ಶಾರುಖ್ ಖಾನ್ ಅವರಂತೆ ಆರ್ಯನ್: ತಂದೆಯ ಎಷ್ಟೆಲ್ಲ ವಿಚಾರಗಳು ಮಗನಿಗೆ ಹೋಲುತ್ತವೆ ಗೊತ್ತಾ?

ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ತಮ್ಮ ನಿರ್ದೇಶನದ ಮೂಲಕ ಗಮನ ಸೆಳೆದಿದ್ದಾರೆ. ಅವರ ನೋಟ ಮತ್ತು ಧ್ವನಿಯಲ್ಲಿ ಶಾರುಖ್ ಅವರೊಂದಿಗಿನ ಹೋಲಿಕೆ ಅನೇಕರನ್ನು ಆಕರ್ಷಿಸಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಆರ್ಯನ್ ಭವಿಷ್ಯದಲ್ಲಿ ನಟನೆಯಲ್ಲಿಯೂ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿದೆ

ಶಾರುಖ್ ಖಾನ್ (Shah Rukh Kahn) ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರು ಬಾಲಿವುಡ್ನ ಬಾದ್ಶಾ ಆಗಿದ್ದಾರೆ. ಅವರ ಖ್ಯಾತಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಇದೆ. ಅವರ ಆಸ್ತಿ ಏಳು ಸಾವಿರ ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರಿಗೆ ಮೂವರು ಮಕ್ಕಳು. ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಬ್ರಾಮ್. ಆರ್ಯನ್ ಖಾನ್ ನೋಡಿದ ಅನೇಕರು ಶಾರುಖ್ ಖಾನ್ ಅವರ ಪಡಿ ಅಚ್ಚು ಎಂದು ಕರೆದಿದ್ದಾರೆ. ಅದಕ್ಕೆ ಕಾರಣವೂ ಇದೆ.
ಸೈಫ್ ಅಲಿ ಖಾನ್ ಮಗ ನೋಡಲು ಸೇಮ್ ಟು ಸೇಮ್ ಸೈಫ್ ಅಲಿ ಖಾನ್ ರೀತಿಯೇ ಇದ್ದಾರೆ. ಇದು ಅನೇಕರಿಗೆ ಅನಿಸಿದೆ. ಆರ್ಯನ್ ಖಾನ್ ಕೂಡ ಹಾಗೆಯೇ ಇದ್ದಾರೆ. ಆರ್ಯನ್ ‘ಬ್ಯಾಡ್ಸ್ ಆಫ್ ಬಾಲಿವುಡ್’ ಹೆಸರಿನ ವೆಬ್ ಸರಣಿ ನಿರ್ದೇಶನ ಮಾಡಿದ್ದಾರೆ. ಈ ಸರಣಿ ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಂಡಿದೆ. ಇದಾದ ಬಳಿಕ ಆರ್ಯನ್ ಜನಪ್ರಿಯತೆ ಹೆಚ್ಚಾಗಿದೆ.
ಟ್ರೇಲರ್ ಲಾಂಚ್ ಈವೆಂಟ್ ವೇಳೆ ಆರ್ಯನ್ ಖಾನ್ ಮಾತನಾಡುತ್ತಿದ್ದರು. ಇದನ್ನು ನೋಡಿದ ಅನೇಕರಿಗೆ ಆರ್ಯನ್ ಧ್ವನಿ ಹಾಗೂ ಶಾರುಖ್ ಖಾನ್ ಧ್ವನಿ ಒಂದೇ ರೀತಿ ಎನಿಸಿದೆ. ಇಬ್ಬರ ಮಧ್ಯೆ ಮುಖದ ಹೋಲಿಕೆ ಕೂಡ ಒಂದೇ ರೀತಿ ಇದೆ. ಇಷ್ಟೇ ಅಲ್ಲ, ಶಾರುಖ್ ಖಾನ್ ಅವರು ನಡೆದುಕೊಳ್ಳುವ ರೀತಿಗೂ ಆರ್ಯನ್ ಖಾನ್ ನಡೆದುಕೊಳ್ಳುವ ರೀತಿಗೂ ಸಾಮ್ಯತೆ ಇದೆ