ಪ್ರವಾಹ ಭೂಕುಸಿತಕ್ಕೂ ಕುಗ್ಗದೆ ಹೇಳಿಕಾಫ್ಟರ್ ಬಳಸಿ ಎಕ್ಸಾಮ್ ಗೆ ಹೋದ ವಿದ್ಯಾರ್ಥಿಗಳು

ಉತ್ತರಾಖಂಡ : ವರುಣನ ರೌದ್ರರೂಪಕ್ಕೆ ಉತ್ತರಾಖಂಡ (Uttarakhand) ಅಕ್ಷರಶಃ ನಲುಗಿ ಹೋಗಿದೆ. ಪ್ರವಾಹ (Flashflood)..ಗುಡ್ಡ ಕುಸಿತ ಸೇರಿದಂತೆ ಹಲವು ಹಾನಿ ಅವಾಂತರ ಸೃಷ್ಟಿಯಾಗಿದೆ. ಇಲ್ಲಿನ ಬಹುತೇಕ ರಸ್ತೆಗಳು ಜಲಾವೃತವಾಗಿದ್ದು ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾಧ್ಯವಾಗದೆ ಕೆಲ ವಿದ್ಯಾರ್ಥಿಗಳು (Students) ಸಂಕಷ್ಟಕ್ಕೆ ಸಿಲುಕಿದ್ದರು.
ಕೊನೆಗೆ 4 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದ ರೀತಿ ಇಡೀ ರಾಜ್ಯವನ್ನೇ ಹುಬ್ಬೇರಿಸುವಂತೆ ಮಾಡಿದೆ. ಹೌದು ಹೆಲಿಕಾಫ್ಟರ್ನಲ್ಲಿ (Helicopter) ಬಂದು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಹೌದು ಉತ್ತರಾಖಂಡದ ಪಿಥೋರ್ಗಢದ ಪರೀಕ್ಷಾ ಕೇಂದ್ರದಲ್ಲಿ ಬಿ.ಇಡಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಪರೀಕ್ಷೆಗಾಗಿ ಸರ್ವ ತಯಾರಿ ನಡೆಸಿದ್ದ ವಿದ್ಯಾರ್ಥಿಗಳಿಗೆ ಪ್ರವಾಹ ಅಡ್ಡಿಯಾಗಿತ್ತು. ಆದ್ರೆ ಇಷ್ಟಕ್ಕೆ ಎದೆಗುಂದದ ಸ್ಟೂಡೆಂಟ್ಸ್ ಹೆಲಿಕಾಫ್ಟರ್ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ.
ರಸ್ತೆ ಮಾರ್ಗವಾಗಿ ಪರೀಕ್ಷಾ ಕೇಂದ್ರ ತಲುಪುವುದು ಅಸಾಧ್ಯವೆಂದು ಭಾವಿಸಿದ ರಾಜಸ್ಥಾನ ಮೂಲದ ನಾಲ್ವರು ವಿದ್ಯಾರ್ಥಿಗಳು, ಹೆಲಿಕಾಪ್ಟರ್ನ್ನು ಬಾಡಿಗೆ ಪಡೆದು ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಬರೆದ ನಂತರ, ನಾಲ್ವರೂ ಹೆಲಿಕಾಪ್ಟರ್ ಮೂಲಕವೇ ಹಿಂತಿರುಗಿದ್ದಾರೆ. ಇದಕ್ಕಾಗಿ ಸುಮಾರು 40 ಸಾವಿರ ಖರ್ಚು ಮಾಡಿದ್ದಾರೆ.ಆದ್ರೆ ಹಣ ಹೋದರೆ ಪರವಾಗಿಲ್ಲ..ನಮ್ಮ ಒಂದು ವರ್ಷ ವ್ಯರ್ಥವಾಗದಂತೆ ನೋಡಿಕೊಂಡಿದ್ದೇವೆ ಎಂದು ವಿದ್ಯಾರ್ಥಿಗಳು ಈ ಬಗ್ಗೆ ಹೇಳಿಕೊಂಡಿದ್ದಾರೆ.