Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇಂದೋರ್ ಆಸ್ಪತ್ರೆಯಲ್ಲಿ ಇಲಿಯಿಂದಾಗಿ ಪ್ರಾಣ ಕಳೆದುಕೊಂಡ ನವಜಾತ ಶಿಶುಗಳು

Spread the love

ಆಗಸ್ಟ್ 30-31ರ ಮಧ್ಯರಾತ್ರಿ ನವಜಾತ ಶಿಶುಗಳನ್ನು ಇಲಿಗಳು ಕಚ್ಚಿದ್ದು, ಒಂದರ ಕೈಗೆ ಮತ್ತು ಇನ್ನೊಂದು ಶಿಶುವಿನ ಭುಜಕ್ಕೆ ಗಾಯವಾಗಿತ್ತು.ಕೇವಲ 1.2 ಕಿಲೋಗ್ರಾಂಗಳಷ್ಟು ತೂಕವಿದ್ದ ಒಂದು ಶಿಶು ಮಂಗಳವಾರ ಸಾ*ವನ್ನಪ್ಪಿದ್ದು, ತೀವ್ರ ಸೋಂಕು ಮತ್ತು ಜನ್ಮಜಾತ ತೊಂದರೆಗಳೇ ಸಾವಿಗೆ ಕಾರಣ ಎಂದು ವೈದ್ಯರು ಹೇಳಿಕೊಂಡರೂ, ನವಜಾತ ಶಿಶುಗಳ ವಾರ್ಡ್‌ನಲ್ಲಿ ಹೆಗ್ಗಣ ಕಂಡುಬಂದಿರುವುದು ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ಮತ್ತು ನೈರ್ಮಲ್ಯದ ಕೊರತೆ ಎಂದು ಆಕ್ರೋಶಕ್ಕೆ ಕಾರಣವಾಯಿತು. ಎರಡನೇ ಶಿಶು ಬುಧವಾರ ನಿಧನಹೊಂದಿದೆ. ಈ ವಿಷಯದ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಆಸ್ಪತ್ರೆಯಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.

ರಾಹುಲ್ ಗಾಂಧಿ ಆಕ್ರೋಶ
ಘಟನೆ ಬಗ್ಗೆ ಕಾಂಗ್ರೆಸ್ ಆಕ್ರೋಶ ಹೊರ ಹಾಕಿದ್ದು, ವಿಪಕ್ಷ ನಾಯಕ ರಾಹುಲ್ ಗಾಂಧಿ ”ಇದು ಆಕಸ್ಮಿಕವಲ್ಲ, ಇದು ಸಂಪೂರ್ಣ ಕೊ*ಲೆ. ಈ ಘಟನೆ ಎಷ್ಟು ಭಯಾನಕ, ಅಮಾನವೀಯ ಮತ್ತು ಸಂವೇದನಾರಹಿತವಾಗಿದೆ ಎಂದರೆ ಅದರ ಬಗ್ಗೆ ಕೇಳಿದರೂ ಬೆನ್ನುಮೂಳೆಯು ನಡುಗುತ್ತದೆ. ಸರಕಾರವು ತನ್ನ ಮೂಲಭೂತ ಜವಾಬ್ದಾರಿಯನ್ನು ಪೂರೈಸಲು ವಿಫಲವಾದ ಕಾರಣ ತಾಯಂದಿರು ತನ್ನ ಮಕ್ಕಳನ್ನು ಕಳೆದುಕೊಂಡಿದ್ದಾರೆ ” ಎಂದು ಎಕ್ಸ್ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *