Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಭಾರೀ ಅಡಚಣೆ: ಬೆಂಗಳೂರು ಸೇರಿ ರಾಜ್ಯಾದ್ಯಂತ ಆರು ಗಂಟೆಗಳ ಕಾಲ ಗ್ರಾಹಕರಿಗೆ ಸಮಸ್ಯೆ

Spread the love

ಬೆಂಗಳೂರು : ಟೆಲಿಕಾಂ ದಿಗ್ಗಜ ಏರ್‌ಟೆಲ್ ಭಾನುವಾರ ತನ್ನ ಸೇವೆಯಲ್ಲಿ ಅಡಚಣೆಯನ್ನು ಎದುರಿಸಿತು. ಇದರಿಂದಾಗಿ ರಾಜ್ಯದಾದ್ಯಂತ, ವಿಶೇಷವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾವಿರಾರು ಗ್ರಾಹಕರು ಆರು ಗಂಟೆಗಳ ಕಾಲ ಕರೆಗಳನ್ನು ಮಾಡಲು ಅಥವಾ ಇಂಟರ್ನೆಟ್ ಬಳಸಲು ಸಾಧ್ಯವಾಗಲಿಲ್ಲ.

ಈ ಕುರಿತು ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಮತ್ತು ಬ್ರಾಡ್‌ಬ್ಯಾಂಡ್ ಬಳಕೆದಾರರು ದೂರು ಸಲ್ಲಿಸಿದರು ಮತ್ತು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿಚಾರ ತಿಳಿಸಿದರು.

ಔಟೇಜ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಡೌನ್‌ಡೆಕ್ಟರ್‌ನಲ್ಲಿ ಬೆಳಿಗ್ಗೆ 10.44ರ ಸುಮಾರಿಗೆ ಪ್ರಾರಂಭವಾಗಿ ಮಧ್ಯಾಹ್ನ 12.15 ರ ಹೊತ್ತಿಗೆ ಅನೇಕ ದೂರುಗಳು ದಾಖಲಾಗಿವೆ. 7,100ಕ್ಕೂ ಹೆಚ್ಚು ಬಳಕೆದಾರರು ಕನೆಕ್ಟಿವಿಟಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ದುರ್ಬಲ ಸಿಗ್ನಲ್‌ ಮತ್ತು ಕೆಲವು ಸ್ಥಳಗಳಲ್ಲಿ ಸಂಪೂರ್ಣ ಬ್ಲಾಕೌಟ್ ಆಗಿರುವ ಕುರಿತು ಬಳಕೆದಾರರು ವರದಿ ಮಾಡಿದ್ದಾರೆ. ಇದು ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಕಂಪನಿಯ ಎರಡನೇ ಪ್ರಮುಖ ಸೇವಾ ವೈಫಲ್ಯವಾಗಿದೆ. ಆಗಸ್ಟ್ 19 ರಂದು, ದೆಹಲಿ NCR ನಲ್ಲಿ 3,500ಕ್ಕೂ ಹೆಚ್ಚು ಬಳಕೆದಾರರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದರು.

ಡೌನ್‌ಡಿಟೆಕ್ಟರ್ ಡೇಟಾ ಪ್ರಕಾರ, ಶೇ 52 ರಷ್ಟು ದೂರುದಾರರು ‘ಸಿಗ್ನಲ್ ಇಲ್ಲ’ ಎಂಬ ಸಂದೇಶವನ್ನು ಸ್ವೀಕರಿಸಿದ್ದಾರೆ. ಶೇ 31ರಷ್ಟು ಜನರು ಮೊಬೈಲ್ ಡೇಟಾ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಕರ್ನಾಟಕವನ್ನು ಹೊರತುಪಡಿಸಿ, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಾದ ಬಳಕೆದಾರರು ಸಹ ಇಂಟರ್ನೆಟ್ ಬಳಸುವಾಗ ಮತ್ತು ಕರೆಗಳನ್ನು ಮಾಡುವಾಗ ಅಡಚಣೆಗಳನ್ನು ಎದುರಿಸಿರುವ ಕುರಿತು ದೂರು ಸಲ್ಲಿಸಿರುವುದಾಗಿ ಡೌನ್‌ಡಿಟೆಕ್ಟರ್ ವರದಿ ಮಾಡಿದೆ.

X ನಲ್ಲಿ ಬಳಕೆದಾರರಿಗೆ ಪ್ರತಿಕ್ರಿಯಿಸಿದ ಏರ್‌ಟೆಲ್, ‘ತಾತ್ಕಾಲಿಕ ಸಂಪರ್ಕ ಸಮಸ್ಯೆಗಳಿಂದ’ ಈ ಅಡಚಣೆ ಉಂಟಾಗಿದೆ ಮತ್ತು ಒಂದು ಗಂಟೆಯೊಳಗೆ ಸೇವೆಗಳನ್ನು ಪುನಃಸ್ಥಾಪಿಸಲಾಗುವುದು ಎಂದು ಭರವಸೆ ನೀಡಿತು. ಮಧ್ಯಾಹ್ನ 1 ಗಂಟೆಯ ನಂತರ ಸಮಸ್ಯೆಯು ಪರಿಹಾರವಾಗಲು ಪ್ರಾರಂಭಿಸಿತು. ಆದಾಗ್ಯೂ, ಸಂಜೆ 4 ಗಂಟೆಯ ಹೊತ್ತಿಗೆ, 150ಕ್ಕೂ ಹೆಚ್ಚು ಬಳಕೆದಾರರು ಇನ್ನೂ ಅಡಚಣೆ ಎದುರಿಸಿದರು.

‘ಈ ಸಮಸ್ಯೆ ಆರು ಗಂಟೆಗಳಿಗಿಂತ ಹೆಚ್ಚು ಕಾಲ ಇತ್ತು ಎಂದು ಅನೇಕ ಗ್ರಾಹಕರು ಹೇಳಿದ್ದಾರೆ. ‘ಏರ್‌ಟೆಲ್ ಪೋಸ್ಟ್‌ಪೇಯ್ಡ್ ಆರು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿಲ್ಲ- ಕರೆಗಳಿಲ್ಲ, ಇಂಟರ್ನೆಟ್ ಇಲ್ಲ. ಈ ಸಮಯದಲ್ಲಿ ನಾವು ಗ್ರಾಹಕ ಸೇವಾ ಕೇಂದ್ರವನ್ನು ಸಹ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಟ್ರಾಯ್ ಕ್ರಮ ಕೈಗೊಳ್ಳಬೇಕು. ಏರ್‌ಟೆಲ್ ಇಂಡಿಯಾ ನಾಗರಿಕರನ್ನು ಮೋಸಗೊಳಿಸಿದಂತೆ ಕಾಣುತ್ತಿದೆ’ ಎಂದು ಬಳಕೆದಾರರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಯಾರಾದರೂ ಏರ್‌ಟೆಲ್ ವೈಫೈ ಅಥವಾ ಏರ್‌ಟೆಲ್ ಕರೆ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಯೇ? ಬೆಳಿಗ್ಗೆಯಿಂದ ನನಗೆ ಇಂಟರ್ನೆಟ್ ಸಿಗಲಿಲ್ಲ ಮತ್ತು ಅವರ ಗ್ರಾಹಕ ಸೇವಾ ವ್ಯಕ್ತಿಗಳು ಸಹ ಕರೆಗಳಿಗೆ ಉತ್ತರಿಸುತ್ತಿಲ್ಲ. @Airtel_Presence @airtelIndia’ ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *