Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಜನಿಕಾಂತ್‌ರ ‘ಕೂಲಿ’ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸುವಲ್ಲಿ ವಿಫಲ; ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕುಸಿತ

Spread the love

ಈವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ಕೂಲಿ’ ಥಿಯೇಟರ್‌ಗೆ ಲಗ್ಗೆ ಇಟ್ಟು 7ನೇ ದಿನಕ್ಕೆ ಕಾಲಿಟ್ಟಿದೆ. ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ ಆಗಿದ್ದರಿಂದ ‘ಕೂಲಿ’ ಮೇಲೆ ಪ್ರೇಕ್ಷಕರಿಗೆ ವಿಶೇಷ ಆಸಕ್ತಿಯಿತ್ತು. ಅದರಲ್ಲೂ ಲೋಕೇಶ್ ಕನಕರಾಜ್ ವಿಷನ್‌ಗೆ ರಜನಿ ಮ್ಯಾನರಿಸಂ, ಸ್ಟೈಲ್‌ ಹೇಗೆ ಸಿಂಕ್ ಆಗಿರುತ್ತೆ ಅನ್ನೋದನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾದು ಕೂತಿದ್ದವರಿಗೆ ನಿರಾಸೆಯಾಗಿತ್ತು.

ರಜನಿಕಾಂತ್, ಲೋಕೇಶ್ ಕನಕರಾಜ್ ಹೊರತಾಗಿಯೂ ಈ ಸಿನಿಮಾದಲ್ಲಿ ಸೂಪರ್‌ಸ್ಟಾರ್‌ಗಳ ದೊಡ್ಡ ಪಟ್ಟಿಯೇ ಇತ್ತು. ತೆಲುಗು ಚಿತ್ರರಂಗದಿಂದ ನಾಗಾರ್ಜುನ, ಬಾಲಿವುಡ್‌ನಿಂದ ಆಮಿರ್ ಖಾನ್ ಹಾಗೂ ಕನ್ನಡದಿಂದ ಉಪೇಂದ್ರ ಈ ಸಿನಿಮಾದಲ್ಲಿ ನಟಿಸಿದ್ದರು. ಇವರೊಂದಿಗೆ ಶ್ರುತಿ ಹಾಸನ್, ರಚಿತಾ ರಾಮ್, ಸೌಬಿನ್ ಶಾಹೀರ್, ಸತ್ಯರಾಜ್ ಸೇರಿದಂತೆ ದೊಡ್ಡ ತಾರಾಗಣವೇ ಇತ್ತು. ಹೀಗಾಗಿ ತಿಂಗಳ ಮುಂಚೆನೇ ಥಿಯೇಟರ್‌ಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಇಷ್ಟು ದೊಡ್ಡ ತಾರಾಗಣವಿದ್ದರೂ, ಬಜೆಟ್ ಇದ್ದರೂ ಲೋಕೇಶ್ ಕನಕರಾಜ್ ಸೋತಿದ್ದರು. ವೀಕ್ ಸ್ಕ್ರೀನ್‌ಪ್ಲೇ ಫಸ್ಟ್ ಡೇ ಫಸ್ಟ್ ಶೋನಲ್ಲೇ ‘ಕೂಲಿ’ಯ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡಿತ್ತು. 6ನೇ ದಿನ ಆಗುವಷ್ಟರಲ್ಲಿ ಈ ಸಿನಿಮಾದ ಕಲೆಕ್ಷನ್ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಮೊದಲ ನಾಲ್ಕು ದಿನ ಹೊರತು ಪಡಿಸಿದರೆ, 5 ಮತ್ತು 6ನೇ ದಿನ ಬಾಕ್ಸಾಫೀಸ್ ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿದೆ.

6ನೇ ದಿನ ‘ಕೂಲಿ’ ಕಥೆಯೇನು?

ರಜನಿಕಾಂತ್ ‘ಕೂಲಿ’ ಆರನೇ ದಿನಕ್ಕೆ ತನ್ನ ಕ್ರೇಜ್ ಅನ್ನು ಕಳೆದುಕೊಂಡಿದೆ. ವೀಕ್‌ಡೇಸ್‌ನಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತೆ ಎಂಬ ನಿರೀಕ್ಷೆಯಲ್ಲಿದ್ದ ತಂಡಕ್ಕೆ ನಿರಾಸೆಯಾಗಿದೆ. ಸ್ಯಾಕ್ನಿಲ್ಕ್ ವರದಿ ಮಾಡಿದಂತೆ ಸೂಪರ್‌ಸ್ಟಾರ್ ಸಿನಿಮಾ 6ನೇ ದಿನವೂ ಶೇ.25ರಷ್ಟು ಇಳಿಕೆ ಕಂಡಿದೆ. ನಿನ್ನೆ (ಆಗಸ್ಟ್ 19) ಅಂದರೆ, 6ನೇ ದಿನ ಈ ಸಿನಿಮಾ ಗಳಿಸಿದ್ದು ಕೇವಲ 9.50 ಕೋಟಿ ರೂಪಾಯಿ ಎಂದು ವರದಿ ಮಾಡಿದೆ. ಈ ಕಲೆಕ್ಷನ್ ರಿಪೋರ್ಟ್ ನಿಗದಿ ಸಮಯಕ್ಕಿಂತ ಮುಂಚೆಯೇ ತೆಗೆಯಲಾಗಿದ್ದು, 9.50 ಕೋಟಿ ರೂಪಾಯಿಯಿಂದ ಅದು 11 ಕೋಟಿವರೆಗೆ ಏರಿಕೆಯಾಗಬಹುದಷ್ಟೇ.

ಭಾರತದಲ್ಲಿ ಕೂಲಿ ಗಳಿಸಿದ್ದು ಎಷ್ಟು?

ಮೊದಲ ನಾಲ್ಕು ದಿನ ‘ಕೂಲಿ’ ಸಿನಿಮಾ ಕಲೆಕ್ಷನ್ ಉತ್ತಮವಾಗಿತ್ತು. ಆದರೆ, ವೀಕ್‌ಡೇಸ್‌ನಲ್ಲಿ ಡ್ರಾಪ್ ಕಂಡಿದೆ. ಲೋಕೇಶ್ ಕನಕರಾಜ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುವುದರಲ್ಲಿ ಸೋಲುತ್ತಿದೆ. 5ನೇ ದಿನದಿಂದ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆ ಕಂಡಿದೆ. ಈ ಆರು ದಿನಗಳಲ್ಲಿ ಭಾರತದಲ್ಲಿ ‘ಕೂಲಿ’ ಸಿನಿಮಾದ ಕಲೆಕ್ಷನ್ 216 ಕೋಟಿ ರೂಪಾಯಿ ಎಂದು ಸ್ಯಾಕ್ನಿಲ್ಕ್ ಹೇಳಿದೆ.

6 ದಿನಗಳ ಕೂಲಿ ಕಲೆಕ್ಷನ್ (ಭಾರತ)

ಮೊದಲ ದಿನ ₹65 ಕೋಟಿ

2ನೇ ದಿನ ₹54.75 ಕೋಟಿ

3ನೇ ದಿನ ₹39.5 ಕೋಟಿ

4ನೇ ದಿನ ₹35.25 ಕೋಟಿ

5ನೇ ದಿನ ₹12 ಕೋಟಿ

6ನೇ ದಿನ ₹9.50 ಕೋಟಿ

ಒಟ್ಟು ₹216 ಕೋಟಿ (Net)

ಸೋಲಿನ ಸುಳಿಗೆ ಸಿಲುಕುತ್ತಾ?

‘ಕೂಲಿ’ ವೀಕ್‌ ಡೇಸ್‌ನಲ್ಲಿ ಉತ್ತಮ ಕಲೆಕ್ಷನ್ ಆಗಬೇಕಿತ್ತು. ಅದರಲ್ಲೂ ಮೊದಲ ವಾರ ಒಳ್ಳೆ ಕಲೆಕ್ಷನ್ ಆಗಿದ್ದರೆ, ಭಾರತದ ಬಾಕ್ಸಾಫೀಸ್‌ನಲ್ಲೇ ₹500 ಕೋಟಿ ಲೂಟಿ ಮಾಡುವ ಸಾಧ್ಯತೆಯಿತ್ತು. ಆದರೆ, ಸದ್ಯಕ್ಕೆ ಆ ಲಕ್ಷಣಗಳು ಕಾಣಿಸುತ್ತಿಲ್ಲ. ₹350 ಕೋಟಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮ್ಮಿ ಅಂದರೂ ₹600 ಕೋಟಿ ಕಲೆಕ್ಷನ್ ಮಾಡಬೇಕು. ಸದ್ಯ ಪರಿಸ್ಥಿತಿಯಲ್ಲಿ ಇಷ್ಟೊಂದು ಗಳಿಸುವುದು ಕಷ್ಟಸಾಧ್ಯವೆನಿಸಿದರೂ, 100 ಕೋಟಿ ಲಾಭ ಮಾಡಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕಾಚಾರ ಹಾಕಿದ್ದಾರೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Spread the love
Share:

administrator

Leave a Reply

Your email address will not be published. Required fields are marked *