Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೇವರ ಮುಂದೆ ಕಳ್ಳತನ: ಪೂಜಾ ತಟ್ಟೆಯಲ್ಲಿದ್ದ 500 ರೂ. ಕದ್ದ ಭೂಪ

Spread the love

ಸುಲಭ ರೀತಿಯಲ್ಲಿ ಹಣ ಮಾಡಲು ದರೋಡೆ, ಕಳ್ಳತನ ಮಾಡುವವರನ್ನು ನೀವು ನೋಡಿರುತ್ತೀರಿ ಅಲ್ವಾ. ಇದಕ್ಕೆ ಸಾಕ್ಷಿ ಎನ್ನುವಂತಹ ಸಾಕಷ್ಟು ಘಟನೆಗಳು ನಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುತ್ತವೆ. ಯುವಕನೊಬ್ಬನು ನೋಡ ನೋಡುತ್ತಿದ್ದಂತೆ ಪೂಜಾ ತಟ್ಟೆಯಲ್ಲಿದ್ದ 500 ರೂಪಾಯಿಯನ್ನು ಎಗರಿಸಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಳ್ಳರು ಎಷ್ಟೇ ಜಾಣತಣದಿಂದ ಕಳ್ಳತನ ಮಾಡಿದರೂ, ಅದೃಷ್ಣ ಕೆಟ್ಟು ಒಂದಲ್ಲಾ ಒಂದು ದಿನ ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗೆ ಕಳ್ಳತನ (Theft) ಮಾಡಲು ಹೋಗಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದು, ವದೆ ತಿಂದ ಘಟನೆಗಳು ನಮ್ಮ ಸುತ್ತಮುತ್ತಲಿನಲ್ಲಿ ನಡೆದಿವೆ. ಆದರೆ ಕೆಲವರು ನೋಡ ನೋಡುತ್ತಿದ್ದಂತೆ ಕಳ್ಳತನ ಮಾಡಿ ಏನು ಆಗಿಲ್ಲ ಎನ್ನುವಂತೆ ವರ್ತಿಸುತ್ತಾರೆ. ಆದರೆ ಇಲ್ಲೊಬ್ಬ ಯುವಕನು (Young man) ಅಂಗಡಿಯ ಕೌಂಟರ್‌ನಲ್ಲಿಟ್ಟಿದ್ದ ಪೂಜಾ ತಟ್ಟೆಯಲ್ಲಿಟ್ಟಿದ್ದ 500 ರೂ ನೋಟನ್ನು ಎಗರಿಸಿದ್ದಾನೆ. ಯಾರೋ ತಾನು ಈ ಕೃತ್ಯ ಮಾಡಿರುವುದನ್ನು ಗಮನಿಸಿಲ್ಲ ಎಂದುಕೊಂಡಿದ್ದಾನೆ. ಆದರೆ ಸಿಸಿಟಿವಿಯಲ್ಲಿ ಈ ದೃಶ್ಯವು ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಯುವಕನೊಬ್ಬನು ಕಳ್ಳತನ ಮಾಡುವ ವಿಡಿಯೋ ವೈರಲ್ ಆಗುತ್ತಿದ್ದು, ಬಳಕೆದಾರರು ಗ್ರಹಚಾರ ಕೆಟ್ಟರೆ ಹೀಗೆ ಆಗೋದು ಎಂದಿದ್ದಾರೆ.

ಘರ್‌ ಕೆ ಕಲೇಶ್‌ (GharKeKalesh) ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಅಂಗಡಿಯ ಕೌಂಟರ್‌ನ ಒಂದು ಬದಿಯಲ್ಲಿ ಪೂಜಾ ತಟ್ಟೆಯಿದೆ. ಅದರಲ್ಲಿ ಐನ್ನೂರು ರೂಪಾಯಿ ಇರುವುದನ್ನು ಗಮನಿಸಬಹುದು. ಕೌಂಟರ್‌ನಲ್ಲಿ ಕುಳಿತಿದ್ದ ಯುವತಿಯೊಬ್ಬಳು ಅಂಗಡಿಯೊಳಗೆ ಬಂದ ಜನರೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾಳೆ. ಇತ್ತ ವಾಚ್ ಮ್ಯಾನ್ ಕೂಡ ಅಲ್ಲೇ ನಿಂತಿರುತ್ತಾಳೆ. ಮತ್ತೊರ್ವ ಯುವತಿಯೊಬ್ಬಳು ಫೋನ್‌ನಲ್ಲಿ ಯರೊಂದಿಗೋ ಮಾತನಾಡುವುದರಲ್ಲಿ ಬ್ಯುಸಿಯಾಗಿದ್ದಾಳೆ. ಈ ವೇಳೆ ಕೌಂಟರ್‌ನಲ್ಲಿ ನಿಂತಿದ್ದ ಒಬ್ಬ ಯುವಕನ ಕಣ್ಣು ಪೂಜಾ ತಟ್ಟೆಯಿಲ್ಲಿಂದ 500 ರೂಪಾಯಿ ನೋಟಿನತ್ತ ಹೋಗುತ್ತದೆ. ಯುವಕನು ಯಾರಿಗೂ ತಿಳಿಯದ್ದಂತೆ 500 ರೂ ಎಗರಿಸುತ್ತಾನೆ. ಈ ಕೃತ್ಯ ಮಾಡಿದ ಬಳಿಕ ಈ ಯುವಕನು ಅಂಗಡಿಯಿಂದ ಹೊರಗೆ ಹೋಗುವುದನ್ನು ನೋಡಬಹುದು. ಕಳ್ಳತನ ಕಣ್ಣ ಮುಂದೆಯೇ ನಡೆದರೂ ಕೂಡ ಯಾರು ಇದನ್ನು ಗಮನಿಸುವುದಿಲ್ಲ.


Spread the love
Share:

administrator

Leave a Reply

Your email address will not be published. Required fields are marked *