Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿದೇಶದಲ್ಲಿ ಮತ್ತೆ ಅಪಘಾತಕ್ಕೆ ಒಳಗಾದ ಅಜಿತ್ ಕುಮಾರ್.

Spread the love

ಪೋರ್ಚುಗಲ್​ನಲ್ಲಿ ಮೋಟರ್​ಸ್ಪೋರ್ಟ್ಸ್ ರೇಸಿಂಗ್ ತರಬೇತಿಯಲ್ಲಿ ತೊಡಗಿದ್ದ ನಟ ಅಜಿತ್ ಕುಮಾರ್ ಅವರಿಗೆ ಸಣ್ಣ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಅವರಿಗೆ ಯಾವುದೇ ಗಾಯಗಳಾಗಿಲ್ಲ. ‘ವಿದಾಮುಯರ್ಚಿ’ ಚಿತ್ರದ ಯಶಸ್ಸಿನ ನಂತರ, ಅವರು ತಮ್ಮ ರೇಸಿಂಗ್ ಹವ್ಯಾಸಕ್ಕೆ ಮರಳಿದ್ದರು. ಅವರ ತಂಡಕ್ಕೆ ಬೆಂಬಲ ನೀಡಿದವರಿಗೆ ಅಜಿತ್ ಕೃತಜ್ಞತೆ ಸಲ್ಲಿಸಿದ್ದಾರೆ. ಇದು ಅವರಿಗೆ ಎರಡನೇ ರೇಸಿಂಗ್ ಅಪಘಾತ.

ನಟ ಅಜಿತ್ ಕುಮಾರ್ ಅವರು ಸಿನಿಮಾ ಹಾಗೂ ಪ್ಯಾಷನ್​ನ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಮೋಟರ್​ಸ್ಪೋರ್ಟ್ಸ್ ರೇಸಿಂಗ್ ಎಂದರೆ ಎಲ್ಲರಿಗೂ ಇಷ್ಟ. ಅವರ ನಟನೆಯ ‘ವಿದಾಮುಯರ್ಚಿ’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡುತ್ತಿದೆ. ಹೀಗಿರುವಾಗಲೇ ಅಜಿತ್ ಅವರು ಪೋರ್ಚುಗಲ್​ಗೆ ತೆರಳಿದ್ದು ರೇಸಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿ ಮೋಟರ್​ಸ್ಪೋರ್ಟ್ಸ್ ರೇಸಿಂಗ್ ತರಬೇತಿಯಲ್ಲಿ ಬ್ಯುಸಿ ಇದ್ದಾರೆ. ಈ ವೇಳೆ ಅಲ್ಲಿ ಅವರಿಗೆ ಅಪಘಾತ ಆಗಿದೆ.

ಪೋರ್ಚುಗಲ್​ನ ಎಸ್ಟೊರಿಲ್​ನಲ್ಲಿ ಟ್ರ್ಯಾಕ್​​ ಒಂದರಲ್ಲಿ ಅಜಿತ್ ಕುಮಾರ್ ಟ್ರೇನಿಂಗ್ ಸೆಷನ್ ನಡೆಸುತ್ತಿದ್ದರು. ಈ ವೇಳೆ ಅಪಘಾತ ಆಗಿದ್ದು, ಕಾರು ಡ್ಯಾಮೇಜ್ ಆಗಿದೆ. ಆದರೆ, ಅಜಿತ್ ಕುಮಾರ್ ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎನ್ನುವ ವಿಚಾರ ರಿವೀಲ್ ಆಗಿದೆ. ‘ಇದೊಂದು ಸಣ್ಣ ಅಪಘಾತ. ನನಗೆ ಯಾವುದೇ ತೊಂದರೆ ಆಗಿಲ್ಲ’ ಎಂದು ಅಜಿತ್ ಕುಮಾರ್ ಹೇಳಿರೋದಾಗಿ ವರದಿ ಆಗಿದೆ.

‘ನಾವು ಸಣ್ಣ ಅಪಘಾತಕ್ಕೆ ಒಳಗಾದೆವು. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಸಮಯ ನನ್ನ ಪರವಾಗಿತ್ತು. ಕಾರ್ ರೇಸ್​ನಲ್ಲಿ ಮತ್ತೊಮ್ಮೆ ಗೆದ್ದು ನಮ್ಮ ಹೆಮ್ಮೆಯನ್ನು ಸ್ಥಾಪಿಸುತ್ತೇವೆ. ಅಪಘಾತದ ಸಮಯದಲ್ಲಿ ನಮಗೆ ಬೆಂಬಲ ನೀಡಿದ ಸ್ನೇಹಿತರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ’ ಎಂದು ಅಜಿತ್ ಕುಮಾರ್ ಹೇಳಿಕೊಂಡಿದ್ದಾರೆ. ಅಜಿತ್ ಕುಮಾರ್ ಅವರು ತಮ್ಮದೇ ಆದ ಕಾರ್ ರೇಸ್ ತಂಡ ಹೊಂದಿದ್ದಾರೆ.

ಅಜಿತ್ ಕುಮಾರ್ ಅವರು ಈ ರೀತಿಯಲ್ಲಿ ಅಪಘಾತಕ್ಕೆ ಒಳಗಾಗುತ್ತಿರುವುದು ಇದು ಎರಡನೇ ಬಾರಿ. ‘ದುಬೈ 24H ರೇಸಿಂಗ್​’ ಈವೆಂಟ್​ನಲ್ಲಿ ಅವರು ಟ್ರೇನಿಂಗ್ ಮಾಡುವಾಗ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಕಾರು ವೇಗವಾಗಿ ಸಾಗುತ್ತಿತ್ತು. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.


Spread the love
Share:

administrator

Leave a Reply

Your email address will not be published. Required fields are marked *