Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿಎಂ ಕಾರ್ ಮೇಲೂ 7 ಕೇಸ್ -ಟ್ರಾಫಿಕ್ ದಂಡ ಬಾಕಿ

Spread the love

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಈಗ ಟ್ರಾಫಿಕ್‌ ಫೈನ್‌ ಜಮಾನ. ಬೆಂಗಳೂರು ಟ್ರಾಫಿಕ್‌ ಪೊಲೀಸರು, ಟ್ರಾಫಿಕ್‌ ನಿಯಮ ಉಲ್ಲಂಘನೆ ಕೇಸ್‌ನಲ್ಲಿ ಹಾಕಲಾಗಿರುವ ದಂಡದಲ್ಲಿ ಶೇ. 50ರಷ್ಟು ಡಿಸ್ಕೌಂಟ್‌ ನೀಡಲಾಗಿದೆ. ಇದರಿಂದಾಗಿ ಜನರು ತಮ್ಮ ವಾಹನಗಳ ಮೇಲೆ ಇರುವ ಟ್ರಾಫಿಕ್‌ ಫೈನ್‌ಅನ್ನು ವೆಬ್‌ಸೈಟ್‌ ಮೂಲಕ ಚೆಕ್‌ ಮಾಡಿಕೊಂಡು ದಂಡ ಕಟ್ಟಲು ಆರಂಭಿಸಿದ್ದಾರೆ.

ಇದರಿಂದಾಗಿ ಬೆಂಗಳೂರು ಪೊಲೀಸರು ಈಗಾಗಲೇ ಕೋಟ್ಯಂತರ ರೂಪಾಯಿ ಹಣವನ್ನು ದಂಡದ ರೂಪದಲ್ಲಿ ಪಡೆದುಕೊಂಡಿದ್ದರೆ. ಸಾಮಾನ್ಯ ಜನರೇ ದಂಡ ಕಟ್ಟುತ್ತಿರುವಾಗ ನಮ್ಮ ಬುದ್ಧಿವಂತ ನಾಗರೀಕರು, ರಾಜ್ಯದ ಸಿಎಂ ಸಿದ್ಧರಾಮಯ್ಯ ಅವರ ಕಾರ್‌ನ ಮೇಲಿರುವ ಟ್ರಾಫಿಕ್‌ ಉಲ್ಲಂಘನೆ ಕೇಸ್‌ಅನ್ನು ಹೊರತೆಗೆದಿದ್ದು, ನೀವೂ ಡಿಸ್ಕೌಂಟ್‌ನ ಲಾಭ ಪಡದು ದಂಡ ಕಟ್ಟಿ ಎಂದಿದ್ದಾರೆ.

ಫೈನ್‌ ಕ್ಲಿಯರ್‌ ಮಾಡಿ ಸಿಎಂ ಸಾರ್‌

ಟ್ರಾಫಿಕ್‌ ಫೈನ್‌ನಲ್ಲಿ ಶೇ. 50ರಷ್ಟು ಡಿಸ್ಕೌಂಟ್‌ ಇದೆ ಸಿಎಂ ಸಾಹೇಬ್ರೆ, ಈ ಅವಕಾಶ ಸದುಪಯೋಗಪಡಿಸಿಕೊಂಡು ನಿಮ್ಮ ಕಾರ್‌ನ ಮೇಲಿರುವ ಫೈನ್‌ಗಳನ್ನು ಕ್ಲಿಯರ್‌ ಮಾಡಿಕೊಳ್ಳಿ ಎಂದಿದ್ದಾರೆ.

ಸಿಎಂ ಸಿದ್ಧರಾಮಯ್ಯ ಉಪಯೋಗಿಸುವ ಸರ್ಕಾರಿ ಕಾರ್‌ನ ಮೇಲೆ 7 ಟ್ರಾಫಿಕ್‌ ಉಲ್ಲಂಘನೆ ಕೇಸ್‌ಗಳಿವೆ. ಇದರಿಂದಾಗಿ ಈ ಕಾರ್‌ನ ಮೇಲೆ ಒಟ್ಟಾರೆ 2 ಸಾವಿರ ರೂಪಾಯಿ ಟ್ರಾಫಿಕ್‌ ಫೈನ್‌ ಅಮೌಂಟ್‌ ಬಾಕಿ ಇದೆ. ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಕಾರ್ ಫೋಟೊ ಹಾಕಿ ಫೈನ್ ಕಟ್ಟುವಂತೆ ಜನರು ಸೂಚಿಸಿದ್ದಾರೆ.

ಸೀಟ್‌ಬೆಲ್ಟ್‌ ಧರಿಸದ ಸಿಎಂ

ಸರ್ಕಾರಿ ಕಾರು ಕೆಎ 05 GA 2023 ಕಾರಿನ ಮೇಲೆ ಬರೋಬ್ಬರಿ 7 ಟ್ರಾಫಿಕ್ ವಾಯ್ಲೇಷನ್ ಕೇಸ್ ದಾಖಲಾಗಿದೆ. ಈಗಾಗಲೇ ಬೆಂಗಳೂರು ಪೊಲೀಸರು, ಟ್ರಾಫಿಕ್ ಫೈನ್ ಮೇಲೆ 50% ಡಿಸ್ಕೌಂಟ್ ಇದೆ ಎಂದು ಹೇಳಿದ್ದಾರೆ. ಈ ಅವಕಾಶ ಬಳಸಿಕೊಂಡು ದಂಡ ಕಟ್ಟಿ ಎಂದಿದ್ದಾರೆ.

ಕೆಲವು ಕೇಸ್‌ಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾರ್‌ನಲ್ಲಿ ಸೀಟ್‌ಬೆಲ್ಟ್‌ ಧರಿಸದೇ ಇರುವುದು ಕಂಡಿದ್ದರೆ, ಇನ್ನೂ ಕೆಲವು ಕಡೆ ಓವರ್‌ಸ್ಪೀಡ್‌ಗಾಗಿ ಫೈನ್‌ ಹಾಕಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *