ಪ್ರಧಾನಿ ಮೋದಿಯವರ ಧ್ವಜಾರೋಹಣ ತಡೆಯಲು ಬಹುಮಾನ: ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ವಿರುದ್ಧ NIA ಪ್ರಕರಣ ದಾಖಲು

ನವದೆಹಲಿ: ಸ್ವಾತಂತ್ರ‍್ಯ ದಿನದಿಂದು (Independence day) ಪ್ರಧಾನಿ ನರೇಂದ್ರ ಮೋದಿ (Narendra Modi) ರಾಷ್ಟ್ರಧ್ವಜ ಹಾರಿಸುವುದನ್ನ ತಡೆಯಲು ಬಹುಮಾನ ಘೋಷಿಸಿದ್ದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ವಿರುದ್ಧ ಎನ್‌ಐಎ (NIA) ಪ್ರಕರಣ ದಾಖಲಿಸಿಕೊಂಡಿದೆ.

ಆಗಸ್ಟ್ 10 ರಂದು ಲಾಹೋರ್‌ನ ಪ್ರೆಸ್ ಕ್ಲಬ್‌ನಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪನ್ನುನ್ ಪ್ರಚೋದನಕಾರಿ ಘೋಷಣೆ ಮಾಡಿದ್ದ. ಆ.15 ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿ ತ್ರಿವರ್ಣ ಧ್ವಜ ಹಾರಿಸುವುದನ್ನು ತಡೆಯುವ ಸಿಖ್ಖ್ ಸೈನಿಕರಿಗೆ 11 ಕೋಟಿ ರೂ. ಬಹುಮಾನ ಘೋಷಣೆ ಮಾಡಿದ್ದ.
ಸದ್ಯ ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಭಾರತದ ವಿರುದ್ಧ ಸಿಖ್ಖರಲ್ಲಿ ಅಸಮಾಧಾನ ಹರಡಿದ್ದಕ್ಕಾಗಿ ಪನ್ನುನ್ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿದೆ.
ಪನ್ನುನ್ ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್‌ನ ಪ್ರಮುಖ ನಾಯಕನಾಗಿದ್ದು, ಈ ಹಿಂದೆ ಏರ್ ಇಂಡಿಯಾ ಪ್ರಯಾಣಿಕರಿಗೆ ಬೆದರಿಕೆ ಹಾಕುವ ವೀಡಿಯೋ ಸಂದೇಶಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಎನ್‌ಐಎ ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿತ್ತು.
