ಕ್ಯಾನ್ಸರ್ ಗೆದ್ದ ಮಗನಿಗಾಗಿ ತಂದೆಯ ಭರವಸೆ: ಸಾಮಾಜಿಕ ಜಾಲತಾಣದ ಕರೆಗೆ ಸ್ಪಂದಿಸಿದ ಸಾವಿರಾರು ಜನ

ಇತ್ತೀಚೆಗೆ ಪುಟ್ಟ ಮಕ್ಕಳು ಕೂಡ ಕ್ಯಾನ್ಸರ್ಗೆ ತುತ್ತಾಗುವುದನ್ನು ನೋಡಿರಬಹುದು. ಆದರೆ ಇಲ್ಲೊಬ್ಬ ಪುಟ್ಟ ಬಾಲಕ ಕ್ಯಾನ್ಸರ್ ಜಯಿಸಿ ಬಂದಿದ್ದ. ಅತನಿಗೆ ಅಪ್ಪ ಆತನ ಪರವಾಗಿ ಬಲೂನ್ ಹಾರಿಸುವ ಪ್ರಾಮಿಸ್ ಮಾಡಿದ್ದ ಆದರೆ ತಂದೆ ನೀಡಿದ ಭರವಸೆಯನ್ನು ಇನ್ನಷ್ಟು ಅದ್ದೂರಿಯಾಗುವಂತೆ ಮಾಡಿದವರು ಊರ ಜನರು. ಹೌದು ಊರಿನ ಜನರೆಲ್ಲಾ ಒಂದಾಗಿ ಒಂದೇ ಗುರಿ ಒಂದೇ ಕೆಲಸಕ್ಕೆ ಜೊತೆಯಾದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಹಾಗಿದ್ದರೆ ಆ ಕ್ಯಾನ್ಸರ್ ಗೆದ್ದ ಬಾಲಕನಿಗೆ ಅಪ್ಪ ನೀಡಿದ ಭರವಸೆ ಹೀಗೆ ಅದ್ದೂರಿಯಾಗಿ ಈಡೇರಿದ್ದು ಹೇಗೆ? ಆ ಊರಮಂದಿ ಮಾಡಿದ್ದೇನು ಇದೆಲ್ಲದರ ವಿವರ ಇಲ್ಲಿದೆ ನೋಡಿ.

ಕ್ಯಾನ್ಸರ್ ಜಯಿಸಿದ ಮಗನಿಗೆ ಅಪ್ಪ ಮಾಡಿದ್ದೇನು?
ಹೇಳಿಕೇಳಿ ಇದು ಸಾಮಾಜಿಕ ಜಾಲತಾಣಗಳ ಯುಗ, ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಶಕ್ತಿ ಈ ಪ್ರಭಾವಶಾಲಿ ಸೋಶಿಯಲ್ ಮೀಡಿಯಾಗಿದೆ. ಅದೇ ರೀತಿ ಇಲ್ಲಿ ತಂದೆಯೊಬ್ಬರು, ಕ್ಯಾನ್ಸರ್ ಜಯಿಸಿ ಬಂದ ಮಗನ ಆಸೆ ಈಡೇರಿಸುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕರೆ ನೀಡಿದರು. ನನ್ನ ಮಗ ಕ್ಯಾನ್ಸರ್ ರೋಗವನ್ನು ಜಯಿಸಿ ಬಂದಿದ್ದಾನೆ. ಹಾಗೂ ನಾನು ಅವನಿಗೆ ಆಕಾಶದಲ್ಲಿ ಬಲೂನ್ ಹಾರಿಸುವುದಾಗಿ ಭರವಸೆ ನೀಡಿದ್ದೇನೆ. ನನಗೆ ಯಾರು ಸ್ನೇಹಿತರಾಗಲಿ ಸಂಬಂಧಿಗಳಾಗಲಿ ಇಲ್ಲ. ಹೀಗಾಗಿ ನೀವು ಯಾರಾದರೂ ನನ್ನ ಜೊತೆ ಇದೇ ಭಾನುವಾರ ಮುನ್ಸಿಪಾಲಿಟಿ ಮುಂದೆ ಬಂದು ನನ್ನ ಮಗನ ಆಸೆ ಈಡೇರಿಸುವುದಕ್ಕೆ ಬಲೂನ್ ಹಾರಿಸಲು ನನ್ನ ಜೊತೆ ಕೈ ಜೋಡಿಸುವಿರಾ ಎಂದು ಎಕ್ಸ್ನಲ್ಲಿ ಅವರು ಟ್ವಿಟ್ ಮಾಡಿದ್ದಾರೆ. ಇವರ ಈ ಒಂದೇ ಒಂದು ಪೋಸ್ಟ್ಗೆ ಪ್ರವಾಹದಂತೆ ಜನ ಬಲೂನ್ ಹಿಡಿದು ಬಂದು ಸೇರಿದರು. ನೂರಾರು ಜನ ಕೈಯಲ್ಲಿ ತರ ತರಹದ ಬಣ್ಣಗಳ ಬಲೂನ್ ಹಿಡಿದು ಬಂದು ಪುಟ್ಟ ಬಾಲಕನ ಖುಷಿಗಾಗಿ ಅಲ್ಲಿ ಸೇರಿದರು.
ತಂದೆಯ ಕರೆಗೆ ಜನರಿಂದ ಭಾರಿ ಸ್ಪಂದನೆ:
ಜಸ್ಮೀನ್ ಕಿಡ್ಸ್ ಎಂಬ ಇನ್ಸ್ಟಾಗ್ರಾಮ್ ಪೇಜ್ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಒಬ್ಬ ಧೈರ್ಯಶಾಲಿ ಪುಟ್ಟ ಹುಡುಗ ಕ್ಯಾನ್ಸರ್ ಅನ್ನು ಗೆದ್ದ. ಆದರೆ ಇದನ್ನು ಸಂಭ್ರಮಿಸುವುದಕ್ಕೆ ಮಗುವಿನ ತಂದೆ ತಾನು ಒಂಟಿ ಎಂದು ಭಾವಿಸಿದ್ದ ಆದರೆ ಹಾಗಾಗಿಲ್ಲ, ಅಲ್ಲಿಗೆ. ಜನರು ಬಂದರು, ಹೃದಯಗಳು ಒಂದಾದವು, ಮತ್ತು ಭರವಸೆ ಮರುಜನ್ಮ ಪಡೆದವು. ಇಂದು, ಆಕಾಶದಲ್ಲಿ ಆಕಾಶಬುಟ್ಟಿಗಳು ತುಂಬಿವೆ, ಕಠಿಣ ಕ್ಷಣಗಳಲ್ಲಿಯೂ ಸಹ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಇದು ನಮಗೆ ನೆನಪಿಸುತ್ತದೆ ಎಂದು ವೀಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ.
ವೀಡಿಯೋಗೆ ಪ್ರತಿಕ್ರಿಯಿಸಿದ ಒಬ್ಬರು ಹಲೋ, ಈ ಸುಂದರ ಕಾರ್ಯಕ್ರಮ ಟರ್ಕಿಯಲ್ಲಿ ಸ್ವಯಂಪ್ರೇರಿತವಾಗಿ ನಡೆಯಿತು. ನಾವು ಸಾಮಾನ್ಯವಾಗಿ ಈ ರೀತಿ ಆಚರಿಸುವುದಿಲ್ಲ ಮತ್ತು ಇದು ಬಲೂನ್ಗಳೊಂದಿಗೆ ನಾವು ಮಾಡುವ ಮೊದಲ ಆಚರಣೆಯಾಗಿದೆ, ಆದರೆ ತಂದೆ ಆಹ್ವಾನಕ್ಕಾಗಿ ಕರೆ ಮಾಡಿದಾಗ, ಅದು ಇಷ್ಟು ದೊಡ್ಡದಾಗಲಿದೆ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಪ್ರತಿಯೊಂದು ಬಲೂನ್ ಹಲವು ಹಂತಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಮಗುವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಸಂಸ್ಕೃತಿ ಮತ್ತು ಜನಾಂಗದಲ್ಲಿ ಏಕತೆ ಸರಳವಾಗಿ ಸುಂದರವಾಗಿ ಕಾಣುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಭೂಮಿಯಲ್ಲಿ ಇನ್ನು ಸುಂದರ ವ್ಯಕ್ತಿಗಳಿದ್ದಾರೆ ಎಂಬುದನ್ನು ಈ ವಿಡಿಯೋ ತೋರಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ವೀಡಿಯೋಗೆ ತಂದೆ ಹಾಗೂ ಮಗನಿಗಾಗಿ ಹೊರಟು ಬಂದು ಬಲೂನ್ ಹಾರಿಸಿದ ಅಲ್ಲಿನ ಜನರಿಗೆ ಮೆಚ್ಚುಗೆ ಅಭಿನಂದನೆ ಸೂಚಿಸಿ ಕಾಮೆಂಟ್ ಮಾಡಿದ್ದಾರೆ ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಆಗಿದೆ. ಪುಟ್ಟ ಮಕ್ಕಳಿಗಾಗಿ ಇಡೀ ಜಗತ್ತೇ ಒಂದಾಗುತ್ತದೆ ಎಲ್ಲರನ್ನು ಆಕರ್ಷಿಸುವ ಮಕ್ಕಳು ದೇವರ ಸಮಾನ ಎಂದು ಇದೇ ಕಾರಣಕ್ಕೆ ಹೇಳುತ್ತಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸುತ್ತದೆ ಕಾಮೆಂಟ್ ಮಾಡಿ.