ಪೊದೆಯೊಳಗೆ ಹೋಗುತ್ತಿದ್ದ ಹೆಬ್ಬಾವಿಗೆ ಮಾರಣಾಂತಿಕವಾಗಿ ಥಳಿಸಿದ ವ್ಯಕ್ತಿ

ಹೈದರಾಬಾದ್: ಜನನಿಬಿಡ ರಸ್ತೆಯಲ್ಲಿ ಹೆಬ್ಬಾವಿನ ದರ್ಶನವಾಗಿತ್ತು. ಎಲ್ಲರೂ ಅದನ್ನು ನೋಡಿ ನಿಬ್ಬೆರಗಾಗಿ ನಿಂತಿದ್ದರು. ಅದು ಪೊದೆಯನ್ನು ಹುಡುಕಿ ಅದರೊಳಗೆ ಹೋಗಲು ಯತ್ನಿಸುತ್ತಿತ್ತು. ಆಗ ವ್ಯಕ್ತಿಯೊಬ್ಬ ಅದರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಕೋಲು ಹಾಗೂ ಕಲ್ಲಿನಿಂದ ಅದರ ಮೇಲೆ ಹಲ್ಲೆ ನಡೆಸಲಾಗಿದೆ. ಹಾವು ಹೆಚ್ಚು ಗಾಯಗೊಂಡಿದೆಯೇ ಅಥವಾ ಅದು ಅಪಾಯದಿಂದ ಪಾರಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಹಾವು ಇರುವ ಬಗ್ಗೆ ಸ್ಥಳೀಯರು ಹಲವಾರು ಬಾರಿ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲವು ದಿನಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ಹೆಬ್ಬಾವು ಕಾಣಿಸಿಕೊಂಡಿತ್ತು.
