Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಸ್‌ಬಿಐ ಬ್ಯಾಂಕ್‌ಗೆ ₹73 ಲಕ್ಷ ವಂಚನೆ, ಬ್ಯಾಂಕ್ ವ್ಯವಸ್ಥಾಪಕ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

Spread the love

ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಎಸ್ ಬಿಐ ಬ್ಯಾಂಕ್ (ಭಾರತೀಯ ಸ್ಟೇಟ್ ಬ್ಯಾಂಕ್) ಶಾಖೆಗೆ 73 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬ್ಯಾಂಕ್ ನ ವ್ಯವಸ್ಥಾಪಕ ಹಾಗೂ ಇತರರು ಸೇರಿ ನಕಲಿ ದಾಖಲೆ ಸೃಷ್ಟಿಸಿ 73 ಲಕ್ಷ ರೂಪಾಯಿ ಹಣ ದೋಚಿದ್ದಾರೆ. ಹೌಸಿಂಗ್ ಫೈನಾನ್ಸ್ ಕಂಪನಿಯೊಂದರಿಂದ ಬಂದ ಇ-ಮೇಲ್ ಸಂದೇಶ ಆಧರಿಸಿ ನಾಲವರ ಖಾತೆಗಳಿಗೆ 73 ಲಕ್ಷ ಹಣ ವರ್ಗಾವಣೆ ಮಾಡಿರುವ ಬಗ್ಗೆ ಆಗಸ್ಟ್ 25ರಂದು ಎಸ್ ಬಿಐ ಮುಂಬೈ ಶಾಖೆ ಮಲ್ಪೆ ಶಾಖೆಗೆ ವಿವರ ಕೇಳಿತ್ತು.

ಈ ಬಗ್ಗೆ ಪರಿಶೀಲಿಸಿದಾಗ ಮಲ್ಪೆ ಶಾಖೆಯ ವ್ಯವಸ್ಥಾಪಕರಾಗಿರುವ ಮೀರಾ ಪಲ್ಲಟಿ ಟಿ.ಹೆಚ್ ಹಾಗೂ ಹಣ ಪಡೆದ ಖಾತೆದಾರರು ಸೇರಿ ನಕಲಿ ದಾಖಲೆ ಸೃಷ್ಟಿಸಿ ಸ್ವಂತಕ್ಕೆ ಹಣ ಬಳಿಸಿ ಬ್ಯಾಂಕ್ ಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ವಂಚನೆ ಹಿನ್ನೆಲೆಯಲ್ಲಿ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *