Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಾವಿರ ಕೋಟಿ ಬೆಲೆ ಬಾಳುವ 9 ಮಹಡಿಗಳ ಆಫೀಸ್ ಬಾಡಿಗೆ ಪಡೆದ ಜನಪ್ರಿಯ ಕಂಪನಿ

Spread the love

ಬೆಂಗಳೂರು: ಆಯಪಲ್ ಕಂಪನಿ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವ ಹೆಚ್ಚಿಸಿಕೊಳ್ಳುತ್ತಿದೆ. ವಸಂತನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬಸಿ ಜೆನಿತ್ (Embassy Zenith) ಎನ್ನುವ ಕಟ್ಟಡದಲ್ಲಿ ಒಂಬತ್ತು ಅಂತಸ್ತುಗಳನ್ನು ಆಯಪಲ್ ಕಂಪನಿ ಬಾಡಿಗೆಗೆ (Rent) ಪಡೆದಿದೆ.

10 ವರ್ಷ ಕಾಲ ಬಾಡಿಗೆ ಕರಾರು ಆಗಿದೆ. ಈ 9 ಅಂತಸ್ತುಗಳಿಂದ ಸೇರಿ ಒಟ್ಟು 2.7 ಲಕ್ಷ ಚದರಡಿ ಜಾಗವನ್ನು ಆಯಪಲ್ (Apple) ಬಳಸಿಕೊಳ್ಳಲಿದೆ. ವರದಿಗಳ ಪ್ರಕಾರ ಜೆನಿತ್ ಎಂಬಸಿ ಕಟ್ಟಡದಲ್ಲಿ 5ರಿಂದ 13ನೇ ಮಹಡಿವರೆಗೂ ಸ್ಥಳವನ್ನು ಆಯಪಲ್ ಬಳಸುತ್ತದೆ.

ಈ 9 ಫ್ಲೋರ್​​ಗಳಿಗೆ ಆಯಪಲ್ ಕಂಪನಿ ಮಾಸಿಕವಾಗಿ 6.315 ಕೋಟಿ ರೂ ಬಾಡಿಗೆ ನೀಡುತ್ತದೆ. ಪ್ರತೀ ಚದರಡಿಗೆ 235 ರೂ ಬಾಡಿಗೆ ಆದಂತಾಗುತ್ತದೆ. ಕರಾರು ಪ್ರಕಾರ ಈ ಕಟ್ಟಡಕ್ಕೆ ಬಾಡಿಗೆ ವರ್ಷಕ್ಕೆ ಶೇ. 4.5ರಷ್ಟು ಹೆಚ್ಚಳ ಮಾಡಲಾಗುತ್ತದೆ.

ಅಡ್ವಾನ್ಸ್ ಅಥವಾ ಸೆಕ್ಯೂರಿಟಿ ಡೆಪಾಸಿಟ್ ಆಗಿ ಆಯಪಲ್ ಕಂಪನಿ 31.57 ಕೋಟಿ ರೂ ನೀಡಿದೆ. ಹತ್ತು ವರ್ಷ ಕಾಲ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಮಾಸಿಕ ಬಾಡಿಗೆ ಹಾಗೂ ವಾರ್ಷಿಕವಾಗಿ ಹೆಚ್ಚಿಸಲಾಗುವ ಬಾಡಿಗೆ ಮೊತ್ತ, ಇವೆಲ್ಲವನ್ನೂ ಸೇರಿಸಿದರೆ 10 ವರ್ಷದಲ್ಲಿ ಒಟ್ಟು ವೆಚ್ಚ 1,010 ಕೋಟಿ ರೂ ಆಗುತ್ತದೆ. ಇದರಲ್ಲಿ ಕಟ್ಟಡಕ್ಕೆ ಬಾಡಿಗೆ ಮಾತ್ರವಲ್ಲ, ಕಾರ್ ಪಾರ್ಕ್, ಮೈಂಟೆನೆನ್ಸ್ ಫೀಗಳೂ ಒಳಗೊಂಡಿವೆ. ಈ ಕಟ್ಟಡದಲ್ಲಿ 1,200 ಮಂದಿ ಕೆಲಸ ಮಾಡಲಿದ್ದಾರೆ.

ಬೆಂಗಳೂರಿನಲ್ಲಿ ದಾಖಲಾಗಿರುವ ಅತಿದೊಡ್ಡ ಬಾಡಿಗೆ ಕರಾರು ಒಪ್ಪಂದಗಳಲ್ಲಿ ಇದೂ ಒಂದೆನಿಸಿದೆ. ಎಂಬಸಿ ಗ್ರೂಪ್​ಗೆ ಸೇರಿದ ಮ್ಯಾಕ್​ಚಾರ್​ಲ್ಸ್ ಇಂಡಿಯಾ ಲಿಮಿಟೆಡ್ ಎನ್ನುವ ಕಂಪನಿಯು ಎಂಬಸಿ ಜೆನಿತ್​ನ ಮಾಲೀಕ ಸಂಸ್ಥೆಯಾಗಿದೆ. ಇದೇ ಎಂಬಸಿ ಕಟ್ಟಡದಲ್ಲಿ ಕೆಳಗಿನ ಮಹಡಿಯಿಂದ ನಾಲ್ಕನೇ ಮಹಡಿವರೆಗಿನ ಜಾಗವನ್ನೂ ಆಯಪಲ್ ಬಾಡಿಗೆಗೆ ಪಡೆಯುವ ಆಲೋಚನೆಯಲ್ಲಿದೆ. ಈ ನಾಲ್ಕು ಮಹಡಿಗಳಲ್ಲಿ ಒಟ್ಟು 1,21,203 ಚದರಡಿ ವಿಸ್ತೀರ್ಣದ ಆಫೀಸ್ ಸ್ಪೇಸ್ ಇದೆ. ಈ ಎಲ್ಲಾ 13 ಮಹಡಿಗಳಿಂದ ಒಟ್ಟು ಆಫೀಸ್ ಸ್ಪೀಸ್ ವಿಸ್ತೀರ್ಣ 4 ಲಕ್ಷ ಚದರಡಿ ದಾಟುತ್ತದೆ.

ಬೆಂಗಳೂರಿನಲ್ಲಿ ಹೆಚ್ಚಿನ ಆಯಪಲ್ ಉಪಸ್ಥಿತಿ

ಬೆಂಗಳೂರಿನ ಕಬ್ಬನ್ ರೋಡ್​ನಲ್ಲಿರುವ ಪ್ರೆಸ್ಟೀಜ್ ಮಿಂಸ್ಕ್ ಸ್ಕ್ವಯರ್​ನಲ್ಲಿ ಆಯಪಲ್ ಕಂಪನಿ 1.16 ಲಕ್ಷ ಚದರಡಿ ವಿಸ್ತೀರ್ಣದ ಜಾಗವನ್ನು 2.43 ಕೋಟಿ ರೂ ಮಾಸಿಕ ಬಾಡಿಗೆಗೆ ಪಡೆದಿದೆ. ಬ್ಯಾಟರಾಯನಪುರದಲ್ಲಿ 8,000 ಚದರಡಿ ವಿಸ್ತೀರ್ಣದ ಜಾಗವೊಂದನ್ನೂ ಆಯಪಲ್ ಲೀಸ್​ಗೆ ಪಡೆದಿದೆ.

ದೆಹಲಿ ಮತ್ತು ಮುಂಬೈನಲ್ಲಿ ರೀಟೇಲ್ ಸ್ಟೋರ್​ಗಳನ್ನು ಹೊಂದಿರುವ ಆಯಪಲ್ ಕಂಪನಿ ಬೆಂಗಳೂರು ಹಾಗೂ ಪುಣೆ ನಗರಗಳಲ್ಲಿ ಮತ್ತೂ ನಾಲ್ಕು ರೀಟೆಲ್ ಸ್ಟೋರ್​ಗಳನ್ನು ಆರಂಭಿಸುವ ಪ್ಲಾನ್ ಹೊಂದಿದೆ.


Spread the love
Share:

administrator

Leave a Reply

Your email address will not be published. Required fields are marked *