ರಾಜಸ್ಥಾನ್ ಶಾಸಕ ದೀಪ್ತಿ ಕಿರಣ್ ಮಹೇಶ್ವರಿ ಕಾರು ಅಪಘಾತ

ರಾಜ್ಸಮಂದ್: ರಾಜಸ್ಥಾನದ ರಾಜ್ಸಮಂದ್ ಕ್ಷೇತ್ರದ ಶಾಸಕಿ ದೀಪ್ತಿ ಕಿರಣ್ ಮಹೇಶ್ವರಿ ಅವರು ಉದಯಪುರ-ರಾಜ್ಸಮಂದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ 1 ಗಂಟೆ ಸುಮಾರಿಗೆ ಉದಯಪುರದ ಅಂಬೆರಿ ಬಳಿ ಗುಜರಾತ್ ನೋಂದಣಿಯ ವಾಹನವು ಬೇರೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

ಮಹೇಶ್ವರಿ ಅವರ ಆಪ್ತ ಸಹಾಯಕ ಜೈ ಮತ್ತು ಚಾಲಕ ಧರ್ಮೇಂದ್ರ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಮೂವರನ್ನೂ ತಕ್ಷಣ ಚಿಕಿತ್ಸೆಗಾಗಿ ಉದಯಪುರದ ಗೀತಾಂಜಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದಲ್ಲಿ ಮಹೇಶ್ವರಿ ಅವರ ಪಕ್ಕೆಲುಬು ಮುರಿತಕ್ಕೊಳಗಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಐಸಿಯುಗೆ ದಾಖಲಿಸಲಾಗಿದೆ. ಅವರ ಆಪ್ತ ಸಹಾಯಕ ಜೈ ಅವರ ತಲೆಗೆ ಗಾಯವಾಗಿದ್ದರೆ, ಚಾಲಕ ಧರ್ಮೇಂದ್ರ ಕೂಡ ಗಾಯಗೊಂಡಿದ್ದಾರೆ.