Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಫ್ಜಲ್ ಖಾನ್ ಫಲಕ – ಪೊಲೀಸರಿಂದ ತೆರವು, ಹಿಂದೂಗಳ ಆಕ್ರೋಶ

Spread the love

ದಾವಣಗೆರೆ – ನಗರದ ಮಟ್ಟಿ ಕಲ್ಲು ಇಲ್ಲಿ ಗಣೇಶೋತ್ಸವದ ನಿಮಿತ್ತ ಅಫ್ಜಲ್ ಖಾನ್ ವಧೆಯ ಫಲಕಗಳನ್ನು ಹಾಕಲಾಗಿತ್ತು. ಇದರಿಂದ ಉದ್ವಿಗ್ನತೆ ಉಂಟಾಗಬಹುದು ಎಂಬ ಕಾರಣ ನೀಡಿ, ಪೊಲೀಸರು ಹಿಂದೂಗಳಿಗೆ ಅವುಗಳನ್ನು ಆಗಸ್ಟ್ 29ರ ಬೆಳಗ್ಗೆ 10.30ರೊಳಗೆ ತೆಗೆದುಹಾಕಲು ಗಡುವು ನೀಡಿದರು; ಆದರೆ ಅದಕ್ಕೂ ಮುನ್ನವೇ ರಾತ್ರಿ 1.30 ಕ್ಕೆ ಪೊಲೀಸರೇ ಅವುಗಳನ್ನು ತೆಗೆದುಹಾಕಿರುವುದು ಬೆಳಕಿಗೆ ಬಂದಿದೆ.

ಇದನ್ನು ಸ್ಥಳೀಯ ಹಿಂದೂಗಳು ತೀವ್ರವಾಗಿ ವಿರೋಧಿಸಿದ್ದಾರೆ.

ಹಿಂದುತ್ವನಿಷ್ಠ ಯುವಕರು ‘ಸಮಾಜಕ್ಕೆ ನಿಜವಾದ ಇತಿಹಾಸ ತಿಳಿಯಬೇಕು’ ಎಂಬ ಉದ್ದೇಶದಿಂದ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ವಧೆ ಮಾಡುತ್ತಿರುವ ಚಿತ್ರವನ್ನು ಹಾಕಿದ್ದರು; ಆದರೆ ಪೊಲೀಸರು ಇದಕ್ಕೆ ವಿರೋಧ ವ್ಯಕ್ತಪಡಿಸಿ ‘ಇದರಿಂದ ಸಮಾಜದಲ್ಲಿ ದ್ವೇಷ ನಿರ್ಮಾಣವಾಗುತ್ತದೆ’ ಎಂದು ಆರೋಪಿಸಿದರು. ಪೊಲೀಸರು ಫಲಕಗಳನ್ನು ತೆಗೆದುಹಾಕಲು ಯತ್ನಿಸಿದಾಗ ಹಿಂದೂ ಯುವಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಇದರಿಂದ ಪೊಲೀಸರು ಅವರಿಗೆ ಫಲಕಗಳನ್ನು ತೆಗೆದುಹಾಕಲು ಗಡುವು ನೀಡಿ, ಅಲ್ಲಿಯವರೆಗೆ ಫಲಕಗಳನ್ನು ತೆಗೆದುಹಾಕುವಂತೆ ತಿಳಿಸಿದ್ದರು; ಆದರೆ ಹಿಂದಿನ ರಾತ್ರಿಯೇ ಪೊಲೀಸರು ಸ್ವತಃ ಫಲಕಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೊನೆಯ ಮಾಹಿತಿ ಲಭ್ಯವಾದಾಗ, ಸ್ಥಳೀಯ ಹಿಂದುತ್ವನಿಷ್ಠ ನಾಯಕರು ಮತ್ತು ಕಾರ್ಯಕರ್ತರು ಆಗಸ್ಟ್ 29 ರಂದು ಸೇರಿ ಸಭೆ ನಡೆಸಲು ನಿರ್ಧರಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *