ಪೊಲೀಸ್ ಜೀಪ್ ಮೇಲೆ ಕುಳಿತು ರಂಪಾಟ: ಪ್ರೇಮಿಗಳ ಹೈಡ್ರಾಮಾ; ಯುವಕನ ಬಂಧನ

ರಾಜಸ್ತಾನ: ನಾವು ವಿದ್ಯಾವಂತರೆನಿಸಿಕೊಳ್ಳುತ್ತಿದ್ದಂತೆ ನಮ್ಮ ವ್ಯಕ್ತಿತ್ವ, ನಡವಳಿಕೆಗಳು ತೀರಾ ಕೆಳಮಟ್ಟಕ್ಕೆ ತಲುಪುತ್ತಿದೆ. ಈಗಿನ ಕಾಲದಲ್ಲಿ ಯುವಕ ಯುವತಿಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕೋ ಎನ್ನುವುದೇ ತಿಳಿದಿಲ್ಲ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು, ಪ್ರೇಮಿಗಳಿಬ್ಬರೂ ಪೊಲೀಸ್ ಜೀಪ್ ಮೇಲೇರಿ ರಂಪಾಟ ಮಾಡಿದ್ದಾರೆ. 22 ವರ್ಷದ ಆ ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ ಎಂದು ವರದಿಯಾಗಿದೆ. ರಾಜಸ್ಥಾನದ ಕೋಟಾದಲ್ಲಿ (Kota of Rajasthan) ಈ ಘಟನೆ ನಡೆದಿದ್ದು, ಪ್ರೇಮಿಗಳಿಬ್ಬರ ಹೈ ಡ್ರಾಮಾವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸೆಪ್ಟೆಂಬರ್ 19 ರಂದು ರಾಂಪುರ ಪ್ರದೇಶದಲ್ಲಿ ಓಡಿಹೋಗಲು ಯತ್ನಿಸುತ್ತಿದ್ದ ಜೋಡಿಯನ್ನು ಬಂಧಿಸಲು ಪೊಲೀಸರು ಪ್ರಯತ್ನಿಸಿದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ನಾಪತ್ತೆ ಪ್ರಕರಣ ದಾಖಲಾದ ಬಳಿಕ ಈ ನಾಟಕೀಯ ಘಟನೆಯೂ ನಡೆಯಿತು. 17 ವರ್ಷದ ಅಪ್ರಾಪ್ತ ಬಾಲಕಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು, ಇದರಿಂದಾಗಿ ಆಕೆಯ ಕುಟುಂಬವು ಕೋಟಾದ ಹೊರವಲಯದಲ್ಲಿರುವ ನಾಂಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಹತ್ತಿರದ ರಾಂಪುರ ಪೊಲೀಸ್ ಠಾಣೆಯ ಅಧಿಕಾರಿಗಳು, ಸುಳಿವು ಸಿಕ್ಕೊಡನೆ ರಾಂಪುರ ನೆರೆಹೊರೆಯಲ್ಲಿ ಇಬ್ಬರ ಹುಡುಕಾಟ ನಡೆಸಿದ್ದು, ಈ ವೇಳೆ 22 ವರ್ಷದ ಯುವಕ ಹಾಗೂ ಅಪ್ರಾಪ್ತ ಬಾಲಕಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಪೊಲೀಸರು ಈ ಜೋಡಿಯನ್ನು ಬಂಧಿಸುತ್ತಿದ್ದಂತೆ, ಪೊಲೀಸ್ ಜೀಪಿನಲ್ಲಿ ಕುಳಿತುಕೊಳ್ಳುವ ವಾಹನದ ಮೇಲೆ ಹತ್ತಿ ರಂಪಾಟ ಸೃಷ್ಟಿಸಿದ್ದು, ಹತ್ತು ನಿಮಿಗಳ ಕಾಲ ಈ ನಾಟಕೀಯ ದೃಶ್ಯ ಮುಂದವರೆಯಿತು. ನಂತರದಲ್ಲಿ ಪೊಲೀಸರು ದಂಪತಿಯನ್ನು ಕೆಳಗಿಳಿಸಿ ಯುವಕನನ್ನು ಬಂಧಿಸಿದರು. ಪೊಲೀಸ್ ವಾಹನದ ಮೇಲೆ ಹತ್ತಿ ಅವ್ಯವಸ್ಥೆ ಸೃಷ್ಟಿಸಿದ್ದಕ್ಕಾಗಿ 22 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹುಡುಗಿ ಅಪ್ರಾಪ್ತ ವಯಸ್ಕಳು ಎಂದು ವರದಿಯಾಗಿದೆ.
@nshuklain ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ 17 ವರ್ಷದ ಬಾಲಕಿ ಪೊಲೀಸ್ ಜೀಪಿನ ಮೇಲಿದ್ದ ಆ ಯುವಕನನ್ನು ಕೆಳಗಿಳಿಸುವುದಾಗಿ ಪೊಲೀಸರಿಗೆ ಹೇಳುತ್ತಿರುವುದನ್ನು ಕಾಣಬಹುದು. ಇತ್ತ ತನ್ನನ್ನು ಮತ್ತು 22 ವರ್ಷದ ಯುವಕನನ್ನು ಬಂಧಿಸಬೇಡಿ ಎಂದು ಬೇಡಿ ಕೊಳ್ಳುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ಮೂವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದು ಕೊಂಡಿದ್ದು, ಒಬ್ಬ ಬಳಕೆದಾರ ನಮ್ಮ ದೇಶದ ಪರಿಸ್ಥಿತಿ ಇದು. ಇಂದಿನ ಯುವಕ ಯುವತಿಯರಿಗೆ ಸಂಸ್ಕಾರ ಅನ್ನೋದೇ ಇಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇಂತಹ ಹುಚ್ಚಾಟಗಳಿಗೆ ಕೊನೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆ ದಾರ ಈ ರೀತಿ ದುರ್ವತನೆ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.
