Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

‘ಕಾಂತಾರ: ಚಾಪ್ಟರ್ 1’ರಲ್ಲಿ ಇದ್ದಾರೆ ಕನ್ನಡದ ಈ ಹಿರಿಯ ಕಲಾವಿದ; ಸೆನ್ಸಾರ್​ ಸರ್ಟಿಫಿಕೇಟ್​ ಬಹಿರಂಗಪಡಿಸಿತು ಸತ್ಯ

Spread the love

‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾದ ಪಾತ್ರವರ್ಗದ ಬಗ್ಗೆ ರಿಷಬ್ ಶೆಟ್ಟಿ ಸಾಕಷ್ಟು ಗುಟ್ಟು ಕಾಯ್ದುಕೊಂಡು ಬಂದಿದ್ದರು. ಟ್ರೇಲರ್ ರಿಲೀಸ್ ಸಮೀಪಿಸಿದ ಬಳಿಕ ಒಂದೊಂದಾಗೇ ಪಾತ್ರಗಳ ಅನಾವರಣ ಆಗುತ್ತಾ ಬಂತು. ‘ಕಾಂತಾರ’ ಸಿನಿಮಾದಲ್ಲಿ ನಟಿಸಿದ್ದ ಅನೇಕ ಕಲಾವಿದರು ಈ ಚಿತ್ರದ ಭಾಗ ಕೂಡ ಆಗಿದ್ದಾರೆ. ಈಗ ಸಿನಿಮಾದಲ್ಲಿ ಓರ್ವ ಪ್ರಮುಖ ಕಲಾವಿದ ನಟಿಸಿರೋ ವಿಷಯ ರಿವೀಲ್ ಆಗಿದೆ. ಅದುವೇ ಅಚ್ಯುತ್ ಕುಮಾರ್. ಈ ವಿಷಯ ಅನೇಕರಿಗೆ ಅಚ್ಚರಿ ಮೂಡಿಸಿದೆ.

‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಕಥೆ ಸಾಗೋದು 4ನೇ ಶತಮಾನದ ಸಂದರ್ಭದಲ್ಲಿ. ಈ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ‘ಕಾಂತಾರ’ ಸಿನಿಮಾದಲ್ಲಿ ನಟಿಸಿದ್ದ ಪ್ರಕಾಶ್ ತುಮಿನಾಡ್ ಹಾಗೂ ಪ್ರಮೋದ್ ಶೆಟ್ಟಿ ‘ಕಾಂತಾರ: ಚಾಪ್ಟರ್ 1’ ಟ್ರೇಲರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಅಚ್ಯುತ್ ಕುಮಾರ್ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ‘ಕಾಂತಾರ’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಸೆನ್ಸಾರ್ ಪ್ರಮಾಣ ಪತ್ರದ ಫೋಟೋ ವೈರಲ್ ಆಗಿದೆ. ಚಿತ್ರಕ್ಕೆ ‘ಯುಎ 16+’ ಪ್ರಮಾಣ ಪತ್ರ ಸಿಕ್ಕಿದೆ. ಅಂದರೆ, 16 ವರ್ಷಕ್ಕಿಂತ ಕೆಳಗಿನವರು ಈ ಚಿತ್ರವನ್ನು ಪಾಲಕರ ಜೊತೆ ವೀಕ್ಷಿಸಬಹುದು. ಉಳಿದಂತೆ 16 ವರ್ಷ ಮೇಲ್ಪಟ್ಟವರು ಸಿನಿಮಾ ನೋಡಲು ಯಾವುದೇ ತೊಂದರೆ ಇಲ್ಲ ಎಂದರ್ಥ.

ಸೆನ್ಸಾರ್ ಪ್ರಮಾಣಪತ್ರದಲ್ಲಿ ಪ್ರಮುಖ ಪಾತ್ರಧಾರಿಗಳ ಹೆಸರು ಉಲ್ಲೇಖ ಆಗಿದೆ. ಇದರಲ್ಲಿ ಅಚ್ಯುತ್ ಕುಮಾರ್ ಹೆಸರು ಕೂಡ ಇದೆ. ಈ ಮೂಲಕ ಅವರು ಕೂಡ ಈ ಸಿನಿಮಾದಲ್ಲಿ ನಟಿಸಿರೋದು ಪಕ್ಕಾ ಎನ್ನಲಾಗುತ್ತಿದೆ. ದೀಪಕ್ ರೈ ಪಣಜೆ ಕೂಡ ಚಿತ್ರದಲ್ಲಿ ಇದ್ದಾರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಅಂದರೆ ಅಕ್ಟೋಬರ್ 1ರಂದು ಚಿತ್ರದ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *