ವೀರಾಜಪೇಟೆ: ಕಳ್ಳತನ ಮಾಡಿದ ಹಸುವಿನ ಸಮೇತ ಮೂವರು ಸೆರೆ

ಮಡಿಕೇರಿ: ವೀರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ನಿವಾಸಿ ಬೊಳ್ಳಪಂಡ ಎಂ. ಭೀಮಯ್ಯ ಅವರ ಹಸುವನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ವೀರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೊಡಗಿನ ವೀರಾಜಪೇಟೆ ಕೊಂಡಂಗೇರಿ ನಿವಾಸಿಗಳಾದ ಮೊಹಮ್ಮದ್ ಆಶಿಕ್(22), ಶಾಹಿದ್ (25) ಹಾಗೂ ಹ್ಯಾರೀಸ್ (34) ಬಂಧಿತರು.
ಸೆ. 5ರಂದು ಬೊಳ್ಳಪಂಡ ಎಂ. ಭೀಮಯ್ಯ ಅವರ ಹಸು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು.
ಹ್ಯಾರೀಸ್ ಎಂಬಾತ ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ 2024ರಲ್ಲಿ ನಡೆದ ದನ ಕಳವು ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್ಪಿ ಮಹೇಶ್ ಕುಮಾರ್ ಎಸ್., ವೀರಾಜಪೇಟೆ ವೃತ್ತ ನಿರೀಕ್ಷಕ ಪಿ. ಅನೂಪ್ ಮಾದಪ್ಪ, ಗ್ರಾಮಾಂತರ ಠಾಣಾ ಧಿಕಾರಿ ಲತಾ ಎನ್.ಜೆ., ಸಿಬಂದಿ ಗಳಾದ ಸಾಜನ್, ಜೋಸ್ ನಿಶಾಂತ್, ಸಂತೋಷ್ ಚೌಹನ್, ಅಬ್ದುಲ್ ಮಜೀದ್ ಮತ್ತು ಬೋಪಣ್ಣ ಕಾರ್ಯಾಚರಣೆ ನಡೆಸಿದರು.