ತಾಯಿಯ ಚಿಕಿತ್ಸೆಗೆ ಬಂದಿದ್ದ ಯುವಕ ಆಸ್ಪತ್ರೆಯಲ್ಲೇ ಆತ್ಮಹತ್ಯೆ

ಶಿವಮೊಗ್ಗ : ತಾಯಿಯನ್ನು ಮೆಗ್ಗಾನ್ ಆಸ್ಪತೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದ ಯುವಕ ಆಸ್ಪತ್ರೆ ಆವರಣದಲ್ಲೇ ಆತ್ಮಹ * ತ್ಯೆ ಮಾಡಿಕೊಂಡ ಘಟನೆ ಮಂಗಳವಾರ ( ಸೆ . 16 ) ಮುಂಜಾನೆ ನಡೆದಿದೆ .

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಸುರಹೊನ್ನೆಯ ಆಕಾಶ್ (30) ಆತ್ಮಹತ್ಯೆಮಾಡಿಕೊಂಡ ಯುವಕ .
ಆಸ್ಪತ್ರೆಯ ಆವರಣದಲ್ಲಿರುವ ಮಾರ್ಗಸೂಚಿ ಬೋರ್ಡಿಗೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ . ಮೂರು ದಿನದಿಂದ ಆಸ್ಪತೆಯಲ್ಲಿ ತಾಯಿ ಜೊತೆ ಇದ್ದ ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ .
ದೊಡ್ಡ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ .