Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ,ಕಂಗನಾ ರಣಾವತ್ ಸೇರಿ ಪ್ರಮುಖರಿಂದ ಮತ ಚಲಾವಣೆ

Spread the love

ಉಪರಾಷ್ಟ್ರಪತಿ ಚುನಾವಣೆ ಲೈವ್: ಇಡೀ ದೇಶವೇ ಎದುರುನೋಡುತ್ತಿರುವ ಉಪರಾಷ್ಟ್ರಪತಿ ಚುನಾವಣೆಗೆ ಕ್ಷಣಗಣನೆ ಆರಂಭ ಆಗಿದ್ದು, ಸಂಸತ್ತಿನಲ್ಲಿ ಬೆಳಗ್ಗೆ 10 ಗಂಟೆಗೆ ಚುನಾವಣೆ ಆರಂಭ ಆಗಲಿದೆ. ರಾತ್ರಿ ವೇಳೆಗೆ ಫಲಿತಾಂಶ ಪ್ರಕಟ ಆಗುವ ಸಾಧ್ಯತೆ ಇದೆ. ಉಪರಾಷ್ಟ್ರಪತಿಯಾಗಿದ್ದ ಜಗದೀಪ್ ಧಂಖರ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಎನ್‌ಡಿಎ ಅಭ್ಯರ್ಥಿ ರಾಧಾಕೃಷ್ಣನ್ ಹಾಗೂ ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ಅವರ ಕಿರುಪರಿಚಯವೂ ಇಲ್ಲಿದೆ. ಮತದಾನ ಆರಂಭ ಆಗಿದ್ದು ಮೊದಲಿಗೆ ಪ್ರಧಾನಿ ಮೋದಿ ಮತಚಲಾಯಿಸಿದ್ದಾರೆ. ಬಳಿಕ ಎಲ್ಲಾ ಸಂಸದರು ಒಬ್ಬೊಬ್ಬರಾಗಿಯೇ ಬಂದು ಮತ ಚಲಾವಣೆ ಮಾಡುತ್ತಿದ್ದಾರೆ. ಸಂಜೆ 5 ಗಮಟೆವರೆಗೆ ಮತ ಚಲಾವಣೆಗೆ ಅವಕಾಶ ಇದ್ದು 6 ಗಂಟೆಗೆ ಮತ ಎಣಿಕೆ ಆರಂಭ ಆಗಲಿದೆ.

ದೇಶದ ಪ್ರಮುಖ ಬೆಳವಣಿಗಗಳ ಲೈವ್ ಅಪ್‌ಡೇಟ್‌ಗಾಗಿ ವಿಜಯ ಕರ್ನಾಟಕದ ಈ ವೆಬ್ ಸೈಟ್ ಪೇಜ್‌ ಫಾಲೋ ಮಾಡಿ

2025ರ ಉಪರಾಷ್ಟ್ರಪತಿ ಚುನಾವಣೆ; ಮತ ಚಲಾಯಿಸಿದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಶ್ರೇಷ್ಠ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ನಮ್ಮ ರಾಷ್ಟ್ರದ ಪ್ರಗತಿಗೆ ಮಾರ್ಗದರ್ಶನ ನೀಡುವ ಸಂಸ್ಥೆಗಳನ್ನು ಬಲಪಡಿಸಲು ಉಪರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಿದ್ದು ಹೆಮ್ಮೆಯ ಕ್ಷಣ ಎಂದು ಎಕ್ಸ್‌ನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಟ್ವೀಟ್‌ ಮಾಡಿದ್ದಾರೆ

ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖರಿಂದ ಮತ ಚಲಾವಣೆ

ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕಂಗನಾ ರಣಾವತ್, ರಾಜ್ಯಸಭಾದ ಉಪಸಭಾಪತಿ, ಹರಿವಂಶ್ ನಾರಾಯಣ್ ಸಿಂಗ್ ಕೂಡಾ ಮತ ಚಲಾಯಿಸಿದ್ದಾರೆ. ಬಳಿಕ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಸುದರ್ಶನ್ ರೆಡ್ಡಿ ಗೆಲ್ಲುವ ಎಲ್ಲ ಸಾಧ್ಯತೆಯೂ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಇಂಡಿಯಾ ಒಕ್ಕೂಟಕ್ಕೆ ಮತಗಳ ಕೊರತೆ ಸಾಧ್ಯತೆ

ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಬಣದ ಬಳಿ ಸುಮಾರು 315 ಮತಗಳಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದರೂ, ವಿರೋಧ ಪಕ್ಷಕ್ಕೆ ಇನ್ನೂ 100 ರಿಂದ 135 ಮತಗಳ ಕೊರತೆಯಿದೆ. ಒಂದು ವೇಳೆ ಬಿಆರ್‌ಎಸ್ ಮತ್ತು BJD ಬೆಂಬಲ ನೀಡಿದರೂ, ಮತ್ತು ಪಕ್ಷೇತರರು, ಒಂದೇ ಸಂಸದರನ್ನು ಹೊಂದಿರುವ ಪಕ್ಷಗಳು, ಮತ್ತು ವೈಎಸ್‌ಆರ್ ಕಾಂಗ್ರೆಸ್ ರೆಡ್ಡಿ ಅವರ ಪರವಾಗಿ ಬಂದರೂ, INDIA ಬಣಕ್ಕೆ ಇನ್ನೂ 70 ಕ್ಕೂ ಹೆಚ್ಚು ಮತಗಳ ಕೊರತೆಯಾಗುತ್ತದೆ. ಬಹುಮತಕ್ಕೆ 391 ಮತಗಳ ಅಗತ್ಯವಿದೆ


Spread the love
Share:

administrator

Leave a Reply

Your email address will not be published. Required fields are marked *