Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಜೆಪಿ ಶಾಸಕ ಸುರೇಶ್ ಕುಮಾರ್ ತಾಯಿ ದೇಹದಾನ: ಸಾವಿನಲ್ಲೂ ಜೀವಂತವಾಗಿದ್ದಾರೆ

Spread the love

ಬೆಂಗಳೂರು: ಮನುಷ್ಯ ಸತ್ತ ನಂತರವೂ ಸಾರ್ಥಕ ಬಾಳು ಬಾಳಬೇಕು ಅಂದರೆ ದೇಹ ಮಣ್ಣು ಮಾಡುವ ಬದಲು ದೇಹದಾನ (Body Donate) ಮಾಡಬೇಕು ಎಂದು ಹೇಳುತ್ತಾರೆ. ಇದೀಗ ಮಾಜಿ ಸಚಿವ, ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್‌ ಕುಮಾರ್​​ (Suresh Kumar) ಅವರ ತಾಯಿ ಸುಶೀಲಮ್ಮ ಅವರ ನೇತ್ರ ಸೇರಿದಂತೆ ದೇಹದಾನ ಮಾಡಲಾಗಿದೆ. ಆ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆಯಲಾಗಿದೆ.

ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್​​ ಅವರ ತಾಯಿ ಸುಶೀಲಮ್ಮ ಅವರು ಸೆಪ್ಟೆಂಬರ್ 23ರಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದರು. ಈ ದುಃಖದ ವಿಚಾರವನ್ನು ಸ್ವತಃ ಸುರೇಶ್ ಕುಮಾರ್ ಅವರು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು.

ಇದೀಗ ಸುಶೀಲಮ್ಮ ಅವರ ನೇತ್ರ ಮತ್ತು ದೇಹದಾನ ಮಾಡಲಾಗಿದೆ. ಈ ಕುರಿತಾಗಿಯೂ ಎಸ್. ಸುರೇಶ್ ಕುಮಾರ್​​ ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಮೊನ್ನೆ ನಮ್ಮನ್ನು ಬಿಟ್ಟು ತೆರಳಿದ ನನ್ನಮ್ಮ, ಸುಶೀಲಮ್ಮ ಟೀಚರ್​​ ಹೆಸರಿಗೆ ಸಿಕ್ಕ ಕೊನೆಯ CERTIFICATES. (ನೇತ್ರದಾನ, ದೇಹದಾನ) ಎಂದು ಬರೆದುಕೊಂಡಿದ್ದಾರೆ.

ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದ ಎಸ್. ಸುರೇಶ್ ಕುಮಾರ್
‘ನನ್ನನ್ನು ಹೊತ್ತು, ಹೆತ್ತು ಸಾಕಿ, ತಿದ್ದಿ ತೀಡಿ ಬೆಳೆಸಿದ ನನ್ನಮ್ಮ, ಎಲ್ಲರ ಸುಶೀಲಮ್ಮ ಟೀಚರ್​ ಇನ್ನಿಲ್ಲ. ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟು ಬಿಟ್ಟರು’ ಎಂದು ತಮ್ಮ ತಾಯಿಯ ಭಾವಚಿತ್ರದೊಂದಿಗೆ ಎಸ್. ಸುರೇಶ್ ಕುಮಾರ್​​ ಅವರು ಭಾವನಾತ್ಮಕ ಪೋಸ್ಟ್​​ ಹಂಚಿಕೊಂಡಿದ್ದರು.

ಇನ್ನು ಶಾಸಕ ಸುರೇಶ್‌ ಕುಮಾರ್​​ ಅವರ ತಾಯಿ ಸುಶೀಲಮ್ಮ ಅವರು ಶಿಕ್ಷಕಿ ಆಗಿದ್ದರು. ಆ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ಚೆಲ್ಲಿದ್ದರು. ಅಷ್ಟೇ ಅಲ್ಲದೆ ಸಮಾಜದಲ್ಲಿ ವಿವಿಧ ಆಯಾಮಗಳಲ್ಲಿ ಅವರು ಗುರುತಿಸಿಕೊಳ್ಳುವುರೊಂದಿಗೆ ಜನಪ್ರಿಯರಾಗಿದ್ದರು.


Spread the love
Share:

administrator

Leave a Reply

Your email address will not be published. Required fields are marked *