ಮಂಗಳೂರು : ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ಅಪರಾಧಿಗೆ 1 ವರ್ಷ ಸಜೆ, 10 ಸಾವಿರ ರೂ. ದಂಡ.
ಮಂಗಳೂರು: ಐಟಿಐ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ (ಪೋಕ್ಸೋ-ಎಫ್ಟಿಎಸ್ಸಿ-1) ಅಪರಾಧಿಗೆ 1 ವರ್ಷ ಸಾದಾ ಜೈಲು ಮತ್ತು 10ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ಸಜಿಪನಡು ಕಂಚಿನಡ್ಕ ನಿವಾಸಿ ಜಮಾಲ್ (24) ಶಿಕ್ಷೆಗೊಳಗಾದಾತ.ಜಮಾಲ್ ಬೆಳ್ತಂಗಡಿಯಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ. 2024ರ ಅ. 5ರಂದು ವಿದ್ಯಾರ್ಥಿನಿ ಬೆಳ್ತಂಗಡಿಯ ಐಟಿಐ ಕಾಲೇಜೊಂದಕ್ಕೆ ತನ್ನ ಸಂಬಂಧಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಅ. 10ರಂದು ಬೆಳಗ್ಗೆ 7.45ರ ಸುಮಾರಿಗೆ ಮತ್ತೆ ಬೈಕ್ನಲ್ಲಿ ಹಿಂಬಾಲಿಸಿಕೊಂಡು ಬಂದ ಆತ ಅಪ್ರಾಪ್ತ ವಯಸ್ಸಿನ ಬಾಲಕಿ ಸೇರಿದಂತೆ ಇಬ್ಬರಿಗೂ ಬೈಕ್ ತಾಗಿಸಿಕೊಂಡು ಚಲಾಯಿಸಿದ್ದಾನೆ. “ನಿನ್ನನ್ನು ಕಾಲೇಜು ವರೆಗೆ ಬಿಡಬೇಕಾ? ನಿನ್ನ ಮೊಬೈಲ್ ನಂಬರ್ ನನಗೆ ಕೊಡು’ ಎಂದು ಕೇಳಿದ್ದಾನೆ. ಅ. 15ರಂದು ಬೆಳಗ್ಗೆ 7.45ಕ್ಕೆ ಮತ್ತೆ ಬೈಕ್ನಲ್ಲಿ ಬಂದು ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ.
