Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಂಜಾಬ್ ಪ್ರವಾಹ: ನೀರಿಗೆ ಹಣ ನೀಡಿದ ಬಾಲಕನ ಪ್ರಾಮಾಣಿಕತೆಗೆ ಮನಸೋತ ರಕ್ಷಣಾ ತಂಡ

Spread the love

ಈ ಬಾರಿಯ ಮಳೆ ಪಂಜಾಬ್‌ನಲ್ಲಿ ರೌದ್ರನರ್ತನವನ್ನೇ ಸೃಷ್ಟಿಸಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಪ್ರವಾಹಕ್ಕೆ ತುತ್ತಾದ ಪಂಜಾಬ್‌ನಲ್ಲಿ ಲಕ್ಷಾಂತರ ಜನ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೃಷಿ ಭೂಮಿಯೂ ಸೇರಿದಂತೆ 1.75 ಲಕ್ಷ ಹೆಕ್ಟೇರ್ ಪ್ರದೇಶವನ್ನು ಮಳೆ ಆಹುತಿ ಪಡೆದಿದ್ದು, ಈ ಪ್ರವಾಹ ಪೀಡಿತ ಪ್ರದೇಶದ ಪ್ರಭಾವಕ್ಕೆ 1996 ಗ್ರಾಮಗಳು ತುತ್ತಾಗಿವೆ. ಪಂಜಾಬ್ ಪ್ರವಾಹದ ಹಲವು ಮನಕಲುಕುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಪ್ರವಾಹಪೀಡಿತ ಸ್ಥಳದಲ್ಲಿ ನೀರು ಕೊಟ್ಟವರಿಗೆ ಹಣ ನೀಡಿದ ಪುಟಾಣಿ

ಹಾಗೆಯೇ ಇಲ್ಲೊಂದು ವೀಡಿಯೋ ಮನವನ್ನು ತೇವಗೊಳಿಸುವುದರ ಜೊತೆಗೆ ಮುಂದಿನ ನಮ್ಮ ತಲೆಮಾರಿನ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತಿದೆ. ಪ್ರವಾಹ ಪೀಡಿತ ಸ್ಥಳಗಳಲ್ಲಿ ರಕ್ಷಣಾ ಸಿಬ್ಬಂದಿ ನೀರು ಆಹಾರ ಮುಂತಾದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತೊಡಗಿದ್ದು, ಈ ವೇಳೆ ಆ ಕಷ್ಟದ ಕ್ಷಣದಲ್ಲೂ ಪುಟ್ಟ ಬಾಲಕನೋರ್ವ ರಕ್ಷಣಾ ತಂಡದ ಸದಸ್ಯರಿಗೆ ತನ್ನ ಬಳಿ ಇದ್ದ 10 ರೂಪಾಯಿಯನ್ನು ನೀಡಿದ್ದಾನೆ. ತಾನು ಅವರಿಂದ ಪಡೆದ ನೀರಿಗೆ ಪ್ರತಿಯಾಗಿ ಬಾಲಕ 10 ರೂಪಾಯಿ ನೀಡಿದ್ದಾನೆ. ಈ ವೇಳೆ ರಕ್ಷಣಾ ತಂಡದ ಸದಸ್ಯರು ಬೇಡ ಬೇಡ ಎಂದರೂ ಆ ಬಾಲಕ ಹಣ ವಾಪಸ್ ಪಡೆಯಲು ಒಪ್ಪಿಲ್ಲ, ಆದರೂ ಅವರು ಕೊನೆಗೂ ಆ 10 ರೂಪಾಯಿಯನ್ನು ಆತನ ಕೈಗೆ ಇಟ್ಟು ಭದ್ರವಾಗಿ ಆತನ ಕೈಗಳನ್ನು ಮುಚ್ಚಿ ಆತನ ತಾಯಿ ಜೊತೆ ವಾಪಸ್ ಕಳುಹಿಸಿದ್ದಾರೆ.

ಬಾಲಕನ ಮುಗ್ಧತೆಗೆ ಮನಸೋತ ರಕ್ಷಣಾ ತಂಡ

ಬಾಲಕ ಕೊಟ್ಟ 10 ರೂಪಾಯಿ ನಾಣ್ಯವನ್ನು ತೋರಿಸಿ ಅವನು ನನಗೆ ನೀರಿನ ಬಾಟಲಿಗೆ ಬದಲಾಗಿ ಹಣ ನೀಡಿದ ಎಂದು ಕ್ಯಾಮರಾಗೆ ಹೇಳಿದ್ದಾರೆ. ಈ ವೀಡಿಯೋವನ್ನು @thelogicalindian ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಅಲ್ಲಿ ಮುಂಗಾರು ಮಳೆ ಪ್ರವಾಹವನ್ನು ಸೃಷ್ಟಿಸಿದೆ. ಆದರೆ ಈ ಪುಟ್ಟ ಬಾಲಕ ತನ್ನ ಕುಟುಂಬ ಸಂಕಷ್ಟಕ್ಕೀಡಾಗಿರುವುದರ ನಡುವೆಯೇ ಅಲ್ಲಿ ತನಗೆ ನೀರಿನ ಬಾಟಲ್ ನೀಡಿದ ರಕ್ಷಣಾ ತಂಡದ ಸದಸ್ಯರಿಗೆ ಹಣ ನೀಡಿದ್ದಾನೆ. ಆ ಬಾಲಕನ ಪ್ರಾಮಾಣಿಕತೆ ನಮಗೆ ಮಾನವೀಯತೆಯ ನಿಜವಾದ ಚೈತನ್ಯವನ್ನು ನೆನಪಿಸಿತ್ತು ಎಂದು ರಕ್ಷಣಾ ತಂಡ ಅಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್‌

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಯ್ತು. ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಆ ಬಾಲಕನ ಗುಣಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಮುಂದಿನ ತಲೆಮಾರಿನ ಮೇಲೆ ಈ ಪುಟ್ಟ ಬಾಲಕ ಭರವಸೆ ಹುಟ್ಟುವಂತೆ ಮಾಡಿದ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಜಾತಿ ಹಾಗೂ ಗಡಿಯನ್ನು ಮೀರಿದ ಮಾನವೀಯತೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಮಕ್ಕಳನ್ನು ಬೆಳೆಸಿದ ರೀತಿ ಮತ್ತು ಅವರಿಗೆ ನೀಡಿದ ಸಂಸ್ಕಾರವೂ ಅವರು ಒಳ್ಳೆಯ ಮಕ್ಕಳು ಎಂದು ಹೇಳುತ್ತಿದೆ. ದೇವರು ಅವರನ್ನು ಮತ್ತು ಅವರ ಕುಟುಂಬವನ್ನು ಸುರಕ್ಷಿತವಾಗಿರಿಸಲಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ನಡುವೆ ಪಂಜಾಬ್ ಸರ್ಕಾರ 23 ಜಿಲ್ಲೆಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಿದ್ದು, ಇಲ್ಲಿಯವರೆಗೆ, 30 ಕ್ಕೂ ಹೆಚ್ಚು ಜನರು ಮಳೆ ಅನಾಹುತದಿಂದ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ರಾಜ್ಯಾದ್ಯಂತ ನಿರಂತರ ಮಳೆ ಮತ್ತು ಪ್ರವಾಹದಿಂದ ಲಕ್ಷಾಂತರ ಜನರು ಪ್ರಭಾವಿತರಾಗಿದ್ದಾರೆ. ವಿಪತ್ತಿನಿಂದ ಸ್ಥಳಾಂತರಗೊಂಡವರಿಗೆ ಆಶ್ರಯ ಮತ್ತು ಅಗತ್ಯ ಸಾಮಗ್ರಿಗಳನ್ನು ನೀಡಲು ಅಧಿಕಾರಿಗಳು ತಗ್ಗು ಪ್ರದೇಶ ಮತ್ತು ತೀವ್ರ ಬಾಧಿತ ಪ್ರದೇಶಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಿದ್ದಾರೆ, ನೂರಾರು ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *