Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

17 ಬಡ ಕುಟುಂಬದ ಜೋಡಿಗಳಿಗೆ ಮದುವೆ ಮಾಡಿಸಿ ಮಾದರಿಯಾದ ಮಂಗಳಮುಖಿ !

Spread the love

ರಾಯಚೂರು : ಮಂಗಳಮುಖಿಯರು ಆದರೆ ಭಿಕ್ಷೆ ಬೇಡ್ತಾರೆ, ಜನರನ್ನ ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡ್ತಾರೆ ಅನ್ನೋ ಆರೋಪವಿದೆ. ಆದರೆ ಇದೆಲ್ಲವನ್ನೂ ಮೀರಿ ರಾಯಚೂರಿನಲ್ಲಿ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಮಂಗಳಮುಖಿಯೊಬ್ಬರು ಬಡ ವಧು-ವರರ ಜೋಡಿಯ ಮದುವೆ ಮಾಡಿಸಿ ಸಾಮಾಜಿಕ ಕಾಳಜಿಯನ್ನು ಮರೆದಿದ್ದಾರೆ.

ಹೌದು.. ಮಂಗಳಮುಖಿಯರು ಅಂದರೆ ಈ ಸಮಾಜ ನೋಡುವ ದೃಷ್ಡಿಕೋನವೇ ಬೇರೆ. ಹೆಚ್ಚಾಗಿ ಭಿಕ್ಷಾಟನೆ ಮಾಡ್ತಾರೆ, ದುಡ್ಡು ಕೊಡದೇ ಇದ್ದರೆ ಹಲ್ಲೆ ಮಾಡ್ತಾರೆ, ದೌರ್ಜನ್ಯ ಮಾಡ್ತಾರೆ ಅನ್ನೋ ಮನಸ್ಥಿತಿ ಹಾಗೂ ಆರೋಪಗಳು ಎಲ್ಲೆಡೆಯಿವೆ. ಆದರೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿರುವ ಮಂಗಳಮುಖಿಯರು ಮಾತ್ರ ಇದೆಲ್ಲಕ್ಕೂ ವಿಭಿನ್ನವಾಗಿದ್ದಾರೆ. ನಿತ್ಯವೂ ರಸ್ತೆಗಳಲ್ಲಿ ನಿಂತು, ಅಂಗಡಿಯ ಮುಂದೆ ಹೋಗಿ ಭೀಕ್ಷೆ ಬೇಡಿ ತಂದ ಹಣ ಸಂಗ್ರಹಿಸಿಟ್ಟು, ಬಡ ಜೋಡಿಯ ಮದುವೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *