Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ, ಸಿಸಿಟಿವಿಯಲ್ಲಿ ಕಳ್ಳನ ಕೃತ್ಯ ಸೆರೆ

Spread the love

ಬೆಂಗಳೂರು : ಕಳ್ಳನೊಬ್ಬ ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ (Bengaluru Crime) ನಡೆದಿದೆ. ಸಿಸಿಟಿವಿಯಲ್ಲಿ ಕಳ್ಳನ ಕೃತ್ಯವು ಸೆರೆಯಾಗಿದೆ.

ಬಾಣಸವಾಡಿಯ ಶ್ರೀ ರಾಮಚಂದ್ರ ಕಾಂಪ್ಲೆಕ್ಸ್ ನಲ್ಲಿರುವ ಕಲ್ಯಾಣ ಮಂಟಪದಲ್ಲಿದ್ದ ಮನೆಯಲ್ಲಿ ಕಳ್ಳತನ ನಡೆದಿದೆ.

ಕಲ್ಯಾಣ ಮಂಟಪದ ಉಸ್ತುವಾರಿಯಾಗಿ ಶೀತಲ್ ತಾಪಾ ಪಕ್ಕದಲ್ಲೇ ಇರುವ ಮನೆಯಲ್ಲಿ ತಮ್ಮ ಕುಟುಂಬದೊಡನೆ ಎರಡು ವರ್ಷಗಳಿಂದ ವಾಸಿಸುತ್ತಿದ್ದರು. ತಾಪಾ ಅವರ ತಾಯಿ, ಹೆಂಡತಿ ಕೆಲಸಕ್ಕೆ ,ಹೋಗಿದ್ರೆ,ಮಗಳು ಟ್ಯೂಷನ ಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿದ್ದ ಕಳ್ಳ ಮನೆಯ ಡೋರ್ ಓಪನ್ ಮಾಡಿ‌ ಲಾಕರ್ ನಲ್ಲಿದ್ದ ಚಿನ್ನ ನಗದು ಕಳ್ಳತನ ಮಾಡಿದ್ದಾನೆ. ಒಂದು ಲಕ್ಷ ನಗದು, ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ವಾಗಿದ್ದು ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನ್ನದೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ ಕಳ್ಳ ಸಲೀಸಾಗಿ ಬಂದು ಕಳವು ಮಾಡಿ ಹೋಗಿದ್ದಾನೆ.

ಬಾಣಸವಾಡಿ ಠಾಣೆಯಲ್ಲಿ ಶೀತಲ್ ತಾಪಾ ದೂರು ನೀಡಿದ್ದು, ಪ್ರಕರಣ ದಾಕಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ಪೊಲೀಸ್‌ ಪೇದೆಯೊಬ್ಬ ವಕೀಲೆಯೊಬ್ಬರಿಗೆ ಮದುವೆಯಾಗುವ ಆಮಿಷ ಒಡ್ಡಿ ಅವರ ಮೇಲೆ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳಿಸಿ ಈಗ ಕೈಕೊಟ್ಟಿರುವ ಘಟನೆ ನಗರದಲ್ಲಿ (Bengaluru Crime) ನಡೆದಿದೆ. ಮಂಗಳೂರಿನ ಎಸ್‌ಎಎಫ್‌ ನಲ್ಲಿ ಪೊಲೀಸ್‌ ಕಾನ್ಸ್‌ಟೇಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದೇಗೌಡ ಅಲಿಯಾಸ್‌ ಸಿದ್ದು ವಿರುದ್ದ ಯುವತಿ ದೂರು ದಾಖಲಿಸಿದ್ದಾಳೆ.

ಬೆಂಗಳೂರಿನಲ್ಲಿ ವಕೀಲೆಯಾಗಿರುವ ಬಿಜಾಪುರದ ಬಬಲೇಶ್ವರ ಮೂಲದ ಯುವತಿ ಹಾಗೂ ಮಂಗಳೂರಿನ ಪಾಂಡೇಶ್ವರದಲ್ಲಿನ ಸ್ಪೆಷಲ್‌ ಆಕ್ಷನ್‌ ಫೋರ್ಸ್‌ ನಲ್ಲಿ ಕೆಲಸ‌ ಮಾಡಿತ್ತಿರುವ ಸಿದ್ದು.. (SPECIAL ACTION FORCE) ಇಬ್ಬರೂ ಮದುವೆಯೊಂದರಲ್ಲಿ ಪರಿಚಯವಾಗಿದ್ದರು. ಬಾಗಲಕೋಟೆಯ ಜಮಖಂಡಿ ಮೂಲದ ಸಿದ್ದು ಯುವತಿಗೆ ತನ್ನ ಮೊಬೈಲ್‌ ನಂಬರ್‌ ಕೊಟ್ಟು ಗಾಳ ಹಾಕಿದ್ದ. ಬಳಿಕ ಇಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮದುವೆಗೂ ಮುಂಚೆಯೇ ಯುವತಿಯನ್ನು ಕರೆಸಿ ಬೆಂಗಳೂರಿನಲ್ಲಿ ಹಲವೆಡೆ ಲಾಡ್ಜ್ ಬುಕ್ ಮಾಡಿ ಅತ್ಯಚಾರ ನಡೆಸಿದ್ದ.

ಆಗೆಲ್ಲಾ ಜಾತಿಯ ಪ್ರಸ್ತಾಪವನ್ನೇ ಎತ್ತದ ಸಿದ್ದು, ಮದುವೆಯ ಮಾತುಕತೆ ಬಂದಾಗ ನಿಮ್ಮದು‌ ಕೀಳು ಜಾತಿ ಹೀಗಾಗಿ ಮದುವೆಗೆ ನಮ್ಮ ಮನೆಯಲ್ಲಿ ಒಪ್ಪಲ್ಲ‌ ಎಂದಿದ್ದ.ಅಷ್ಟೇ ಅಲ್ಲದೇ ವಕೀಲೆ ಯಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದು ಹಿಂದಿರುಗಿಸಿದೆ ವಂಚನೆ ಎಸೆಗಿದ್ದ.

ಆ. 8 ರಂದು ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ವಕೀಲೆ ಸಿದ್ದು ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಳು. ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಸಿದ್ದುವನ್ನು ಪೊಲೀಸರು ಆ.30 ರಂದು ಬಂಧಿಸಿದ್ದರು.

ಈಗ ಬಂಧಿನನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ. ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.


Spread the love
Share:

administrator

Leave a Reply

Your email address will not be published. Required fields are marked *