ಜಡ್ಜ್ ನ್ನು ಬಿಡದ ಕಳ್ಳರು- ಜಡ್ಜ್ ಮನೆಯಲ್ಲಿಯೇ ಲಕ್ಷ ಲಕ್ಷ ಕಳ್ಳತನ ಮಾಡಿದ ಕಿಲಾಡಿಗಳು

ವಿಜಯಪುರ: ಕಳ್ಳತನ ಮಾಡೋನಿಗೆ ಪೊಲೀಸರ ಮನೆಯಾದರೇನು, ನ್ಯಾಯಾಧೀಶರ ಮನೆಯಾದರೇನು. ಕಳ್ಳತನಕ್ಕೆ ಬಂದಾಗ ಕೈತುಂಬಾ ಸಿಕ್ಕಿದರೆ ಸಾಕು. ವಿಜಯಪುರದಲ್ಲಿ ಜಡ್ಜ್ ಮನೆಯಲ್ಲಿಯೇ ಖದೀಮನೊಬ್ಬ ಕನ್ನ ಹಾಕಿದ್ದಾನೆ. ಅದು ಒಂದೆರಡು ಸಾವಿರ ಅಲ್ಲ ಲಕ್ಷಾಂತರ ರೂಪಾಯಿ ಬೆಲರ ಬಾಳುವ ಚಿನ್ನ, ವಜ್ರ, ನಗದನ್ನು ಕದ್ದಿದ್ದಾರೆ.

ಹಾಗಾದ್ರೆ ಆ ಜಡ್ಜ್ ಯಾರು..? ಏನೆಲ್ಲಾ ಕಳ್ಳತನವಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಜಿಲ್ಲಾ ನ್ಯಾಯಾಲಯದ 5ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಸಚಿನ್ ಕೌಶಿಕ್ ಅವರ ಬಾಡಿಗೆ ಮನೆಯಲ್ಲಿ 29 ಲಕ್ಷ ಮೌಲ್ಯದ ಚಿನ್ನಾಭರಣ, ಡೈಮಂಡ್ ಆಭರಣ ಹಾಗೂ 50 ಸಾವಿರ ನಗದನ್ನು ಕಳ್ಳತನ ಮಾಡಲಾಗಿದೆ. ಮುದ್ದೆಬಿಹಾಳ್ 14ನೇ ಕ್ರಾಸ್ ನಲ್ಲಿರುವ ಕೆ.ಹೆಚ್.ಬಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅದೇ ಮನೆಯಲ್ಲಿಯೇ ಇದ್ದ ಒಡವೆ, ಹಣ, ಡೈಮೆಂಡ್ ಆಭರಣವನ್ನೆಲ್ಲ ದೋಚಿ ಕಳ್ಳ ಪರಾರಿಯಾಗಿದ್ದಾನೆ.
ಈ ಕಳ್ಳತನ ಮಾಡುವವರು ತುಂಬಾನೇ ಗಮನ ಹರಿಸುತ್ತಾರೆ. ಪೊಕೀಸರು ಕೂಡ ಜನರಿಗೆ ಸಾಕಷ್ಟು ಬಾರಿ ಎಚ್ಚರಿಕೆ ಕೊಡುತ್ತಾ ಇರುತ್ತಾರೆ. ಎಲ್ಲಾದರೂ ಹೋಗುವಾಗ ಮನೆಯಲ್ಲಿ ವಸ್ತುಗಳ ಕಡೆಗರ ಗಮನವಿರಲಿ ಅಂತ. ಇಲ್ಲಿಯೂ ನ್ಯಾಯಾಧೀಶರ ಕುಟುಂಬವೇ ಯಾಮಾರಿದೆ. ಮನೆಯಲ್ಲಿ ಎಲ್ಲರು ಬಾಗಿಲು ಹಾಕಿಕೊಂಡು ಶಿರಸಿಗೆ ಹೋಗಿದ್ದಾರೆ. ಇದನ್ನ ಗಮನಿಸಿದ ಕಳ್ಳರು ಮನೆಯ ಬೀಗ ಹೊಡೆದು ಕಳ್ಳತನ ಮಾಡಿದ್ದಾರೆ.
ಕಳ್ಳರು ಮುಂಭಾಗದ ಬಾಗಿಲಿನಲ್ಲಿಯೇ ಮನೆಯ ಪ್ರವೇಶ ಮಾಡಿದ್ದಾರೆ. ದೇವರ ಮನೆ ಸೇರಿದಂತೆ ಎಲ್ಲವನ್ನು ಜಾಲಾಡಿದ್ದಾರೆ. ಸಿಕ್ಕಿದ್ದೆಲ್ಲವನ್ನು ದೋಚಿಕೊಂಡು ಹೋಗಿದ್ದಾರೆ. ಸದ್ಯ ವಿಜಯಪುರ ಪೊಲೀಸರು ಸ್ಥಳಕ್ಕೆ ಬಂದು ಶ್ವಾನದಳದೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ.