ಪೇದೆ-ಜೆಸ್ಕಾಂ ಸಹೋದರರಿಂದ ಚಿಕ್ಕಮ್ಮನ ಮೇಲೆ 7 ವರ್ಷಗಳ ಅತ್ಯಾಚಾರ

ಯಾದಗಿರಿ : ಚಿಕ್ಕಮ್ಮನ ಮೇಲೆ ಸಹೋದರರಿಬ್ಬರು ಜೀವ ಬೆದರಿಕೆ ಹಾಕಿ 7 ವರ್ಷಗಳಿಂದ ಅತ್ಯಾಚಾರ ನಡೆಸಿದ ಕುರಿತಂತೆ ಇದೀಗ ಯಾದಗಿರಿ ಜಿಲ್ಲೆಯ ಗಿರುಮಿಠಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೊಲೀಸ್ ಪೇದೆ ಹಾಗೂ ಜೆಸ್ಕಾಂ ಉದ್ಯೋಗದಲ್ಲಿರುವ ಯುವಕರು ಪದೇ ಪದೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಯಾದಗಿರಿ ಜಿಲ್ಲೆಯ ಗಿರುಮಿಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಯಾದಗಿರಿ ಸಂಚಾರಿ ಠಾಣೆ ಕಾನ್ಸ್ ಟೇಬಲ್ ರಮೇಶ್ ಹಾಗೂ ಆತನ ಸಹೋದರ ಜೆಸ್ಕಾಂ ನೌಕರ ಲಕ್ಷ್ಮಣ್ ಇಬ್ಬರೂ ತಮ್ಮ ಚಿಕ್ಕಪ್ಪನ ಪತ್ನಿ ಚಿಕ್ಕಮ್ಮನ ಮೇಲೆಯೇ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಈ ಬಗ್ಗೆ ಸಂತ್ರಸ್ತ ಮಹಿಳೆ ಯಾದಗಿರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜೊತೆಗೆ ತನ್ನ ಮಗಳಿಗೂ ಅಶ್ಲೀಲವಾಗಿ ವಾಟ್ಸಾಪ್ ಮೆಸೇಜ್ ಕಳುಹಿಸುತ್ತಿದ್ದಾರೆ. ಬಟ್ಟೆಯನ್ನು ಬಿಚ್ಚಿ ದೇಹವನ್ನು ತೋರಿಸು ಎಂದು ಪೀಡಿಸುತ್ತಿದ್ದಾರೆ. ಪೊಲೀಸ್ ರಮೇಶ ಹಾಗೂ ಆತನ ಸಹೋದರ ಲಕ್ಷ್ಮಣ್ ನಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಈ ಕುರಿತು ಯಾದಗಿರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.