Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪರಸ್ತ್ರೀಯ ಮೇಲೆ ಗಂಡನ ಕಣ್ಣು : ಸುಪಾರಿ ಕೊಟ್ಟು ಕಾಲು ಮುರಿಸಿದ ಹೆಂಡತಿ

Spread the love

ಕಲಬುರಗಿ : ಪತಿ ಪರಸ್ತ್ರೀ ಸಹವಾಸ ಮಾಡಿದ್ದಾನೆ ಎಂದು ಸ್ವಂತ ಹೆಂಡತಿಯೆ ಗಂಡನ ಕಾಲು ಮುರಿಯಲು 5 ಲಕ್ಷಕ್ಕೆ ಸುಪಾರಿ ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಸುಪಾರಿ ಪಡೆದ ಯುವಕರು ಗಂಡನ ಕಾಲು ಮುರಿಯುವಲ್ಲಿ ಯಶಸ್ವಿಯು ಆಗಿದ್ದಾರೆ.

ಕಲಬುರಗಿಯ ಅತ್ತರ ಕಂಪೌಡ ಬಳಿ ನಡೆದ ಘಟನೆ ನಡೆದಿದ್ದು. ವೆಂಕಟೇಶ್​​ ಎಂಬಾತ ಕಳೆದ ಕೆಲ ವರ್ಷಗಳ ಹಿಂದೆ ಉಮಾದೇವಿ ಎಂಬಾಕಯನ್ನು ಮದುವೆಯಾಗಿದ್ದನು. ಆದರೆ ಇತ್ತೀಚೆಗೆ ವೆಂಕಟೇಶ್​ ಪರಸ್ತ್ರೀ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದನು. ಈ ಬಗ್ಗೆ ಕೋಪಗೊಂಡಿದ್ದ ಉಮಾದೇವಿ ಗಂಡನ ಮೇಲೆ ಮುನಿಸಿಕೊಂಡಿದ್ದಳು. ಈ ಬಗ್ಗೆ ದಂಪತಿಗಳ ನಡುವೆ ಅನೇಕ ಬಾರಿ ಜಗಳವು ನಡೆದಿತ್ತು.

ಅನೇಕ ಬಾರಿ ಈ ವಿಷಯದ ಕುರಿತು ಜಗಳ ನಡೆದರು ಕೂಡ ಗಂಡ ಪರಸ್ತ್ರೀ ಸಹವಾಸವನ್ನು ಬಿಟ್ಟಿರಲಿಲ್ಲ. ಇದರಿಂದ ಕೋಪಗೊಂಡ ಹೆಂಡತಿ ಗಂಡನ ಕಾಲು ಮುರಿಸಿದರೆ ಗಂಡ ಶಾಶ್ವತವಾಗಿ ಮನೆಯಲ್ಲಿರುತ್ತಾನೆ ಎಂದು ಯುವಕರಿಗೆ 5 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಸುಪಾರಿ ಪಡೆದ ಹಂತಕರು ವೆಂಕಟೇಶ್​ನ ಕಾಲುಗಳನ್ನು ಮುರಿದಿದ್ದರು.

ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಬ್ರಹ್ಮಾಪೂರ ಪೊಲೀಸರು ಇದೀಗ ಪ್ರಕರಣವನ್ನು ಭೇದಿಸಿದ್ದು. ಸುಪಾರಿ ನೀಡಿದ ಉಮಾದೇವಿ ಹಂತಕರಾದ ಆರೀಫ್,ಮನೋಹರ,ಸುನೀಲ್ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *