Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾತ್ರೆ ವಿಚಾರ ಜಗಳವೇ ತಂದೆಗೆ ಚಾಕು ಇರಿಯಲು ಮಗನಿಗೆ ಕಾರಣವಾಯಿತಾ?

Spread the love

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಮಗ ಚಾಕುವಿನಿಂದ ತಂದೆಗೆ ಇರಿದ ಘಟನೆ ಧಾರವಾಡ (Dharwad) ಜಿಲ್ಲೆಯ ಹುಬ್ಬಳ್ಳಿ (Hubballi) ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದಿದೆ. ಗಾಯಾಳು ಯಲ್ಲಪ್ಪ ಸಂಕುದ್​ (72) ಅವರನ್ನು ಹುಬ್ಬಳ್ಳಿ ಕಿಮ್ಸ್​​ ಆಸ್ಪತ್ರೆಗೆ ದಾಖಲಾಗಿದೆ.

ಮಹಾಂತೇಶ್​ ಚಾಕುವಿನಿಂದ ಆರೋಪಿ.

ಶುಕ್ರವಾರ (ಆ.22) ಮುಂಜಾನೆ 8 ಗಂಟೆ ಸುಮಾರಿಗೆ ಯಲ್ಲಪ್ಪ ಮತ್ತು ಪುತ್ರ ಮಹಾಂತೇಶ್​ ನಡುವೆ ಪಾತ್ರೆ ವಿಚಾರಕ್ಕೆ ಗಲಾಟೆಯಾಗಿದೆ. ಗಲಾಟೆ ತಾರಕಕ್ಕೆ ಏರಿದ್ದು, ಮಹಾಂತೇಶ್​ ಚಾಕುವಿನಿಂದ ತಂದೆ ಯಲ್ಲಪ್ಪನಿಗೆ ನಾಲ್ಕು ಕಡೆ ಇರಿದಿದ್ದು, ಚಾಕು ದೇಹದಲ್ಲಿಯೇ ಸಿಲುಕಿತ್ತು. ಚಾಕು ಸಮೇತ ಕುಟುಂಬಸ್ಥರು ಯಲ್ಲಪ್ಪರನ್ನು ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ, ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಯಲ್ಲಪ್ಪ ಅವರು ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಯಲ್ಲಪ್ಪ ಅವರ ಹೊಟ್ಟೆ, ಬೆನ್ನು, ಎದೆ ಸೇರಿದಂತೆ ನಾಲ್ಕು ಕಡೆ ಚಾಕುವಿನಿಂದ ಇರಿಯಲಾಗಿದೆ.

ಯಲ್ಲಪ್ಪ ದಂಪತಿಗೆ ಮೂರು ಜನ ಮಕ್ಕಳಿದ್ದಾರೆ. ಆರೋಪಿ ಮಹಾಂತೇಶ್​ನೇ ಹಿರಿಯ ಮಗ. ಆದರೆ, ಮಹಾಂತೇಶ್ ತಂದೆಯ ಜೊತೆ ಇಲ್ಲ. ತನ್ನ ಸಹೋದರರು ಮತ್ತು ತಾಯಿ ಜೊತೆ ಬೇರೆ ಮನೆ ಮಾಡಿಕೊಂಡು ಇದ್ದಾನೆ. ಯಲ್ಲಪ್ಪ ತನ್ನ ತಂದೆ-ತಾಯಿ ಜೊತೆ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ ಹಲವು ದಿನಗಳಿಂದ ಹಣಕಾಸು ವಿಚಾರಕ್ಕೆ ತಂದೆ ಮತ್ತು ಮಕ್ಕಳ ನಡುವೆ ಗಲಾಟೆ ಆಗುತ್ತಿತ್ತು.

ಥಿನ್ನರ್ ತಂದ ಆಪತ್ತು; ಮಗ ಸಾವು, ತಂದೆ ಸ್ಥಿತಿ ಚಿಂತಾಜನಕ

ಶುಕ್ರವಾರ ಮುಂಜಾನೆ ಯಲ್ಲಪ್ಪ ಇದ್ದ ಮನೆಗೆ ಬಂದಿದ್ದ ಮಹಾಂತೇಶ್​, “ನನ್ನ ತಾಯಿ ತವರು ಮನೆಯಿಂದ ತಂದಿದ್ದ ಪಾತ್ರೆಯನ್ನು ಕೊಡುವಂತೆ ಕೇಳಿದ್ದಾನೆ. ಈ ಸಮಯದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯಾಗಿದ್ದು, ಜಗಳಕ್ಕೆ ತಿರುಗಿದೆ. ಗಲಾಟೆ ತಾರಕಕ್ಕೆ ಏರಿದ್ದು, ಮಹಾಂತೇಶ್​ ಮನೆಯಿಂದ ತಗೆದುಕೊಂಡು ಬಂದಿದ್ದ ಚಾಕುವಿನಿಂದ ಯಲ್ಲಪ್ಪನಿಗೆ ನಾಲ್ಕು ಕಡೆ ಇರದಿದ್ದಾನೆ. ಬಿಡಿಸಲು ಹೋಗಿದ್ದ ಯಲ್ಲಪ್ಪನ ಹೆತ್ತವರ ಮೇಲೂ ಹಲ್ಲೆ ಮಾಡಿದ್ದಾನೆ.

ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಹಾಂತೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಂದೆ ಮಕ್ಕಳ ಜಗಳ ಏನೇ ಇರಲಿ, ಕೂತು ಸಮಾಧಾನದಿಂದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವದನ್ನು ಬಿಟ್ಟು ಹೆತ್ತ ತಂದೆಯೇ ಮೇಲೆ ಮಗನೇ ಕೌರ್ಯ ಮೆರದಿದ್ದು ಮಾತ್ರ ದುರಂತವೇ ಸರಿ.


Spread the love
Share:

administrator

Leave a Reply

Your email address will not be published. Required fields are marked *