Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಭಾರತೀಯ ಚಿತ್ರರಂಗದ ಉತ್ತಮ ಸಾಧನೆಗೆ ಗೌರವ

Spread the love

71ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭವು ದೆಹಲಿಯ ವಿಜ್ಞಾನ್ ಭವನ್​ನಲ್ಲಿ ಇಂದು (ಸೆಪ್ಟೆಂಬರ್ 23) ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವಾರ್ಡ್​ನ ನೀಡಲಿದ್ದಾರೆ. ಸಂಜೆ 4 ಗಂಟಗೆ ಕಾರ್ಯಕ್ರಮ ಆರಂಭ ಆಗಲಿದೆ. ಶಾರುಖ್ ಖಾನ್ ಅವರು ಇದೇ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆಯಲಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಶಾರುಖ್ ಖಾನ್ ಹಾಗೂ ವಿಕ್ರಾಂತ್ ಮಾಸಿ ಅವರಿಗೆ ಈ ಬಾರಿ ಅತ್ಯುತ್ತಮ ನಟ ಅವಾರ್ಡ್ ಸಿಕ್ಕಿದೆ. ಶಾರುಖ್ ಖಾನ್ ಅವರು ‘ಜವಾನ್’ ಸಿನಿಮಾಗಾಗಿ, ವಿಕ್ರಾಂತ್ ಅವರು ‘12th ಫೇಲ್’ ಚಿತ್ರದ ನಟನೆಗೆ ಈ ಅವಾರ್ಡ್ ಪಡೆದಿದ್ದಾರೆ. ರಾಣಿ ಮುಖರ್ಜಿ ಅವರು ‘Mrs ಚಟರ್ಜಿ vs ನಾರ್ವೇ’ ಸಿನಿಮಾದ ನಟನೆಗೆ ಈ ಅವಾರ್ಡ್ ಪಡೆದರು.

ಮೋಹನ್ ಲಾಲ್ ಅವರು ದಾದಾ ಸಾಹೇಬ್ ಫಾಲ್ಕೆ ಅವಾರ್ಡ್​ನ ಪಡೆದಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಅವಾರ್ಡ್ ನೀಡಲಾಗುತ್ತಿದೆ. ಅವರು ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಕಾಲದಿಂದ ಇದ್ದಾರೆ. ಇತ್ತೀಚೆಗೆ ಅವರಿಗೆ ಅವಾರ್ಡ್ ಘೋಷಣೆ ಮಾಡಲಾಗಿದೆ.

71ನೇ ಸಾಲಿನ ರಾಷ್ಟ್ರ ಪ್ರಶಸ್ತಿ ಪಡೆದವರ ಪಟ್ಟಿ

  • ಅತ್ಯುತ್ತಮ ನಟ – ಶಾರುಖ್ ಖಾನ್ (ಜವಾನ್) ಮತ್ತು ವಿಕ್ರಾಂತ್ ಮಾಸಿ (12th ಫೇಲ್)
  • ಅತ್ಯುತ್ತಮ ನಟಿ – ರಾಣಿ ಮುಖರ್ಜಿ (Mrs ಚಟರ್ಜಿ vs ನಾರ್ವೆ)
  • ಅತ್ಯುತ್ತಮ ಹಿಂದಿ ಚಿತ್ರ- ಕಥಲ್
  • ಅತ್ಯುತ್ತಮ ಫೀಚರ್ ಫಿಲ್ಮ್:  ‘12th ಫೇಲ್’
  • ಅತ್ಯುತ್ತಮ ಕನ್ನಡ ಚಿತ್ರ – ‘ದಿ ರೇ ಆಫ್ ಹೋಪ್’
  • ಅತ್ಯುತ್ತಮ ಗಾಯಕಿ- ಶಿಲ್ಪಾ ರಾವ್ (ಜವಾನ್ ಕೆ ಚಲೇಯಾ)
  • ಅತ್ಯುತ್ತಮ ಗಾಯಕ – ಪಿವಿಎನ್​ಎಸ್ ರೋಹಿತ್ (ಬೇಬಿ, ತೆಲುಗು)
  • ಅತ್ಯುತ್ತಮ ಛಾಯಾಗ್ರಹಣ – ದಿ ಕೇರಳ ಸ್ಟೋರಿ
  • ಅತ್ಯುತ್ತಮ ನೃತ್ಯ ಸಂಯೋಜನೆ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ದಿಂಡೋರಾ ಬಜೆ ರೇ)
  • ಅತ್ಯುತ್ತಮ ಮೇಕಪ್ ಮತ್ತು ಕಾಸ್ಟ್ಯೂಮ್ ಡಿಸೈನರ್ – ಸ್ಯಾಮ್ ಬಹದ್ದೂರ್
  • ವಿಶೇಷ ಉಲ್ಲೇಖ: ಅನಿಮಲ್ (ರೀ-ರೆಕಾರ್ಡಿಂಗ್ ಮಿಕ್ಸರ್) ಎಂ.ಆರ್.ರಾಜಕೃಷ್ಣನ್
  • ಅತ್ಯುತ್ತಮ ಧ್ವನಿ ವಿನ್ಯಾಸ – ಅನಿಮಲ್ (ಹಿಂದಿ)
  • ಅತ್ಯುತ್ತಮ ನಿರ್ದೇಶನ – ಕೇರಳ ಸ್ಟೋರಿ (ಸುದೀಪ್ತೋ ಸೇನ್)
  • ಅತ್ಯುತ್ತಮ ಜನಪ್ರಿಯ ಚಿತ್ರ – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
  • ಅತ್ಯುತ್ತಮ ತೆಲುಗು ಚಿತ್ರ – ಭಗವಂತ ಕೇಸರಿ
  • ಅತ್ಯುತ್ತಮ ಗುಜರಾತಿ ಚಿತ್ರ – ವಾಶ್
  • ಅತ್ಯುತ್ತಮ ತಮಿಳು ಚಲನಚಿತ್ರ – ಪಾರ್ಕಿಂಗ್

Spread the love
Share:

administrator

Leave a Reply

Your email address will not be published. Required fields are marked *