Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಚೇರಿ ಮೇಲೆ ಬಾಂಬ್ ದಾಳಿ – ಶೌಚಾಲಯದಲ್ಲಿ ಅಡಗಿ ಜೀವ ರಕ್ಷಿಸಿಕೊಂಡ ಸ್ಟಾಲಿನ್

Spread the love

ತಮಿಳುನಾಡಿನ ಪಟ್ಟಣ ಪಂಚಾಯತ್ ಅಧ್ಯಕ್ಷರೊಬ್ಬರ (Bomb Blast) ಕಚೇರಿಯ ಮೇಲೆ ಮೂವರು ಬಾಂಬ್‌ ದಾಳಿ ಮಾಡಿ ಹತ್ಯೆ ಮಾಡಲು ಪ್ರಯತ್ನಿಸಿದ್ದಾರೆ. ತಂಜಾವೂರು ಜಿಲ್ಲೆಯ ಪಟ್ಟಣ ಪಂಚಾಯತ್ ಅಧ್ಯಕ್ಷರೂ ಆಗಿರುವ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ನಾಯಕ ಎಂಎ ಸ್ಟಾಲಿನ್, ಗುರುವಾರ ತಮ್ಮ ಕಚೇರಿಯಲ್ಲಿದ್ದಾಗ ಈ ಘಟನೆ ನಡೆದಿದೆ.

ಸ್ಟಾಲಿನ್ ಅವರ ಬೆಂಬಲಿಗರಲ್ಲಿ ಒಬ್ಬರಾದ ಇಳಯರಾಜ ಸೇರಿದಂತೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಟಕಿ ಗಾಜು ಮತ್ತು ಕಚೇರಿಯಲ್ಲಿನ ಕೆಲವು ವಸ್ತುಗಳು ಹಾನಿಗೊಳಗಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾತನಾಡಿದ ಸ್ಟಾಲಿನ್‌, ನಾನು ಶೌಚಾಲಯದಲ್ಲಿ ಹೋಗಿ ಅಡಗಿಕೊಂಡು ನನ್ನ ಪ್ರಾಣವನ್ನು ಉಳಿಸಿಕೊಂಡೆ. ಅವರು ಬಾಂಬ್‌ಗಳನ್ನು ಹಿಡಿದು ಬಂದಿದ್ದರು ಸ್ಟಾಲಿನ್‌ ಹೇಳಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಇಲ್ಲಿಯವರೆಗೆ ತಿಳಿದುಬಂದಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ನಂತರ, ಪಿಎಂಕೆ ಬೆಂಬಲಿಗರು ಪ್ರತಿಭಟನೆಗಳನ್ನು ನಡೆಸಿದರು, ಟೈರ್‌ಗಳನ್ನು ಸುಟ್ಟು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಿಎಂಕೆ ನಾಯಕಿ ಅನ್ಬುಮಣಿ ರಾಮದಾಸ್ ಕೂಡ ದಾಳಿಯನ್ನು ತೀವ್ರವಾಗಿ ಖಂಡಿಸಿದರು, ಕಾನೂನು ಮತ್ತು ಸುವ್ಯವಸ್ಥೆ ಕುಸಿತಕ್ಕೆ ಆಡಳಿತಾರೂಢ ಡಿಎಂಕೆ ಕಾರಣ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪಿಎಂಕೆ ನಾಯಕನ ಕೊಲೆ ಯತ್ನದಲ್ಲಿ ಭಾಗಿಯಾದವರನ್ನು ತಕ್ಷಣ ಬಂಧಿಸಬೇಕೆಂದು ಬಿಜೆಪಿಯ ತಮಿಳುನಾಡು ರಾಜ್ಯ ಅಧ್ಯಕ್ಷ ನೈನಾರ್ ನಾಗೇಂದ್ರನ್ ಒತ್ತಾಯಿಸಿದರು. “ಪಂಚಾಯತ್ ಕಚೇರಿಯ ಮೇಲೆ ಹಾಡಹಗಲೇ ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುವಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಕುಸಿದಿದೆ” ಎಂದು ಅವರು ಆರೋಪಿಸಿದರು.

ಡಿಎಂಕೆ ವಕ್ತಾರ ಡಾ. ಸೈಯದ್ ಹಫೀಜುಲ್ಲಾ ಅವರು ವಿರೋಧ ಪಕ್ಷದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈಗಾಗಲೇ ಪೊಲೀಸರಿಗೆ ಸೂಚನೆ ನೀಡಿದ್ದೇವೆ. ತಕ್ಷಣ ಆರೋಪಿಗಳನ್ನು ಬಂಧಿಸುತ್ತೇವ ಎಂದು ಅವರು ಹೇಳಿದರು. ಇಂತಹ ಅಪರಾಧಗಳು ವೈಯಕ್ತಿಕ ಉದ್ದೇಶಗಳಿಂದಾಗಿ ನಡೆಯುತ್ತವೆ. ಇದಕ್ಕೆ ಪೊಲೀಸರನ್ನು ದೂರಿದರೆ ಪ್ರಯೋಜನವಿಲ್ಲ. ಆದರೂ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ತನಿಖೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *