Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೆಆರ್ ಮಾರ್ಕೆಟ್ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ: ದುಬೈ ಮಾದರಿ ಪಾರ್ಕಿಂಗ್ ನಿರ್ಮಾಣಕ್ಕೆ ಸಿದ್ಧತೆ

Spread the love

ಬೆಂಗಳೂರು: ಕೆ‌.ಆರ್.ಮಾರ್ಕೆಟ್‌ (KR Market) ಪಾರ್ಕಿಂಗ್ ಅವ್ಯವಸ್ಥೆ (Parking Space) ಸರಿಪಡಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಮುಂದಾಗಿದೆ. ದುಬೈ ಮಾದರಿಯಲ್ಲಿ (Dubai Model) ಪಾರ್ಕಿಂಗ್ ವ್ಯವಸ್ಥೆ ಮಾಡ್ತಿದ್ದು, 6 ತಿಂಗಳಲ್ಲಿ ಕಾಮಗಾರಿ ಮುಗಿಸಲು ತಿರ್ಮಾನಿಸಿದೆ. ಈ ಹಿನ್ನೆಲೆ ವಾಹನ ನಿಲುಗಡೆಗೆ ನಿರ್ಬಂಧ (Parking Restrictions) ಹೇರಲಾಗಿದೆ.

KR ಮಾರ್ಕೆಟ್‌ ಪಾರ್ಕಿಂಗ್ ಅವ್ಯವಸ್ಥೆಗೆ ಮುಕ್ತಿ!

ದುಬೈ ಮಾದರಿ ಪಾರ್ಕಿಂಗ್‌‌‌ ನಿರ್ಮಾಣಕ್ಕೆ ಸಿದ್ಧತೆ

ಬಿಬಿಎಂಟಿ ಯುಗಾಂತ್ಯವಾಗಿದ್ದು, ಗ್ರೇಟರ್ ಬೆಂಗಳೂರು ಅಥಾರಿಟಿ ಆಡಳಿತ ಶುರುವಾಗಿದೆ. ಸದ್ಯ ಜಿಬಿಎ ಮೊಟ್ಟ ಮೊದಲ ಪ್ರಾಜೆಕ್ಟ್‌ವೊಂದನ್ನ ಕೈಗೆತ್ತಿಕೊಂಡಿದೆ. ಹಾಳಾಗಿ ಗಬ್ಬೆದ್ದು ನಾರ್ತಿದ್ದ ಕೆ.ಆರ್‌ ಮಾರ್ಕೆಟ್‌ನ ಅಂಡರ್ ಗ್ರೌಂಡ್ ಪಾರ್ಕಿಂಗ್ ಜಾಗದ ದುರಸ್ತಿ‌ ಕಾರ್ಯಕ್ಕೆ ಕೈ ಹಾಕಿದೆ. ಪಾರ್ಕಿಂಗ್ ಜಾಗ ಅಭಿವೃದ್ಧಿಗೆ ಟೆಂಡರ್ ಸಹ ಫೈನಲ್ ಆಗಿದೆ. 200 ಕಾರು ಹಾಗೂ 400 ಬೈಕ್ ನಿಲ್ಲಿಸುವಂತೆ ಪಾರ್ಕಿಂಗ್ ನಿರ್ಮಾಣ ಮಾಡ್ತಿದೆ. ಕಾಮಗಾರಿ ಹಿನ್ನೆಲೆ ವಾಹನಗಳಿಗೆ ನಿರ್ಬಂಧ ಹೇರಲಾಗಿದ್ದು, ಪಾರ್ಕ್ ಮಾಡಿರುವ ವಾಹನವನ್ನ ತೆಗೆಯುವಂತೆ ಸೂಚನೆ ನೀಡಲಾಗಿದೆ.

ಕೆ.ಆರ್ ಮಾರ್ಕೆಟ್‌ನ ಪಾರ್ಕಿಂಗ್‌ ಅವ್ಯವಸ್ಥೆಯಿಂದ ಬೇಸತ್ತಿದ್ದ ಜನ GBA ನಿರ್ಧಾರವನ್ನ ಸ್ವಾಗತಿಸಿದ್ದಾರೆ. ಮಳೆ ಬಂದರೆ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗ್ತಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸ್ಬೇಕು ಅಂತಿದ್ದಾರೆ. ಮತ್ತೊಂದ್ಕಡೆ 10 ವರ್ಷಕ್ಕೆ ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿದ್ದು, ಅಧಿಕ ಹಣ ವಸೂಲಿ ಮಾಡದಂತೆ ಕ್ರಮ ಕೈಗೊಳ್ಳವಂತೆ ಮನವಿ ಮಾಡಿದ್ದಾರೆ.

10 ವರ್ಷ ಟೆಂಡರ್ ಕೊಟ್ಟಿರೊದರಿಂದ ಮುಖ್ಯವಾಗಿ ಶುಲ್ಕವನ್ನು ಜಾಸ್ತಿ ಮಾಡ್ತಾರೆ. ನಾವು ಇಷ್ಟ ಕಷ್ಟಡೋದನ್ನು ನೋಡಿದ ಮೇಲೆ ನಮ್ಮ ಮಕ್ಕಳಿಗೆ ಕೆಆರ್ ಮಾರ್ಕೆಡ್ ಗೆ ಬನ್ನಿ ಎಂದು ನಾವು ಹೇಳೋದೇ ಇಲ್ಲ ಅಂತಹ ಸ್ಥಿತಿ ಎದುರಾಗುತ್ತದೆ. ಇದನ್ನು ತುರ್ತು ಕಾರ್ಯ ಎಂದು ಪರಿಗಣಿಸಿ ಜಾರಿಗೆ ಮಾಡಬೇಕು ಎಂದು ಸಾರ್ವಜನಿಕರಾದ ಸೌಮ್ಯಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕೆಆರ್ ಮಾರ್ಕೆಟ್ ಆಗಮಿಸಿದ್ದ ಗ್ರಾಹಕರೊಬ್ಬರು ಮಾತನಾಡಿ, ಅಂಡರ್ ಗ್ರೌಂಡ್ ಪಾರ್ಕಿಂಗ್ ಗೆ ಬರಬೇಕು ಎಂದರೇ ಭಯ ಆಗುತ್ತೆ. ಸುಲಿಗೆ, ಕೊಲೆಯಂತಹ ಪ್ರಕರಣಗಳು ಹೆಚ್ಚಾಗಿದೆ. ಅದರಲ್ಲೂ ಹೆಣ್ಣು ಮಕ್ಕಳು ಭಯಪಡುತ್ತಲೇ ಇಲ್ಲಿಗೆ ಬರಬೇಕಾದ ಸ್ಥಿತಿ ಇದೆ. ಗ್ರೇಟರ್ ಬೆಂಗಳೂರು ಮಾಡಿ, ಹೈಟೆಕ್ ಮಾಡಿದ ಬಳಿಕ ಶುಲ್ಕ ಹೆಚ್ಚಳ ಮಾಡಬಾರದು, ಇದು ಗ್ರಾಹಕನಾಗಿ ನನ್ನ ಮನವಿ. ಬೆಲೆ ಜಾಸ್ತಿ ಮಾಡಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ಹೇಳಿದ್ದಾರೆ.
ಒಟ್ಟಾರೆ ಗ್ರೇಟರ್ ಬೆಂಗಳೂರು ಹೈಟೆಕ್‌‌ ಪಾರ್ಕಿಂಗ್ ನಿರ್ಮಾಣಕ್ಕೆ ಮುಂದಾಗಿದ್ದು, ಆದಷ್ಟು ಬೇಗ ಕಾಮಗಾರಿ ಮುಗಿಸಿದ್ರೆ ಉತ್ತಮ ಅನ್ನೋದು ಜನರ ಅಭಿಪ್ರಾಯ.


Spread the love
Share:

administrator

Leave a Reply

Your email address will not be published. Required fields are marked *