ಚಿನ್ನಾಭರಣ ಖರೀದಿದಾರರಿಗೆ ಶಾಕ್: ಒಂದೇ ದಿನದಲ್ಲಿ 1050 ರೂ. ಭಾರೀ ಏರಿಕೆ!

ಬೆಂಗಳೂರು: ಎರಡು ದಿನ ಇಳಿಕೆ ಆಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಭಾರೀ ಏರಿಕೆ ಆಗಿದೆ. ಚಿನ್ನದ ಬೆಲೆಯಲ್ಲಿ ಜನವರಿ ತಿಂಗಳ ಟ್ರೆಂಡ್ ಮುಂದುವರಿದಿದ್ದು, ಮತ್ತೆ ಭಾರೀ ಏರಿಕೆ ಆಗಿದೆ. ಇಂದು ಒಂದೇ ದಿನ 22 ಗ್ರಾಂ ಚಿನ್ನದ ಬೆಲೆ 1050 ರೂ ಏರಿಕೆ ಆಗಿದ್ದರೆ, ಶುದ್ಧ ಚಿನ್ನದ ಬೆಲೆಯಲ್ಲಿ 1150 ರೂ ಏರಿಕೆ ಆಗಿದೆ.

ಇಂದಿನ ಬೆಲೆ ಎಷ್ಟಿದೆ?
ದೇಶೀಯ ಮಾರುಕಟ್ಟೆಯಲ್ಲಿ ಫೆಬ್ರವರಿ 4 ರಂದು ರಂದು 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆಯಲ್ಲಿ 105 ರೂಪಾಯಿ ಏರಿಕೆ ಆಗಿದೆ. ಹೀಗಾಗಿ ಇಂದಿನ ಬೆಲೆ 1 ಗ್ರಾಂ ಗೆ 7,810 ರೂ ಇದೆ. 24 ಕ್ಯಾರೆಟ್ ಚಿನ್ನ ಕೂಡಾ ದರ 115 ರೂ ಏರಿಕೆ ಆಗಿದ್ದು, 1 ಗ್ರಾಂ ಚಿನ್ನದ ಬೆಲೆ 8520 ರುಪಾಯಿ ಆಗಿದೆ.
10 ಗ್ರಾಂ ಬೆಲೆ ಎಷ್ಟು?
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 78,100 ರೂ ಇದ್ದು, 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 85,200 ರೂ ಆಗಿದೆ. ಸೋಮವಾರದಿಂದ ಮಂಗಳವಾರಕ್ಕೆ ಚಿನ್ನದ ದರದಲ್ಲಿ 1150 ರೂ ಏರಿಕೆ ಆಗಿದೆ.