Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

October 2025 New Rules: ಅಕ್ಟೋಬರ್ 1ರಿಂದ ಜೇಬಿಗೆ ಕತ್ತರಿ? ಯುಪಿಐ, ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ

Spread the love

ನವದೆಹಲಿ: ಮುಂದಿನ ತಿಂಗಳು ಅಕ್ಟೋಬರ್ 1 ರಿಂದ ಕೆಲ ಮಹತ್ವದ ಬದಲಾವಣೆಗಳು ನಡೆಯಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರಬಲ್ಲಂಥವು. ಉದಾಹರಣೆಗೆ, ಪ್ರತಿ ತಿಂಗಳ ಮೊದಲ ತಾರೀಖಿನಂದು ಎಲ್‌ಪಿಜಿ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಇದರ ಬೆಲೆ ಏರಿಳಿತವು ಜನಜೀವನದ ಮೇಲೆ ಬಹಳ ಸಾಮಾನ್ಯ ಪರಿಣಾಮ ಬೀರುತ್ತದೆ. ರೈಲು ಟಿಕೆಟ್​ಗಳಿಂದ ಹಿಡಿದು ಯುಪಿಐವರೆಗೆ ಇನ್ನೂ ಕೆಲ ನಿಯಮ ಬದಲಾವಣೆಗಳು ಅಕ್ಟೋಬರ್​ನಲ್ಲಿವೆ. ಇವೆಲ್ಲವೂ ಕೂಡ ಜನಸಾಮಾನ್ಯರ ಹಣಕಾಸು ಸ್ಥಿತಿಯ ಮೇಲೆ ಪರಿಣಾಮ ಬೀರುವಂಥವು.

2025ರ ಅಕ್ಟೋಬರ್​ನಲ್ಲಿ ಆಗಲಿರುವ ಪ್ರಮುಖ ಹಣಕಾಸು ಬೆಳವಣಿಗೆಗಳು

ಆರ್‌ಬಿಐ ರೆಪೊ ದರ ಪರಿಷ್ಕರಣೆ

ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿ ಸಾಮಾನ್ಯವಾಗಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಆಗಸ್ಟ್​ನಲ್ಲಿ ಎಂಪಿಸಿ ಸಭೆ ನಡೆದಿತ್ತು. ಈಗ ಸೆಪ್ಟೆಂಬರ್ 29ರಂದು ಆರಂಭಗೊಂಡು ಮೂರು ದಿನ ಸಭೆ ನಡೆಯಲಿದ್ದು, ಅಕ್ಟೋಬರ್ 1ರಂದು ಸಭೆಯ ನಿರ್ಧಾರಗಳನ್ನು ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ:

ರೆಪೋ ದರ ಸೇರಿದಂತೆ ವಿವಿಧ ನೀತಿ ನಿರ್ಧಾರಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ. ಫೆಬ್ರುವರಿಯಿಂದ ಸತತವಾಗಿ ರಿಪೋ ದರ ಇಳಿಕೆ ಆಗುತ್ತಿದ್ದ, ಇದು ಅಕ್ಟೋಬರ್​ನಲ್ಲೂ ಮುಂದುವರಿಯುತ್ತದಾ ಎಂಬುದು ಒಂದನೇ ತಾರೀಖು ಗೊತ್ತಾಗುತ್ತದೆ. ಎಸ್​ಬಿಐ ರಿಸರ್ಚ್ ತಂಡವು ಈ ಬಾರಿ 25 ಮೂಲಾಂಕಗಳಷ್ಟು ದರ ಕಡಿತ ಮಾಡಬಹುದು ಎಂದು ಅಂದಾಜು ಮಾಡಿದೆ. ಇನ್ನೂ ಕೆಲ ಆರ್ಥಿಕ ತಜ್ಞರು ಈ ಬಾರಿ ದರ ಕಡಿತ ಮಾಡುವ ಸಾಧ್ಯತೆ ಕಡಿಮೆ ಎನ್ನುವ ತರ್ಕವನ್ನೂ ಮಾಡಿದ್ದಾರೆ. ಅದೇನೇ ಆದರೂ ರಿಪೋ ದರ ಅಥವಾ ಬಡ್ಡಿದರ ಹೆಚ್ಚಳ ಸಾಧ್ಯತೆಯಂತೂ ಸದ್ಯಕ್ಕೆ ಇಲ್ಲ.

UPI ನಲ್ಲಿ ದೊಡ್ಡ ಬದಲಾವಣೆ

ಭಾರತದಲ್ಲಿ ಅತಿಹೆಚ್ಚು ಬಳಕೆಯಾಗುತ್ತಿರುವ ಪೇಮೆಂಟ್ ವಿಧಾನವಾದ ಯುಪಿಐನಲ್ಲಿ ಒಂದು ಪ್ರಮುಖ ನಿಯಮ ಬದಲಾವಣೆ ಅಕ್ಟೋಬರ್​ನಲ್ಲಿ ಆಗಲಿದೆ ಎಂದು ಹೇಳಲಾಗುತ್ತಿದೆ. ಇದು ಯುಪಿಐ ಪಿ2ಪಿ ಸೇವೆಗೆ ಸಂಬಂಧಿಸಿದ್ದಾಗಿದ್ದು, ‘ಕಲೆಕ್ಟ್ ರಿಕ್ವೆಸ್ಟ್’ ಫೀಚರ್ ಅನ್ನು ನಿಲ್ಲಿಸಬಹುದು. ಒಬ್ಬ ಯುಪಿಐ ಬಳಕೆದಾರ ಮತ್ತೊಮ್ಮೆ ಬಳಕೆದಾರರಿಗೆ ಹಣಕ್ಕಾಗಿ ಮನವಿ ಸಲ್ಲಿಸುವ ಕ್ರಮವು ಕಲೆಕ್ಟ್ ರಿಕ್​ವೆಸ್ಟ್. ಈ ವಿಧಾನದ ಮೂಲಕ ಕೆಲವರು ವಂಚನೆ ಎಸಗುತ್ತಿದ್ದರು. ಇದನ್ನು ತಪ್ಪಿಸಲು ಎನ್​ಪಿಸಿಐ ಕಲೆಕ್ಟ್ ರಿಕ್ವೆಸ್ಟ್ ಫೀಚರ್ ಅನ್ನೇ ತೆಗೆದುಹಾಕುತ್ತಿದೆ.

ರೈಲು ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆಗಳು

ಅಕ್ಟೋಬರ್ 1 ರಿಂದ, ಆಧಾರ್ ದೃಢೀಕರಿಸಿದ ಪ್ರಯಾಣಿಕರಿಗೆ ರೈಲ್ವೆ ಆದ್ಯತೆ ನೀಡಲಿದೆ. ಅಂತಹ ಪ್ರಯಾಣಿಕರಿಗೆ ರೈಲ್ವೆ ಟಿಕೆಟ್ ಬುಕಿಂಗ್ ಪ್ರಾರಂಭವಾಗುವ 15 ನಿಮಿಷಗಳ ಮೊದಲು ಆದ್ಯತೆಯ ಪ್ರವೇಶವನ್ನು ನೀಡಲಾಗುವುದು. ಇದರರ್ಥ ಅವರು, ಟಿಕೆಟ್ ಬುಕಿಂಗ್ ಆರಂಭವಾಗಿ ಮೊದಲ 15 ನಿಮಿಷಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಬೇರೆಯವರು 15 ನಿಮಿಷಗಳ ನಂತರ ಬುಕಿಂಗ್ ಮಾಡಬಹುದು.

ಇದನ್ನೂ ಓದಿ:

ಎಲ್‌ಪಿಜಿ ಬೆಲೆಗಳಲ್ಲಿ ಬದಲಾವಣೆ

ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಏಜೆನ್ಸಿಗಳು ಎಲ್‌ಪಿಜಿ ದರಗಳನ್ನು ಪರಿಷ್ಕರಿಸುತ್ತವೆ. ಗ್ಯಾಸ್ ಏಜೆನ್ಸಿಗಳು ಪ್ರತಿ ತಿಂಗಳು ಗೃಹಬಳಕೆ ಮತ್ತು ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ.


Spread the love
Share:

administrator

Leave a Reply

Your email address will not be published. Required fields are marked *