ವರಮಹಾಲಕ್ಷ್ಮಿ ಹಬ್ಬದಂದು ಕನ್ನ ಹಾಕಿದ್ದ ಕುಖ್ಯಾತ ಕಳ್ಳ ಬೆಂಗಳೂರಿನಲ್ಲಿ ಬಂಧನ

ಬೆಂಗಳೂರು: ವರಮಹಾಲಕ್ಷ್ಮಿ (Varamahalakshmi) ಹಬ್ಬದ ದಿನವೇ ಬೆಂಗಳೂರಿನ (Bengaluru) ಕೆಂಗೇರಿ (Kengeri) ಮನೆಯೊಂದರಲ್ಲಿ ದರೋಡೆ (Robbery) ಮಾಡಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು 31 ವರ್ಷದ ಕಾರ್ತಿಕ್ ಎಂದು ಗುರುತಿಸಲಾಗಿದೆ
ಈತ ತಮಿಳುನಾಡು ಮೂಲದವನಾಗಿದ್ದು ಪೇಂಟರ್ ಆಗಿ ಕೆಲಸ ಮಾಡುತ್ತಿದ್ದನು. ಬಂಧಿತನ ಬಳಿಯಿಂದ ಸುಮಾರು 10 ಲಕ್ಷ ಬೆಲೆಬಾಳುವ ಒಟ್ಟು 100 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ನಿವಾಸಿ ಸೀತಾಳ್ ಎಂಬವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನಲ್ಲಿ, ಆಗಸ್ಟ್ 8 ರ ವರಮಹಾಲಕ್ಷ್ಮಿ ಹಬ್ಬದ ದಿನ ಅಪರಿಚಿತ ವ್ಯಕ್ತಿಯೋರ್ವ ಯಾವುದೋ ಆಯುಧದಿಂದ ಮನೆಯ ಡೋರ್ ಲಾಕ್ ಮುರಿದು ಒಳ ಪ್ರವೇಶಿಸಿದ್ದಾನೆ. ಬಳಿಕ ಬೀರುವಿನ ಲಾಕ್ ಮುರಿದು ಅದರಲ್ಲಿಟ್ಟಿದ್ದ ಸುಮಾರು 55 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ 6000 ರೂ. ನಗದು ಹಣವನ್ನು ಕಳವು ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಈ ಪ್ರಕರಣವನ್ನು ಬೆಂಗಳೂರು ನಗರ, ನೈಋತ್ಯ ವಿಭಾಗದ ಮಾನ್ಯ ಉಪ-ಪೊಲೀಸ್ ಕಮೀಷನರ್ ಅನಿತಾ ಬಿ ಹದ್ದಣವರ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಕೆಂಗೇರಿ ಉಪ-ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಕಮೀಷನರ್ ಬಸವರಾಜ ಎ ತೇಲಿ ರವರ ನೇತೃತ್ವದಲ್ಲಿ, ಕೆಂಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಎನ್ ಹಾಗೂ ಪಿ.ಎಸ್.ಐ ರವರಾದ. ಹನಮಂತ ಹಾದಿಮನಿ, ಸೋಮಪ್ಪಗೌಡ ಬಿರಾದಾರ, ಮಂಜುನಾಥ ದಡ್ಡಿಮನಿ ಮತ್ತು ಅಪರಾಧ ಸಿಬ್ಬಂದಿಯವರಾದ ಆರ್ ರಮೇಶ್, ಚಂದ್ರಶೇಖರ್, ಶಿವಕುಮಾರ್, ಶಬ್ಬಿರ, ಸಿದ್ದಾರೂಡ ಬ್ಯಾಗಿ, ಕನಕ ಎಂ, ಹನಮಂತಪ್ಪ, ಶ್ರವಣಕುಮಾರ, ರಾಜು ಎ, ಮಧುಕರ, ಸೈಪನ್‌ಅಹ್ಮದ್ ಹಾಗೂ ಪಶ್ಚಿಮ ವಿಭಾಗದ ಟೆಕ್ನಿಕಲ್ ವಿಂಗ್‌ನ ಸಿಬ್ಬಂದಿ ಮತ್ತು ಬೆರಳು ಮುದ್ರೆ ಘಟಕದ ಸಿಬ್ಬಂದಿ ಆರೋಪಿಯನ್ನು ಪತ್ತೆಮಾಡಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಯು ಕುಖ್ಯಾತ ಅಂತರಾಜ್ಯ ಕಳ್ಳನಾಗಿದ್ದು ವಿಶೇಷವಾಗಿ ಹಬ್ಬದ ದಿನಗಳಲ್ಲಿ ಲಾಕ್ ಹಾಕಿರುವ ಮನೆಗಳನ್ನು ಗುರುತಿಸಿ ಡೋರ್ ಲಾಕ್ ಮುರಿದು ಚಿನ್ನಾಭರಣಗಳನ್ನು ಕಳ್ಳತನ ಮಾಡುತ್ತಿದ್ದನು. ಈತನ ವಿರುದ್ಧ ತಮಿಳುನಾಡು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮತ್ತು ಬೆಂಗಳೂರು ನಗರದ ಬೇರೆ ಬೇರೆ ಠಾಣೆಗಳಲ್ಲಿ ಕನ್ನಕಳವು ಪ್ರಕರಣಗಳು ಮತ್ತು ಮಧುರೈ ಜಿಲ್ಲೆಯ ಎಮ್ ಛತ್ರಪಟ್ಟಿ ಪೊಲೀಸ್ ಠಾಣೆಯ ಒಂದು ಪೋಕ್ಸೋ ಕಾಯ್ದೆಯಡಿಯ ಪ್ರಕರಣ ಸೇರಿದಂತೆ ಒಟ್ಟು 31 ಪ್ರಕರಣಗಳು ದಾಖಲಾಗಿ ದೆ. ಸದ್ಯ ಆರೋಪಿಯು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ, ಆರೋಪಿಯ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಿದೆ.