Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಶ್ವದ ಅತಿ ಎತ್ತರದ ಶಿವಲಿಂಗ ನಮ್ಮ ಭಾರತದಲ್ಲೇ ಇದೆ!

Spread the love

ನಮ್ಮ ಭಾರತದಲ್ಲಿಯೇ ಅಲ್ಲದೆ, ನಮ್ಮ ವಿಶ್ವದಲ್ಲಿಯೂ ಅಸಂಖ್ಯಾತ ಶೈವ ಭಕ್ತರಿದ್ದಾರೆ. ಅವರು ತಮ್ಮ ಜೀವಿತಾವಧಿಯಲ್ಲಿ ಸಂದರ್ಶಿಸಬಹುದಾದ ಪವಿತ್ರ ಶಿವಲಿಂಗವನ್ನು ದರ್ಶಿಸಿ ಪಾವನರಾಗುತ್ತಾರೆ. ಭಾರತದಲ್ಲಿ 12 ಪ್ರಮುಖ ಜ್ಯೋತಿರ್ಲಿಂಗಗಳಿವೆ. ಅವುಗಳು ಸಾಕಷ್ಟು ವಿಶೇಷವಾಗಿದ್ದು, ವಿದೇಶಿಗರು ಕೂಡ ಮಹಾಶಿವನ ದರ್ಶನ ಪಡೆಯಲು ಬರುತ್ತಾರೆ.

ನಾವು ಈ ಲೇಖನದಲ್ಲಿ ವಿಶ್ವದ ಅತಿದೊಡ್ಡ ಶಿವಲಿಂಗ ಎಲ್ಲಿದೆ? ಅದರ ಮಹತ್ವವೇನು? ಎಷ್ಟು ಅಡಿ ಎತ್ತರದಲ್ಲಿದೆ? ಯಾರು ನಿರ್ಮಿಸಿದರು? ಎಂಬ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೇವೆ.

ಹೌದು, ವಿಶ್ವದ ಅತಿದೊಡ್ಡ ಶಿವಲಿಂಗವಿರುವ ದೇವಾಲಯ ಬೇರೆಲ್ಲೂ ಇಲ್ಲ ನಮ್ಮ ಭಾರತ ದೇಶದ ಅಸ್ಸಾಂ ರಾಜ್ಯದ ನಾಗಾಂವ್‌ನಲ್ಲಿದೆ. ಈ ಆಲಯದ ಹೆಸರು ‘ಮಹಾ ಮೃತ್ಯುಂಜಯ ದೇವಾಲಯ’ವಾಗಿದೆ. ದೇವಸ್ಥಾನವು ನೋಡಲು ಶಿವಲಿಂಗದ ರೂಪದಲ್ಲಿ ನಿರ್ಮಿಸಲಾಗಿದ್ದು, ವಿಶೇಷವಾದ ವಾಸ್ತುಶಿಲ್ಪದಿಂದ ಕಂಗೊಳಿಸುತ್ತಿದೆ.

ವಿಶ್ವದ ಅತಿದೊಡ್ಡ ಶಿವಲಿಂಗ ಎಷ್ಟು ಎತ್ತರದಲ್ಲಿದೆ?

ಈ ಮಹಾ ಮೃತ್ಯುಂಜಯ ದೇವಾಲಯದಲ್ಲಿ ನೆಲೆಸಿರುವ ಶಿವ ಲಿಂಗವು ಸುಮಾರು 126 ಅಡಿ ಎತ್ತರದಲ್ಲಿದೆ. ಈ ಕಾರಣದಿಂದಲೇ ಇದನ್ನು ವಿಶ್ವದ ಅತಿದೊಡ್ಡ ಶಿವಲಿಂಗ ಎಂದು ಕರೆಯಲಾಗುತ್ತದೆ. ಆಲಯವು ತನ್ನ ವೈಶಿಷ್ಟ್ಯತೆಯಿಂದಾಗಿ ಅನನ್ಯ ಮತ್ತು ಭಕ್ತರಿಗೆ ಬಹಳ ಆಕರ್ಷಕವಾಗಿಸುತ್ತದೆ.
ಆಲಯದ ಇತಿಹಾಸ

ಈ ಬೃಹತ್‌ ಶಿವಲಿಂಗವಿರುವ ದೇವಾಲಯವನ್ನು ಯಾರು ನಿರ್ಮಿಸಿರಬಹುದು ಎಂಬ ಅನುಮಾನ ನಿಮ್ಮಲ್ಲಿಯೂ ಇರಬಹುದು. ಮೂಲಗಳ ಪ್ರಕಾರ, 2003 ರಲ್ಲಿ ಆಚಾರ್ಯ ಭೃಗು ಗಿರಿ ಮಹಾರಾಜರು ಪ್ರಾರಂಭಿಸಿದರು. ಈ ಸ್ಥಳದಲ್ಲಿ ಅವರು ಧ್ಯಾನ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಇದಲ್ಲದೆ, ಗುರು ಶುಕ್ರಾಚಾರ್ಯರು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದ ಸ್ಥಳ ಇದಾಗಿದೆ. ಈ ಚಿಂತನೆಯ ಆಧಾರವಾಗಿ ಆಚಾರ್ಯ ಭೃಗು ಗಿರಿ ಮಹಾರಾಜರು ದೇವಾಲಯ ನಿರ್ಮಾಣಕ್ಕಾಗಿ ಈ ಸ್ಥಳವನ್ನು ಆಯ್ಕೆ ಮಾಡಿದರು. 2003 ರಲ್ಲಿ ಆಲಯದ ನಿರ್ಮಾಣಕ್ಕಾಗಿ ಪ್ರಾರಂಭ ಮಾಡಲಾಯಿತು. ಎರ್. ನಾರಾಯಣ್ ಶರ್ಮಾ ಅವರ ಎಂಜಿನಿಯರಿಂಗ್‌ನಲ್ಲಿನ ಪಾಂಡಿತ್ಯದ ಪ್ರತಿಬಿಂಬದಿಂದಾಗಿ ಈ ದೇವಾಲಯವು ಬಹಳ ಮಹತ್ವವಾಗಿದೆ.
ಈ ಆಲಯಕ್ಕೆ ತಲುಪುವ ಬಗೆ ಹೇಗೆ?

ಅಸ್ಸಾಂ ರಾಜ್ಯದ ಈ ಮಹಾ ಮೃತ್ಯುಂಜಯ ದೇವಾಲಯವು ಗುವಾಹಟಿಯಿಂದ ಸುಮಾರು 120 ಕಿ.ಮೀ ದೂರದಲ್ಲಿದೆ. ಇದು ಅಸ್ಸಾಂನ ಪುರಾನಿಗುಡಮ್ ನಾಗಾನ್‌ನ ಬರ್ಹಂಪುರ್‌ನ ಭೇರ್ಭೇರಿ ಗಾಂವ್‌ನಲ್ಲಿದೆ.
ಮಹಾ ಮೃತ್ಯುಂಜಯ ದೇವಾಲಯದ ಸಮೀಪದ ಪವಿತ್ರ ದೇವಾಲಯಗಳಿವು…

ಸುಕ್ರೇಶ್ವರ ದೇವಸ್ಥಾನ: ಸುಕ್ರೇಶ್ವರ ದೇವಸ್ಥಾನವು ಭಾರತದ ಅಸ್ಸಾಂ ರಾಜ್ಯದಲ್ಲಿರುವ ಮತ್ತೊಂದು ಪ್ರಮುಖ ಶಿವ ದೇವಾಲಯವಾಗಿದೆ. ಇದು ಶಿವನ ಅತಿದೊಡ್ಡ ಲಿಂಗಗಳಲ್ಲಿ ಒಂದನ್ನು ಹೊಂದಿದೆ. ಸುಕ್ರೇಶ್ವರ ಘಾಟ್‌ನ ಮೆಟ್ಟಿಲುಗಳ ಮೇಲೆ ಭಕ್ತರು ಕುಳಿತುಕೊಳ್ಳುತ್ತಾರೆ, ನದಿಯಲ್ಲಿ ಸೂರ್ಯ ಸ್ನಾನ ಮಾಡುತ್ತಾರೆ. ಈ ದೇವಾಲಯವು ಪಿಂಡ ಪ್ರಧಾನ ಮಾಡಲು ಹೆಚ್ಚು ಜನಪ್ರಿಯವಾಗಿದೆ. ಈ ಆಲಯವನ್ನು 1744 ರಲ್ಲಿ ಅಹೋಮ್ ರಾಜ ಪ್ರಮತ್ತ ಸಿಂಹ ನಿರ್ಮಿಸಿದ್ದಾರೆಂದು ನಂಬಲಾಗಿದೆ.

ಕಾಮಾಖ್ಯ ದೇವಿ ದೇವಾಲಯ: ಅಸ್ಸಾಂನ ಗುವಾಹಟಿಯಲ್ಲಿರುವ ಈ ಕಾಮಾಕ್ಯ ದೇವಾಲಯವು ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇದು ಪೂಜ್ಯ ತಾಂತ್ರಿಕ ಪದ್ಧತಿಗಳ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಅಂಬುಬಾಚಿ ಮೇಳ ಎಂದು ನಡೆಯುವ ವಾರ್ಷಿಕ ಉತ್ಸವಕ್ಕೆ ಈ ಆಲಯವು ಹೆಸರುವಾಸಿಯಾಗಿದೆ. ಇದು 51 ಪೀಠಗಳಲ್ಲಿ ಅತ್ಯಂತ ಹಳೆಯ 4 ಪೀಠಗಳಲ್ಲಿ ಒಂದಾಗಿದೆ. (ಸಾಂದರ್ಭಿಕ ಚಿತ್ರ PC: pexels)


Spread the love
Share:

administrator

Leave a Reply

Your email address will not be published. Required fields are marked *