Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರೇಯಸಿ ನಂಬರ್ ಬ್ಲಾಕ್ ಮಾಡಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ: ಚಿಕ್ಕಬಳ್ಳಾಪುರದಲ್ಲಿ ದುರ್ಘಟನೆ

Spread the love

ಚಿಕ್ಕಬಳ್ಳಾಪುರ: ಲವ್ವರ್ ತನ್ನ ನಂಬರ್ ಬ್ಲಾಕ್ ಮಾಡಿದ ಕಾರಣ ಮನನೊಂದುಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ (Self Harming) ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಸಂಸದ ಸುಧಾಕರ್ ಅವರಿಗೆ (Sudhakar) ಸೇರಿದ ಕಾಲೇಜಿನಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದ ಸಂಸದ ಸುಧಾಕರ್‌ ಅವರಿಗೆ ಸೇರಿದ ಶಾಂತ ಗ್ರೂಪ್ ಆಪ್ ಇನ್ಸ್ಟಿಟ್ಯೂಟ್ನಲ್ಲಿ ಟೆಕ್ನಿಷಿಯನ್ ಕಾಳೇಜಿನಲ್ಲಿ ಈ ಘಟನೆ ನಡೆದಿದ್ದು, ಮಹಮದ್ ಶಬೀರ್ ಎನ್ನುವ ಕೇರಳ ಮೂಲದ 26 ವರ್ಷದ ವಿದ್ಯಾರ್ಥಿ ಹಾಸ್ಟೆಲ್ ರೂಮ್ನ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರಗ್ರಾಮದ ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಕೇರಳದ ವಯನಾಡು ಮೂಲದ ವಿದ್ಯಾರ್ಥಿ ಈ ಮೊಹಮ್ಮದ್ ಶಬ್ಬೀರ್ ಎನ್ನಲಾಗಿದೆ. ಈ ವಿದ್ಯಾರ್ಥಿ ಕಾಲೇಜಿನಲ್ಲಿ ಆರ್‌ಸಿಟಿ ಎನ್ನುವ ಅಲೈಡ್ ಸೈನ್ಸ್ ಕೋರ್ಸ್‌ನ ಕೊನೆಯ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದ ಎನ್ನಲಾಗಿದ್ದು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಕೋರ್ಸ್ ಮುಗಿಸಿ ಆತ ಮನೆಗೆ ಹೋಗಬೇಕಿತ್ತು. ಆದರೆ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾನೆ.ಇದರಿಂದ ಪೋಷಕರಿಗೆ ದೊಡ್ಡ ಆಘಾತವಾಗಿದೆ. ಇನ್ನು ಭಾನುವಾರ ಸೆಪ್ಟೆಂಬರ್‌ 7ರಂದು ವಿದ್ಯಾರ್ಥಿ ನೇಣಿಗೆ ಶರಣಾಗಿದ್ದು, ರೂಮ್‌ನ ಕಿಟಕಿಗೆ ಟವೆಲ್‌ ಕಟ್ಟಿ, ಅದರಿಂದ ತನ್ನ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇನ್ನು ಈ ವಿಚಾರ ತಿಳಿದ ಪೇರೇಸಂದ್ರ ಠಾಣಾ ಪೊಲೀಸರು ವಿದ್ಯಾರ್ಥಿ ರೂಮ್‌ ಪರಿಶೀಲನೆ ಮಾಡಿದ್ದು, ಈ ಸಮಯದಲ್ಲಿ ಡೆತ್‌ ನೋಟ್‌ ಸಿಕ್ಕಿದೆ. ಅದರಲ್ಲಿ I didn’t stop anything until…. I always love you forever , You are my first and you are My last ಎಂದು ಬರೆದಿಟ್ಟಿದ್ದಾನೆ


Spread the love
Share:

administrator

Leave a Reply

Your email address will not be published. Required fields are marked *