪೊಲೀಸರು ಅವರನ್ನು ಪತ್ತೆ ಹಚ್ಚುವ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ.
ಘಟನೆಗಳು ನಡೆದಾಗ 20 ವರ್ಷ ವಯಸ್ಸಿನವಳಾಗಿದ್ದ ಆ ಯುವತಿ, 2016 ರಲ್ಲಿ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ತನ್ನ ಸಂಕಷ್ಟವನ್ನು ವಿವರಿಸಿದ್ದಾಳೆ. ಚೈತನ್ಯಾನಂದನ ನಿರಂತರ ಕಿರುಕುಳದಿಂದಾಗಿ ಕೇವಲ ಎಂಟು ತಿಂಗಳ ನಂತರ ತಾನು ಸಂಸ್ಥೆಯಿಂದ ಹೊರಬಂದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ತನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಲ್ಲದೆ, ಬೇಬಿ ಮತ್ತು ಸ್ವೀಟ್ ಗರ್ಲ್ ಮುಂತಾದ ಕೆಟ್ಟ ಪದಗಳಿಂದ ಸಂಬೋಧಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಆಕೆಯ ಹೇಳಿಕೆಯ ಪ್ರಕಾರ, ಇದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಅವಧಿಯಾಗಿತ್ತು. ನಾನು ಸಂಸ್ಥೆಗೆ ಸೇರಿದ ತಕ್ಷಣ, ಸ್ವಾಮಿ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದರು ಎಂದು ಹೇಳಿದ್ದಾಳೆ.
ಮತ್ತಷ್ಟು ಓದಿ: ರಹಸ್ಯ ಕ್ಯಾಮರಾಗಳು, ಅಶ್ಲೀಲ ವಾಟ್ಸಾಪ್ ಚಾಟ್, 300 ಪುಟಗಳ ಪುರಾವೆ, ಸ್ವಾಮಿ ಚೈತನ್ಯಾನಂದ ಮಾಡಿದ್ದೇನೇನು?
ತರಗತಿ ಮುಗಿದ ಮೇಲೆ ಕಚೇರಿಗೆ ಕರೆಯುತ್ತಿದ್ದರು
ಸಂಜೆ 6.30 ಕ್ಕೆ ತರಗತಿಗಳು ಮುಗಿದ ನಂತರ, ನನ್ನನ್ನು ತನ್ನ ಕಚೇರಿಗೆ ಕರೆದು ಕಿರುಕುಳ ನೀಡುತ್ತಿದ್ದರು. ನೀನು ತುಂಬಾ ಪ್ರತಿಭಾನ್ವಿತೆ ಹಾಗಾಗಿ ಎಲ್ಲಾ ವೆಚ್ಚವನ್ನು ಭರಿಸಿ ದುಬೈಗೆ ಅಧ್ಯನಕ್ಕಾಗಿ ಕರೆದೊಯ್ಯುವುದಾಗಿ ಹೇಳಿದ್ದಾಗಿ ಆರೋಪಿಸಿದ್ದಾರೆ.
ನನಗೆ ಇದು ಬೇಕಾಗಿಲ್ಲಎಂದು ಸ್ಪಷ್ಟಪಡಿಸಿದ್ದೆ, ಆದರೆ ಅವರ ಸಿಬ್ಬಂದಿ ನನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದರು. ಬಾಬಾ ನನ್ನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದ ಮತ್ತು ಹಾಸ್ಟೆಲ್‌ನಲ್ಲಿ ಒಬ್ಬಂಟಿಯಾಗಿ ಇರುವಂತೆ ಒತ್ತಾಯಿಸಿದ್ದರು.
ನನಗೆ ಯಾರೊಂದಿಗೂ ಮಾತನಾಡಲು ಅವಕಾಶವಿರಲಿಲ್ಲ. ಅವರು ರಾತ್ರಿಯಲ್ಲಿ ನನ್ನ ಕೋಣೆಯಲ್ಲಿ ಫೋನ್‌ನಲ್ಲಿ ನನಗೆ ಕರೆ ಮಾಡುತ್ತಿದ್ದರು.ನನ್ನ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.ನನ್ನನ್ನು ಹೋಟೆಲ್ಗೆ ಕರೆದುಕೊಂಡು ಹೋಗಿ ಅಲ್ಲಿಯೇ ನನ್ನ ಜತೆ ಉಳಿಯುವ ಬಗ್ಗೆ ಮಾತನಾಡಿದ್ದರು, ಅದು ನನಗೆ ಭಯ ಹುಟ್ಟಿಸಿತ್ತು. ಹಾಗಾಗಿ ತನ್ನೆಲ್ಲಾ ವಸ್ತುಗಳನ್ನು ಬಿಟ್ಟು ಆ ಸಂಸ್ಥೆಯಿಂದ ಓಡಿ ಬಂದೆ ಎಂದು ಯುವತಿ ಹೇಳಿಕೊಂಡಿದ್ದಾರೆ. ಸ್ವಲ್ಪ ದಿನದ ಬಳಿಕ ನನ್ನನ್ನು ಪತ್ತೆ ಹಚ್ಚಿದ್ದರು. ಅವರನ್ನು ನನ್ನ ತಂದೆ ಓಡಿಸಿದ್ದರು.
ಅವರ ವಿರುದ್ಧ 2009 ಮತ್ತು 2016 ರಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಸೂಚಿಸುತ್ತವೆ. ಆ ಪ್ರಕರಣಗಳಲ್ಲಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ತಮ್ಮ ಪ್ರಭಾವವನ್ನು ಬಳಸಿದ್ದಾರೆ ಎಂದು ವರದಿಯಾಗಿದೆ. ಆಗಸ್ಟ್ 2025 ರ ಆರಂಭದಲ್ಲಿ 17 ಮಹಿಳೆಯರು ಸಾಮೂಹಿಕವಾಗಿ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರುಗಳನ್ನು ದಾಖಲಿಸಿದ್ದರು.
ದೆಹಲಿ ಪೊಲೀಸರು ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದಾದ್ಯಂತ ವ್ಯಾಪಕ ದಾಳಿ ನಡೆಸಿದ್ದಾರೆ. ಚೈತನ್ಯಾನಂದ ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಲುಕ್ ಔಟ್ ಹೊರಡಿಸಲಾಗಿದೆ.
ಚೈತನ್ಯಾನಂದ ಸರಸ್ವತಿ ಅವರು ಸಂಸ್ಥೆಯ ಹಾಸ್ಟೆಲ್‌ನ ಬಹುತೇಕ ಮೂಲೆ ಮೂಲೆಗಳಲ್ಲಿ, ಸ್ನಾನಗೃಹಗಳ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ಆರೋಪಿಸಲಾಗಿದೆ .
ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಿದ್ದರು ಚೈತನ್ಯಾನಂದರು ಎಲ್ಲಾ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು ಮತ್ತು ವೈಯಕ್ತಿಕ ಪ್ರಶ್ನೆಗಳನ್ನು ಸಹ ಕೇಳುತ್ತಿದ್ದರು. ವಿದ್ಯಾರ್ಥಿಗಳ ಪ್ರಕಾರ, ಸಿಸಿಟಿವಿ ಕ್ಯಾಮೆರಾಗಳನ್ನು ಭದ್ರತಾ ಉದ್ದೇಶಗಳಿಗಾಗಿ ಅಳವಡಿಸಲಾಗಿತ್ತು, ಆದರೆ ವಾಸ್ತವವಾಗಿ ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡಲು ಬಳಸಲಾಗುತ್ತಿತ್ತು.
ಸ್ವಾಮಿ ತಮ್ಮ ಬಳಿ ಅಶ್ಲೀಲ ಪ್ರಶ್ನೆಗಳನ್ನು ಕೇಳುತ್ತಿದ್ದರು, ಉದಾಹರಣೆಗೆ ಅವರು ಯಾರೊಂದಿಗಾದರೂ ಲೈಂಗಿಕ ಸಂಬಂಧ ಹೊಂದಿದ್ದೀರಾ ಮತ್ತು ಹಾಗಿದ್ದಲ್ಲಿ, ಅವರು ಕಾಂಡೋಮ್ ಬಳಸಿದ್ದಾರೆಯೇ ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಿದ್ದರು. ವಿರೋಧಿಸಿದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಯಿತು. ಅವರ ಹಾಜರಾತಿ ದಾಖಲೆಗಳನ್ನು ಕಡಿತಗೊಳಿಸಲಾಯಿತು, ಅಂಕಗಳನ್ನು ಕಡಿಮೆ ಮಾಡಲಾಯಿತು ಮತ್ತು ಪದವಿಗಳನ್ನು ತಡೆಹಿಡಿಯಲಾಯಿತು.
ಪ್ರಕರಣದ ಎಫ್‌ಐಆರ್‌ನಲ್ಲಿ ಅಸೋಸಿಯೇಟ್ ಡೀನ್ ಸೇರಿದಂತೆ ಮೂವರು ಮಹಿಳಾ ಸಿಬ್ಬಂದಿ ಸದಸ್ಯರ ಹೆಸರೂ ಇದೆ. ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಿದ, ಸಾಕ್ಷ್ಯಗಳನ್ನು ನಾಶಮಾಡುವಂತೆ ಒತ್ತಾಯಿಸಿದ ಮತ್ತು ತಮ್ಮ ಗುರುತನ್ನು ಮರೆಮಾಡಲು ತಮ್ಮ ಹೆಸರುಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ ಆರೋಪ ಅವರ ಮೇಲಿದೆ. ಚೈತನ್ಯಾನಂದ ಸ್ವಾಮಿ ಆಗಸ್ಟ್ನಿಂದ ತಲೆ ಮರೆಸಿಕೊಂಡಿದ್ದಾರೆ.