Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳಗಾವಿಯ ‘ಕ್ಯಾಂಪ್‌ ಶೂಸ್‌’: ಬ್ರಿಟಿಷರ ಕಾಲದ ಪರಂಪರೆ, ಕೈಯಲ್ಲೇ ತಯಾರಾಗುವ ಈ ಬೂಟುಗಳ ವಿಶೇಷತೆ ಏನು?

Spread the love

ಗಡಿನಾಡು ಬೆಳಗಾವಿ ತಂಪು ವಾತಾವರಣದ ಜತೆಗೆ ಕುಂದಾಗೂ ಪ್ರಸಿದ್ಧ. ಸದಾ ಗಡಿ ತಂಟೆ ತಕರಾರಿನ ಜತೆಗೆ ಗೋವಾ, ಮಹಾರಾಷ್ಟ್ರ ಗಡಿ ಹಂಚಿಕೊಂಡಿದ್ದರಿಂದ ವಾಣಿಜ್ಯ ವಹಿವಾಟಿಗೂ ಇಂಬು ನೀಡಿದೆ. ಪ್ರವಾಸಿ ತಾಣಗಳಷ್ಟೇ ಇಲ್ಲಿನ ಸ್ಥಳೀಯ “ಕ್ಯಾಂಪ್‌ ಶೂಸ್‌’ ಕೂಡ ಪ್ರಸಿದ್ಧಿ.

ಬೆಳಗಾವಿ ಬಂದವರು ಲೋಕಲ್‌ ಮಾರ್ಕೆಟ್‌ ಕ್ಯಾಂಪ್‌ ಶೂಸ್‌ಗಳನ್ನು ಖರೀದಿಸುತ್ತಾರೆ. ಈ ಶೂಸ್‌ಗಳ ವಿಶೇಷತೆ ಏನು, ತಯಾರಾಗುವುದು ಹೇಗೆ, ವಾರ್ಷಿಕ ವಹಿವಾಟು ಎಷ್ಟು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಬ್ರಿಟಿಷರು ಆರಂಭಿಸಿದ ಕ್ಯಾಂಪ್‌
1830ರ ಸುಮಾರಿಗೆ ಬ್ರಿಟಿಷರು ಬೆಳಗಾವಿಯಲ್ಲಿ “ಮಿಲಿಟರಿ ಛಾಚಣಿ'(ಕ್ಯಾಂಪ್‌ ಏರಿಯಾ) ಆರಂಭಿಸಿದರು. ತಮಗೆ, ಸೇನೆಗೆ ಬೇಕಾಗುವ ಧೋಬಿ ಲೇನ್‌ (ಬಟ್ಟೆ ಒಗೆಯುವವರು), ಟೈಲರ್‌ ಲೇನ್‌ (ಬಟ್ಟೆ ಹೊಲಿಯುವವರು), ಬುಚರ್‌ ಲೇನ್‌ (ಮಾಂಸ ಕತ್ತರಿಸುವವರು), ಬಾರ್ಬರ್‌ ಲೇನ್‌ (ಹೇರ್‌ ಕಟ್‌ ಮಾಡುವವರು) ವ್ಯವಸೆೆ§ಗಳನ್ನು ಈ ಪ್ರದೇಶದಲ್ಲಿ ನಿರ್ಮಿಸಿದರು. ದೊಡ್ಡ ಪ್ರದೇಶದಲ್ಲಿ ಪ್ರತ್ಯೇಕ ಓಣಿಗಳಂತೆ ಇವುಗಳನ್ನು ನಿರ್ಮಿಸಿಕೊಂಡಿದ್ದರು. ಆ ಓಣಿಯÇÉೇ “ಮೋಚಿ ಲೇನ್‌'(ಬೂಟ್‌ ತಯಾರಿಸುವವರು) ಇತ್ತು. “ಮೋಚಿ ಲೇನ್‌’ನಲ್ಲಿದ್ದ ಮೋಚಿ ಸಮುದಾಯದವರು ಬ್ರಿಟಿಷರು ಹಾಗೂ ಸೇನೆಗೆ ಬೇಕಾದ ಶೂಗಳನ್ನು ತಯಾರಿಸುತ್ತಿದ್ದರು. ಅದೇ ಪರಂಪರೆ ಈಗ ಮುಂದುವರಿದಿದೆ.

ಬೆಳಗಾವಿಯಲ್ಲಿ 15 ಸಾವಿರದಷ್ಟು ಮೋಚಿ ಸಮುದಾಯದವರು
ಬೂಟುಗಳನ್ನು ತಯಾರಿಸುವವರು ಬಹುತೇಕ ಮೋಚಿ ಸಮಾಜದವರು. ಬೆಳಗಾವಿಯಲ್ಲಿ 15,000ದಷ್ಟು ಜನಸಂಖೆೆÂಯಿದೆ. ಬ್ರಿಟಿಷರು ನಿರ್ಮಿಸಿದ್ದ ಕ್ಯಾಂಪ್‌ ಪ್ರದೇಶದÇÉೇ 25 ಅಂಗಡಿಗಳಿವೆ. 30-40 ಕುಟುಂಬ ಉದ್ಯಮದಲ್ಲಿ ತೊಡಗಿವೆ. ಇವರು ಕೇವಲ ಬೂಟು ಮಾತ್ರ ತಯಾರಿಸುತ್ತಿದ್ದು, ಚಪ್ಪಲಿ ತಯಾರಿಕೆ ಗೊತ್ತಿಲ್ಲ. ಈಗ ಮೋಚಿ ಸಮಾಜದ 4-5ನೇ ತಲೆಮಾರಿನವರು ಶೂ ತಯಾರಿ, ಮಾರಾಟ ಉದ್ಯಮದಲ್ಲಿ ತೊಡಗಿಕೊಂಡಿ¨ªಾರೆ.

ಬೂಟುಗಳಿಗೆ ಕೋಲ್ಕತಾ, ಚೆನ್ನೈನಿಂದ ಕಚ್ಚಾ ಸಾಮಗ್ರಿ
ಇಲ್ಲಿನ ಮಾರುಕಟೆೆrಯಲ್ಲಿ ತಯಾರಾಗುವ ಬೂಟುಗಳಿಗೆ ಕಚ್ಚಾ ವಸ್ತುಗಳನ್ನು ಚೆನ್ನೈ ಹಾಗೂ ಕೋಲ್ಕತಾದಿಂದ ತರಿಸಿಕೊಳ್ಳಲಾಗುತ್ತದೆ. ಶೂ ತಯಾರಿಕೆಗೆ ಬೇಕಾಗುವ ಚರ್ಮ ಚೆನ್ನೈನಿಂದ ಬಂದರೆ, ಶೂ ಸೋಲ…, ಅಂಟು, ಹೊಲಿಗೆಗೆ ಬೇಕಾದ ದಾರ, ಇತರ ಕೆಲವು ರಾಸಾಯನಿಕಗಳನ್ನು ಕೋಲ್ಕತಾದಿಂದ ತರಿಸಿಕೊಳ್ಳಲಾಗುತ್ತದೆ. ಕ್ಯಾಂಪ್‌ ಶೂಗಳಿಗಾಗಿಯೇ ವಿಶೇಷವಾಗಿ ಚರ್ಮ, ಸಾಮಗ್ರಿಗಳನ್ನು ಇವೆರಡು ರಾಜ್ಯಗಳಲ್ಲಿ ವ್ಯಾಪಾರಸ್ಥರು ಸಿದ್ಧಪಡಿಸಿ ಕಳುಹಿಸುತ್ತಾರೆ.

ಬೆಳಗಾವಿ ಕ್ಯಾಂಪ್‌ ಏರಿಯಾದಲ್ಲಿ ಎಲ್ಲವೂ “ಹ್ಯಾಂಡ್‌ ಮೇಡ್‌’
ಬೆಳಗಾವಿ ಕ್ಯಾಂಪ್‌ ಏರಿಯಾದಲ್ಲಿ ತಯಾರಾಗುವ ಬೂಟುಗಳನ್ನು ಕೈಯಿಂ ದಲೇ ತಯಾರಿಸುವುದು ವಿಶೇಷ. ಗ್ರಾಹಕರು ತಮ್ಮ ಪಾದದ ಅಳತೆ ನೀಡಿ, ತಮಗೆ ಬೇಕಾದ ವಿನ್ಯಾಸ, ಬಣ್ಣ ಹೇಳಿದರೆ ಅವರಿಷ್ಟದಂತೆ ಬೂಟು ತಯಾರಿಸಿ ಕೊಡುತ್ತಾರೆ. ಚರ್ಮ ಹೊಲಿಯಲು ಮಾತ್ರ ಇತ್ತೀಚಿನ ದಿನಗಳಲ್ಲಿ ಯಂತ್ರ ಬಳಸುತ್ತಿ¨ªಾರೆ. ಇದನ್ನು ಬಿಟ್ಟರೆ ಮಿಕ್ಕ ಎಲ್ಲ ಕೆಲಸವನ್ನೂ ಅಂದರೆ ಚರ್ಮ ಕತ್ತರಿಸುವುದು, ಟ್ಯಾನಿಂಗ್‌, ವಿನ್ಯಾಸ ಸಿದ್ಧಪಡಿಸುವುದು ತಾವೇ ನಿರ್ವಹಿಸುತ್ತಾರೆ.

ಒಂದು ಜತೆ ಶೂ ತಯಾರಿಕೆಗೆ 15 -20 ದಿನ ಬೇಕು!
ಬಾಟಾ, ಪ್ಯಾರಾಗನ್‌, ಸ್ಪಾರ್ಕ್‌ ಸೇರಿದಂತೆ ಪ್ರಮುಖ ಬ್ರ್ಯಾಂಡೆಡ್‌ ಕಂಪೆನಿಗಳು ಅತ್ಯಾಧುನಿಕ ಯಂತ್ರಗಳ ಮೂಲಕ ದಿನಕ್ಕೆ ಸಾವಿರಾರು ಜತೆ ಬೂಟು ತಯಾರಿಸುತ್ತವೆ. ಆದರೆ ಕ್ಯಾಂಪ್‌ ಏರಿಯಾದಲ್ಲಿ 1 ಜತೆ ಶೂ ತಯಾರಿಸಲು 15ರಿಂದ 20 ದಿನಗಳು ಬೇಕಾಗುತ್ತದೆ. ಏಕೆಂದರೆ ಇಲ್ಲಿ ಎಲ್ಲವನ್ನೂ ಕೈಯಿಂದಲೇ ಮಾಡಬೇಕು. ಅಳತೆ ಕೂಡ ಹೆಚ್ಚು ಕಮ್ಮಿ ಆಗದಂತೆ ನಿಗಾ ವಹಿಸಬೇಕು.ಯಂತ್ರ ಬಳಕೆ ಕಮ್ಮಿ ಇರುವುದರಿಂದ ಹ್ಯಾಂಡ್‌ಮೇಡ್‌.

ರೆಡಿಮೇಡ್‌ ಕೂಡ ಇಲ್ಲಿ ಹ್ಯಾಂಡ್‌ಮೇಡ್‌
ಮೊದಲು ಇಲ್ಲಿ ಗ್ರಾಹಕರು ಬಂದು ಅಳತೆ, ವಿನ್ಯಾಸ, ಬಣ್ಣ ಹೇಳಿ ಆರ್ಡರ್‌ ಕೊಟ್ಟ ಮೇಲೆ 20 ದಿನಗಳ ಸಮಯ ತೆಗೆದುಕೊಂಡು ಸ್ವಲ್ಪ ಮುಂಗಡ ಹಣ ಪಡೆದು ಶೂ ತಯಾರಿಸಿಕೊಡುತ್ತಿದ್ದರು. ಆದರೆ ಅನ್ಯ ಊರುಗಳಿಂದ ಬಂದವರು ಆರ್ಡರ್‌ ಕೊಟ್ಟು ಹೋಗುವ ಪರಿಸ್ಥಿತಿಯೂ ಇರುವುದಿಲ್ಲ. ಹೀಗಾಗಿ ಬ್ರ್ಯಾಂಡೆಡ್‌ ಶೂಗಳಂತೆ ಮುಂಚಿತವಾಗಿಯೇ ವಿವಿಧ ವಿನ್ಯಾಸ, ಅಳತೆ, ಬಣ್ಣದ ಶೂ ಕೈಯಿಂದಲೇ ತಯಾರಿಸಿ ಅಂಗಡಿಗಳಲ್ಲಿ ಇಡುತ್ತಿ¨ªಾರೆ.

ಇಲ್ಲಿ ಚಪ್ಪಲಿ, ನ್ಪೋರ್ಟ್ಸ್ ಶೂ ಸಿಗಲ್ಲ
ಕ್ಯಾಂಪ್‌ ಏರಿಯಾದ ವಿಶೇಷತೆ ಎಂದರೆ ಇಲ್ಲಿ ಕೇವಲ ಚರ್ಮದ ಬೂಟ್‌ಗಳನ್ನು ಮಾತ್ರ ತಯಾರಿಸಲಾಗುತ್ತದೆ. ಚಪ್ಪಲಿ ಹಾಗೂ ನ್ಪೋರ್ಟ್ಸ್ ಶೂಗಳು ಸಿಗುವುದಿಲ್ಲ. ಏಕೆಂದರೆ ಮೊದಲಿನಿಂದಲೂ ಇಲ್ಲಿ ಚರ್ಮದ ಶೂಗಳನ್ನು ಮಾತ್ರ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದು ಈಗಲೂ ಅದೇ ವ್ಯವಸ್ಥೆ ಮುಂದುವರಿದಿದೆ. ಅಲ್ಲದೇ ಚಪ್ಪಲಿ ಅಥವಾ ನ್ಪೋರ್ಟ್ಸ್ ಶೂಗಳನ್ನು ತಯಾರಿಸಲು ಮಾನವ ಸಂಪನ್ಮೂಲದ ಜತೆಗೆ ಕಚ್ಚಾ ಸಾಮಗ್ರಿಗಳ ಆಮದು ಕೂಡ ಹೊರೆ ಆಗುವುದರಿಂದ ಚಪ್ಪಲಿ ಅಥವಾ ನ್ಪೋರ್ಟ್ಸ್ ಶೂ ತಯಾರಿಸಲು ಇಲ್ಲಿನ ಉತ್ಪಾದಕರು ಮನಸ್ಸು ಮಾಡುವುದಿಲ್ಲ. ಅಲ್ಲದೇ ಅವುಗಳಿಗೆ ಗ್ರಾಹಕರು ಕೂಡ ಕಡಿಮೆ ಇ¨ªಾರೆ ಎನ್ನುತ್ತಾರೆ ವ್ಯಾಪಾರಸ್ಥರು.

ಉತ್ತಮ ಗುಣಮಟ್ಟ, ದರ ಅಗ್ಗ
ಸಾಮಾನ್ಯವಾಗಿ ವಿವಿಧ ಬ್ರ್ಯಾಂಡೆಡ್‌ ಚರ್ಮದ ಶೂಗಳು ಮಾರುಕಟ್ಟೆಯಲ್ಲಿ ಕನಿಷ್ಠವೆಂದರೂ 2ರಿಂದ 3 ಸಾವಿರ ರೂ.ಗಳಿಗೆ ಸಿಗುತ್ತವೆ. ಆದರೆ ಕ್ಯಾಂಪ್‌ ಏರಿಯಾದ ಚರ್ಮದ ಶೂಗಳು 600ರಿಂದ 1,000 ರೂ.ಗೆ ಸಿಗುತ್ತವೆ. ಬ್ರಾÂಂಡೆಡ್‌ ಶೂಗಳಿಗಿಂತ ಏನೂ ಕಡಿಮೆ ಇರುವುದಿಲ್ಲ. ಗುಣಮಟ್ಟದಲ್ಲಿ ಅವುಗಳಿಗಿಂತ ಕೊಂಚ ಹೆಚ್ಚು ಎನ್ನುವಷ್ಟರ ಮಟ್ಟಿಗೆ ಗಟ್ಟಿಮುಟ್ಟಾಗಿರುತ್ತವೆ. ಬಣ್ಣ, ಅಳತೆಯಲ್ಲೂ ಅವುಗಳಂತೆಯೇ ಇರುತ್ತವೆ. ಬ್ರ್ಯಾಂಡೆಡ್‌ ಹಾಗೂ ಕ್ಯಾಂಪ್‌ ಏರಿಯಾದಲ್ಲಿ ಸಿಗುವ ಶೂಗಳನ್ನು ಅಕ್ಕಪಕ್ಕ ಇಟ್ಟರೆ
ಏನೂ ಬದಲಾವಣೆಯೇ ಕಾಣುವುದಿಲ್ಲ!

ಕ್ಯಾಂಪ್‌ ಬೂಟು ದಿನವಿಡೀ ಧರಿಸಿದರೂ ಕಾಲಿಗೆ ತಂಪು
ಬ್ರಾÂಂಡೆಡ್‌ ಲೆದರ್‌ ಶೂಗಳಲ್ಲಿ ಫೋಮ…, ರೆಕ್ಸಿನ್‌ ಬಳಸುವುದರಿಂದ ದಿನವಿಡೀ ಧರಿಸಿದಾಗ ಅಂಗಾಲುಗಳು ಬಿಸಿಯಾಗುತ್ತವೆ. ಕೆಲವರಿಗೆ ಕಾಲು ನೀರೊಡೆಯುವ ಸಮಸ್ಯೆಯೂ ಇರುತ್ತದೆ. ಆದರೆ ಕ್ಯಾಂಪ್‌ ಏರಿಯಾದಲ್ಲಿನ ಶೂಗಳಲ್ಲಿ ಈ ಸಮಸೆೆÂ ಬರುವುದಿಲ್ಲ. ದಿನವಿಡೀ ಧರಿಸಿದರೂ ಅಂಗಾಲುಗಳು ತಂಪಾಗಿಯೇ
ಇರುತ್ತವೆ ಎನ್ನುತ್ತಾರೆ ತಯಾರಕರು.

ವಾರ್ಷಿಕ 22 ಕೋಟಿ ರೂಪಾಯಿ ವಹಿವಾಟು
ಕ್ಯಾಂಪ್‌ ಏರಿಯಾ ಸ್ಥಳೀಯ ಮಾರುಕಟ್ಟೆಯಾಗಿದ್ದರೂ ಗ್ರಾಹಕರಿಗೆ ಕೊರತೆ ಇಲ್ಲ. ಇಲ್ಲಿ ತಯಾರಾಗುವ ಬೂಟುಗಳು ಪಕ್ಕದ ಮಹಾರಾಷ್ಟ್ರ, ಗೋವಾಕ್ಕೆ ರಫ್ತಾಗುತ್ತವೆ. ವಾರ್ಷಿಕ 22 ಕೋಟಿ ರೂ. ವಹಿವಾಟು ನಡೆಯುತ್ತದೆ. ಮುಂಚಿತವಾಗಿಯೇ ಇಲ್ಲಿ ಆರ್ಡರ್‌ ಕೊಟ್ಟು ನೂರಾರು ಜತೆ ಶೂಗಳನ್ನು ಮಾಡಿಸಿಕೊಂಡು ಹೋಗುತ್ತಾರೆ. ಹೀಗಾಗಿ ಇಲ್ಲಿನ ವ್ಯಾಪಾರ ವಹಿವಾಟು ವರ್ಷವಿಡೀ ಚೆನ್ನಾಗಿಯೇ ನಡೆಯುತ್ತದೆ ಎನ್ನುತ್ತಾರೆ ಅಂಗಡಿ ಮಾಲಕರು.

ಕ್ಯಾಂಪ್‌ ಪ್ರದೇಶದಲ್ಲಿ 3,000+ ಜನರಿಗೆ ಉದ್ಯೋಗ
ಕ್ಯಾಂಪ್‌ ಏರಿಯಾದ ಬೂಟು ತಯಾರಿಕೆ ಉದ್ಯಮ ದೊಡ್ಡ ಪ್ರಮಾಣದಲ್ಲಿ ಇಲ್ಲದಿದ್ದರೂ ಎಲ್ಲವೂ ಹ್ಯಾಂಡ್‌ಮೇಡ್‌ ಆಗಿರುವುದರಿಂದ 3,000 ಅಧಿಕ ಜನರಿಗೆ ಜನರಿಗೆ ಉದ್ಯೋಗ ಕಲ್ಪಿಸಿದೆ. ಚರ್ಮ ಕತ್ತರಿಸುವುದು, ಸೋಲ್‌ ತಯಾರಿಸುವುದು, ವಿನ್ಯಾಸ ಸಿದ್ಧ ಮಾಡುವುದು ಸೇರಿದಂತೆ ವಿವಿಧ ಸ್ತರದಲ್ಲಿ ನುರಿತ ಕಾರ್ಮಿಕರು ಕೆಲಸ ಮಾಡುತ್ತಿ¨ªಾರೆ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದೆ. ವ್ಯಾಪ್ತಿ ಹಿಗ್ಗಿದರೆ ಇನ್ನಷ್ಟು ಕೈಗಳಿಗೆ ಕೆಲಸ ಸಿಗಲಿದೆ.

ಕ್ಯಾಂಪ್‌ ಶೂಗೆ ಜಿಎಸ್‌ಟಿಯದ್ದೇ ಸಮಸ್ಯೆ
ಇಲ್ಲಿನ ಬೂಟು ಗುಣಮಟ್ಟªಾಗಿದ್ದರೂ ಕಡಿಮೆ ಬೆಲೆ ಸಿಗುತ್ತವೆ. ಆದರೂ ಗ್ರಾಹಕರು ಮತ್ತಷ್ಟು ಕಡಿಮೆ ಮಾಡುವಂತೆ ಒತ್ತಾಯಿಸುತ್ತಾರೆ. ಜಿಎಸ್‌ಟಿ ಯಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಮೊದಲು ಶೇ.5ರಷ್ಟಿದ್ದ ಜಿಎಸ್‌ಟಿ ಈಗ 12ಕ್ಕೆ ಏರಿಸಲಾಗಿದೆ. ಕಚ್ಚಾ ಸಾಮಗ್ರಿಗಳಿಂದ ಹಿಡಿದು ಮಾರಾಟದ ಬೆಲೆ ಕೂಡ ಹೆಚ್ಚಿದೆ. ಆದರೆ 50 ರೂ. ಬೆಲೆ ಏರಿಸಿದರೂ ಗ್ರಾಹಕರು ಖರೀದಿಸಲು ಹಿಂದೆ ಮುಂದೆ ಮಾಡುತ್ತಾರೆ ಎನ್ನುವುದು ಮಾರಾಟಗಾರರ ಅಳಲು.

ಇಲ್ಲಿನ ಶೂಗಳು ಬ್ರ್ಯಾಂಡೆಡ್‌ ಶೂಗಳಿಗಿಂತ ಹೇಗೆ ಭಿನ್ನ?
ಮಾರುಕಟ್ಟೆಯಲ್ಲಿರುವ ಬ್ರ್ಯಾಂಡೆಡ್‌ ಬೂಟುಗಳ ಯಾವುದೇ ಹೊಸ ವಿನ್ಯಾಸ ಬಂದರೂ ಅದರಂತೆ ಕಾಣುವ, ಅದಕೆೆR ಹೋಲಿಕೆಯಾಗುವ ವಿನ್ಯಾಸದಲ್ಲೇ ಚರ್ಮದ ಶೂಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಲೋಕಲ್‌ ಹೆಸರಿನಲ್ಲೇ ಆ ಶೂಗಳನ್ನು ಮಾರಾಟ ಮಾಡಲಾಗುತ್ತದೆ. ಗಟ್ಟಿಮುಟ್ಟಾಗಿರುವುದರಿಂದ ಬ್ರಾÂಂಡೆಡ್‌ ಶೂಗಳು ಹಾಳಾದರೂ ಕ್ಯಾಂಪ್‌ ಏರಿಯಾ ಶೂಗಳು ಮಾತ್ರ ಮೂರ್ನಾಲ್ಕು ವರ್ಷ ಬಾಳಿಕೆ ಬರುತ್ತವೆ!

ಪೀಳಿಗೆಯಿಂದ ಪೀಳಿಗೆಗೆ ಕೌಶಲ ರವಾನೆ
ಬೆಳಗಾವಿ ಕ್ಯಾಂಪ್‌ ಶೂ ಮಾರುಕಟ್ಟೆ ಬ್ರಿಟಿಷ್‌ ವಸಾಹತುಶಾಹಿ ಯುಗಕ್ಕೆ ಸಂಬಂಧಿಸಿದ್ದು ಆಗ ಕ್ಯಾಂಪ್‌ ಪ್ರದೇಶದಲ್ಲಿ ತಮ್ಮ ಅಧಿಕಾರಿಗಳು, ನಿವಾಸಿಗಳಿಗೆ ಹೈ ಸ್ಟ್ರೀಟ್‌ ಎಂಬ ಕೇಂದ್ರ ಮಾರುಕಟ್ಟೆ ಸ್ಥಾಪನೆ ಮಾಡಿದರು. ಈ ಹೈ ಸ್ಟ್ರೀಟ್‌ ವಸಾಹತುಶಾಹಿ ಪಟ್ಟಣಕ್ಕೆ ಔಪಚಾರಿಕ ಮತ್ತು ವಿಶೇಷ ಪಾದರಕ್ಷೆಗಳನ್ನು ತಯಾರಿಸುವ ಕೌಶಲಪೂರ್ಣ ಶೂ ತಯಾರಕರು ಸೇರಿದಂತೆ ವಿವಿಧ ಸರಕು ಮತ್ತು ಸೇವೆಗಳನ್ನು ಒದಗಿಸಿತು. ಆಗ ಈ ಮಾರುಕಟ್ಟೆ ಸೀಮಿತ ಅವಧಿಗೆ ಮೀಸಲಾಗಿದ್ದರೂ ಮುಂದೆ ಶೂ ತಯಾರಿಕೆ ಮತ್ತು ಸ್ಥಳೀಯ ಪಾದರಕ್ಷೆ ವ್ಯವಹಾರಗಳ ಸಂಪ್ರದಾಯ ಇಂದಿಗೂ ಮುಂದುವರಿದುಕೊಂಡು ಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *