Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಚಿವ ಜಮೀರ್ ಅಹ್ಮದ್ ಆಸ್ತಿ ಪ್ರಕರಣದಲ್ಲಿ ಕೆಜಿಎಫ್ ಬಾಬುಗೆ ನೋಟಿಸ್

Spread the love

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಂಬಂಧ ಕೆಜಿಎಫ್ ಬಾಬು ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ.

ಈ ಪ್ರಕರಣದ ತನಿಖೆ ವೇಳೆ ಕೆಜಿಎಫ್ ಬಾಬು ಮತ್ತು ಜಮೀರ್ ಅಹ್ಮದ್ ನಡುವೆ ಹಣದ ವ್ಯವಹಾರ ನಡೆದಿರೋದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅವರಿಗೆ ನೋಟಿಸ್ ನೀಡಿರುವ ಲೋಕಾಯುಕ್ತ ಅಧಿಕಾರಿಗಳು, 7 ದಿನಗಳ ಒಳಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ

ತನಿಖೆ ವೇಳೆ ಸಚಿವ ಜಮೀರ್ ಅಹ್ಮದ್‌ಗೆ ಕೆಜಿಎಫ್ ಬಾಬು ಅವರು 2013ರಲ್ಲಿ ಮನೆ ಖರೀದಿಗೆ 3.70 ಕೋಟಿ ರೂ. ಸಾಲ ನೀಡಿರುವುದು ತಿಳಿದುಬಂದಿದೆ. ಹಾಗಾಗಿ ಯಾವ ಕಾರಣಕ್ಕಾಗಿ ಹಣ ನೀಡಿದ್ದೀರಿ? ಇಬ್ಬರ ವ್ಯವಹಾರಗಳೇನು? ಈ ಸಂಬಂಧ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದೇ ಪ್ರಕರಣದಲ್ಲಿ ಜಮೀರ್‌ಗೆ 2 ಕೋಟಿ ರೂ. ಸಾಲ ನೀಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಅವರೂ ಕಳೆದ ವಾರ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *