ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸ್ ಜೊತೆಗೆ ಗಲಾಟೆ; ಮಂಗಳೂರಿನಲ್ಲಿ ಸ್ಕೂಟರ್ ಸವಾರನ ರಂಪಾಟ

ಮಂಗಳೂರು : ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಪಾದಚಾರಿಗೆ ಗಳಿಗೆ ರಸ್ತೆ ದಾಟಲು ಅವಕಾಶ ನೀಡುವ ವೇಳೆ ಏಕಾಏಕಿ ಸ್ಕೂಟರ್ ಸವಾರನೊಬ್ಬ ನುಗ್ಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಲ್ಲದೆ , ಬಳಿಕ ಬಂದು ಪೊಲೀಸ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ ಘಟನೆ ನಿನ್ನೆ ಮಂಗಳೂರು ನಗರದಲ್ಲಿ ನಡೆದಿದ್ದು, ಈ ಸಂಬಂಧಿತ ವೀಡಿಯೋ ವೈರಲ್ ಆಗಿದೆ.

ಬಲ್ಮಠ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಸಿಬಂದಿ ಪಾದಚಾರಿಗಳಿಗೆ ರಸ್ತೆ ದಾಟಲು ಅವಕಾಶ ಕಲ್ಪಿಸಲು ವಾಹನಗಳನ್ನು ನಿಲ್ಲಿಸಿದ್ದಾರೆ. ಈ ವೇಳೆ ಸ್ಕೂಟರ್ ಸವಾರನೊಬ್ಬ ಸ್ಕೂಟರ್ ನಿಲ್ಲಿಸದೆ ನುಗ್ಗಿಸಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ಆತನನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಸ್ಕೂಟರ್ ಸವಾರ ಮುಂದೆ ಹೋಗಿ ಗಾಡಿ ನಿಲ್ಲಿಸಿ ವಾಪಸ್ ಬಂದು ಪೊಲೀಸ್ ಸಿಬ್ಬಂದಿಯ ಜೊತೆ ಗಲಾಟೆಗೆ ನಿಂತಿದ್ದಾನೆ.
