Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಾವೇರಿಯ ಆಸ್ಪತ್ರೆಯಲ್ಲಿ ಅಚ್ಚರಿ ಘಟನೆ! ಬಾಲಕನ ಗಾಯಕ್ಕೆ ಹೊಲಿಗೆಯ ಬದಲು ಫೇವಿಕ್ವಿಕ್ ಹಚ್ಚಿದ ನರ್ಸ್

Spread the love


ಹಾವೇರಿ: ಗಾಯ ಮಾಡಿಕೊಂಡು ಆಸ್ಪತ್ರೆಗೆ ಹೋದರೆ ಚಿಕಿತ್ಸೆ ನೀಡಿ ಹೊಲಿಗೆ ಹಾಕುವುದು ವಾಡಿಕೆ. ಆದರೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರ ಶೂಶ್ರುಷಕಿಯೊಬ್ಬರು ಬಾಲಕನ ಕೆನ್ನೆಗೆ ಫೆವಿಕ್ವಿಕ್ ಹಚ್ಚಿ ಕಳುಹಿಸಿದ್ದಾರೆ!

ವೀಡಿಯೋ ಚಿತ್ರೀಕರಿಸಿರುವ ಪೋಷಕರಿಂದ ಆರೋಗ್ಯ ರಕ್ಷಾ ಸಮಿತಿಗೆ ದೂರು.

ಜ. 14ರಂದು ಗುರುಕಿಶನ್ ಎಂಬ 7 ವರ್ಷದ ಬಾಲಕ ಆಡುವಾಗ ಬಿದ್ದು ಕೆನ್ನೆ ಮೇಲೆ ಗಾಯ ಮಾಡಿಕೊಂಡಿದ್ದ. ಪಾಲಕರು ತತ್‌ಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿನ ನರ್ಸ್ ಬಾಲಕನಿಗೆ ಚಿಕಿತ್ಸೆ ನೀಡಿ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಗಮ್ ಹಚ್ಚಿದರು. ಆಗ ಪೋಷಕರು ಬಾಲಕನಿಗೆ ಫೆವಿಕ್ವಿಕ್ ಏಕೆ ಹಾಕಿದ್ದೀರಿ ಎಂದು ಪ್ರಶ್ನಿಸಿದಾಗ, “ಹೊಲಿಗೆ ಬಾಲಕನ ಕೆನ್ನೆಯ ಮೇಲೆ ಕಲೆ ಉಳಿಯುತ್ತದೆ. ಹೀಗಾಗಿ ಚರ್ಮದ ಮೇಲಷ್ಟೇ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ’ ಎಂದು ಸಮಜಾಯಿಸಿ ನೀಡಿದ್ದರು.
ಘಟನೆಯನ್ನು ವೀಡಿಯೋ ಚಿತ್ರೀಕರಿಸಿರುವ ಬಾಲಕನ ಪೋಷಕರು ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ. ಈ ಬಗ್ಗೆ ವರದಿ ಪಡೆದ ಡಿಎಚ್‌ಒ ರಾಜೇಶ್ ಸುರಗಿಹಳ್ಳಿ ಶುಶೂಷಕಿಯನ್ನು ಗುತ್ತಲ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಿದ್ದಾರೆ.

ಫೆವಿಕ್ವಿಕ್ ಹಾಕಿದ್ದರೂ ಬಾಲಕ ಆರಾಮವಾಗಿದ್ದಾನೆ ಎನ್ನಲಾಗಿದೆ.

ಗಾಯಕ್ಕೆ ಫೆವಿಕ್ವಿಕ್ ಹಾಕುವುದು ತಪ್ಪು ವಿಧಾನ. ಆಡೂರು ಪಿಎಚ್‌ಸಿ ನರ್ಸ್ ಈ ರೀತಿ ಮಾಡಿರುವುದು ವೀಡಿಯೋ ನೋಡಿದ ಮೇಲೆ ಗೊತ್ತಾಗಿದೆ. ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ತತ್‌ಕ್ಷಣ ಶಿಸ್ತು ಕ್ರಮ ಜರುಗಿಸಲಾಗುವುದು.


Spread the love
Share:

administrator

Leave a Reply

Your email address will not be published. Required fields are marked *