₹65 ಲಕ್ಷ ಸಂಬಳ ಬಿಟ್ಟು 6 ತಿಂಗಳು ಪ್ರವಾಸ: ಅದೇ ಕಂಪನಿಗೆ ಹೈಕ್ ಜೊತೆ ಮರಳಿ ಬಂದ ಟೆಕ್ಕಿ

ಓರ್ವ ಟೆಕ್ ಉದ್ಯೋಗಿ ದೊಡ್ಡ ಮಟ್ಟದಲ್ಲಿ ಸಂಬಳ ಕೊಡುವ ಉದ್ಯೋಗವನ್ನು ತೊರೆದು, ಆರು ತಿಂಗಳು ಪ್ರವಾಸ ಮಾಡಿ, ಆಮೇಲೆ ಅದೇ ಕಂಪನಿಗೆ ಹೈಕ್ ಜೊತೆಗೆ ಮತ್ತೆ ಜಾಯಿನ್ ಆಗಿದ್ದಾರೆ. ಮರಳಿದ್ದಾನೆ.

ಕ್ರಿಯೇಟಿವ್ ಸಿಸ್ಟಮ್ ಎಂಬ ಯೂಸರ್ ಹೆಸರಿನಡಿಯಲ್ಲಿ ಪೋಸ್ಟ್ ಮಾಡಿದ ಈ ಟೆಕ್ಕಿ, “ಕಳೆದ ವರ್ಷ ನಾನು ವರ್ಷಕ್ಕೆ 65 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದ ನನ್ನ ಜಾಬ್ ಬಿಟ್ಟೆ.
ನಾನು ಬೇರೆ ಕಂಪೆನಿಗೆ ಹೋಗಲೇ ಇಲ್ಲ, ಕೇವಲ ಒಂದು ಕಾರು ಖರೀದಿಸಿ ಆಮೇಲೆ 6 ತಿಂಗಳು ಪ್ರವಾಸ ಮಾಡಿ, ಲೈಫ್ ಎಂಜಾಯ್ ಮಾಡಿದೆ, ನನಗೆ ಏನು ಇಷ್ಟವೋ ಅದನ್ನೆಲ್ಲ ಮಾಡಿದೆ. ಆರು ತಿಂಗಳು ಬೇಗ ಬೇಗ ಮುಗಿಯಿತು. ಆದರೆ ನನಗೆ ಈ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ” ಎಂದು ಹೇಳಿದ್ದಾರೆ.
ಹೈಕ್ ಜೊತೆಗೆ ಮತ್ತೆ ಅದೇ ಕಂಪೆನಿ ಜಾಯಿನ್ ಆದೆ!
“ಈಗ ನಾನು ಅದೇ ಕಂಪನಿಗೆ 15% ಹೈಕ್ ಜೊತೆಯಲ್ಲಿ ಮತ್ತೆ ಜಾಯಿನ್ ಆಗಿರುವೆ. ಈಗ ಮತ್ತೆ ಕೆಲಸ ಮಾಡೋಕೆ ತುಂಬ ಖುಷಿಯಾಗುತ್ತಿದೆ. ನಾನು ಈಗ ಹಣವನ್ನು ಡಿಫೆಂಟ್ ಆಗಿ ನೋಡ್ತೀನಿ, ಹೆಚ್ಚಿನ ಗೌರವ ಕೊಡ್ತೀನಿ. ಈ ಬ್ರೇಕ್ ನನ್ನನ್ನು ರೀ ಸೆಟ್ ಮಾಡಿತು” ಎಂದು ಅವರು ಹೇಳಿದ್ದಾರೆ. ಈ ನಿರ್ಧಾರವು ನನಗೆ ದೃಷ್ಟಿಕೋನ, ಉದ್ದೇಶ ಎರಡನ್ನೂ ನೀಡಿತು ಎಂದಿದ್ದಾರೆ.
ನನಗೆ ಮದುವೆಯಾಗಿಲ್ಲ!
ನಾನು ನನ್ನ ಸಂಬಳವನ್ನು ಯುಎಸ್ ಡಾಲರ್‌ಗಳಲ್ಲಿ ಪಡೆಯುತ್ತೇನೆ. ಭಾರತೀಯ ಕಾನೂನುಗಳ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತೇನೆ ಎಂದಿದ್ದಾರೆ. “ನಾನು ಅಮೆರಿಕದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರಿಸುವ ಪ್ಲ್ಯಾನ್ ಇದೆ. ಇದು ನನ್ನ ಕಂಪೆನಿ ಮಾಲಿಕರಿಗೆ ಗೊತ್ತಿತ್ತು. ನನಗೆ ಮದುವೆಯಾಗಿಲ್ಲ. ನನ್ನ ಕರಿಯರ್ ಜೊತೆ ಆಟ ಆಡಲು ಇನ್ನೂ ಟೈಮ್ ಇದೆ. ಅದಕ್ಕಾಗಿಯೇ ನಾನು ಅದೇ ಸಂಸ್ಥೆಗೆ ಮತ್ತೆ ಉತ್ತಮ ಸಂಬಳ, ತೆರಿಗೆ ಪ್ರಯೋಜನಗಳೊಂದಿಗೆ ಸೇರಿದ್ದೇನೆ. ಭಾರತೀಯ ಕಂಪನಿಗಳು ಈ ರೀತಿ ಮಾಡೋದಿಲ್ಲ” ಎಂದಿದ್ದಾರೆ.
ಖುಷಿವ್ಯಕ್ತಪಡಿಸಿದ ನೆಟ್ಟಿಗರು!
ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಲವಾರು ಸೋಶಿಯಲ್ ಮೀಡಿಯಾ ಯೂಸರ್ಸ್ ಈ ನಿರ್ಧಾರವನ್ನು ಮೆಚ್ಚಿದರೆ, ಇನ್ನೂ ಕೆಲವರು ಪ್ರಶ್ನೆ ಮಾಡಿದ್ದಾರೆ. “ಇಂತಹ ಬ್ರೇಕ್ ತೆಗೆದುಕೊಳ್ಳಲು ಧೈರ್ಯ ಬೇಕು, ಎಲ್ಲರೂ ಒಳ್ಳೆಯ ಸಂಬಳದಿಂದ ದೂರವಾಗಲು ಸಾಧ್ಯವಿಲ್ಲ” ಎಂದಿದ್ದಾರೆ. ಇನ್ನೊಬ್ಬ ಯೂಸರ್, “ಮಾನಸಿಕ ಆರೋಗ್ಯ, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದ್ದಕ್ಕೆ ಗೌರವ ಕೊಡ್ತೀನಿ” ಎಂದಿದ್ದಾರೆ. ಇನ್ನೊಬ್ಬರು “ನೀವು ಅದೇ ಸಂಸ್ಥೆಗೆ ಮತ್ತೆ ಸೇರಿದ್ದು ಖುಷಿ ಕೊಟ್ಟಿದೆ, ಇದು ನೀವು ಒಳ್ಳೆಯ ಸಂಬಂಧ ಇಟ್ಕೊಂಡು ಕಂಪನಿಯನ್ನು ಬಿಟ್ಟಿದ್ದೀರಿ ಅಂತ ಕಾಣುತ್ತದೆ” ಎಂದಿದ್ದಾರೆ.
ಸಂದೇಹಪಟ್ಟ ನೆಟ್ಟಿಗರು!
“ಡಾಲರ್ ಸಂಬಳವಿರುವವರಿಗೆ ಮಾತ್ರ ಭಾರತದಲ್ಲಿ ಈ ಥರ ಮಾಡಬಹುದು, ಹೆಚ್ಚಿನ ಜನರಿಗೆ ಈ ರೀತಿಯ ಸೌಲಭ್ಯ ಇದ್ದರೆ ಒಳ್ಳೆಯದು, ಆದರೆ ವಾಸ್ತವವು ಎಲ್ಲರಿಗೂ ಬ್ರೇಕ್ ತಗೊಳ್ಳಲು ಅವಕಾಶ ನೀಡುವುದಿಲ್ಲ, ನೀವು ನಿಮ್ಮ ಮನಸ್ಥಿತಿಯನ್ನು ರೀಸೆಟ್ ಮಾಡಿಕೊಂಡಿದ್ದೀರಿ, ಇದು ಅಪರೂಪ, ಬ್ರೇಕ್ ನಂತರ 15 % ಹೈಕ್ ಸಿಗುತ್ತದೆ ಎನ್ನೋದು ಕನಸು” ಎಂದಿದ್ದಾರೆ.
