Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನೆಲಮಂಗಲ RTO ಕಚೇರಿಯಲ್ಲಿ ಲೈಂಗಿಕ ಕಿರುಕುಳ ಆರೋಪ: ಇಬ್ಬರು ಅಧಿಕಾರಿಗಳ ನಡುವೆ ಹೈಡ್ರಾಮಾ

Spread the love

ನೆಲಮಂಗಲ RTO ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳ ನಡುವೆ ನಡೆದ ಘಟನೆ ಇದೀಗ ದೊಡ್ಡ ಚರ್ಚೆಯ ವಿಷಯವಾಗಿದೆ. ಮಹಿಳಾ RTO ಇನ್ಸ್‌ಪೆಕ್ಟರ್ ಕವಿತಾ ಅವರು ನೆಲಮಂಗಲ ARTO ರಾಜಕುಮಾರ್ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.

ಜರ್ಕಿನ್ ಬಲವಂತವಾಗಿ ಬಿಚ್ಚಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ರಾಜಕುಮಾರ್ ವಿರುದ್ಧ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ
ರಾಜಕುಮಾರ್ ಅವರು ಕಳೆದ ಒಂದೂವರೆ ತಿಂಗಳಿನಿಂದ ನೆಲಮಂಗಲದಲ್ಲಿ ARTO ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ಸ್‌ಪೆಕ್ಟರ್ ಕವಿತಾ ಅವರ ಪ್ರೊಫೆಷನರಿ ಅವಧಿ ಇನ್ನೂ ಪೂರ್ಣಗೊಳ್ಳದಿದ್ದರೂ, ತ್ರಿಬಲ್ ಸ್ಟಾರ್ ಹಾಕಿಕೊಂಡಿರುವುದನ್ನು ಇತರೆ ಅಧಿಕಾರಿಗಳು ರಾಜಕುಮಾರ್ ಅವರ ಗಮನಕ್ಕೆ ತಂದಿದ್ದರು. ಈ ವಿಚಾರದಲ್ಲಿ ಕವಿತಾಗೆ ಮುನ್ನೇ ಬುದ್ದಿವಾದ ಹೇಳಲಾಗಿತ್ತೆಂಬ ಮಾಹಿತಿ ಲಭ್ಯವಾಗಿದೆ.

ವಿವಾದದ ತಿರುವು
ನಿನ್ನೆ ಕಚೇರಿಗೆ ಬಂದಾಗ, ರಾಜಕುಮಾರ್ ಅವರು ಸಮವಸ್ತ್ರದ ಮೇಲೆ ಜರ್ಕಿನ್ ಧರಿಸಬಾರದೆಂದು ಸೂಚನೆ ನೀಡಿದ್ದರು. ಇತರೆ ಸಿಬ್ಬಂದಿಗೆ ನೀಡಿದಂತೆ, ಕವಿತಾಗಿಗೂ ಇದೇ ನಿಯಮ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ, ಈ ಮಾತನ್ನು ತಪ್ಪಾಗಿ ಅರ್ಥೈಸಿ, ಉದ್ದೇಶಪೂರ್ವಕವಾಗಿ ತಮ್ಮ ಮೇಲೆ FIR ಮಾಡಲಾಗಿದೆ ಎಂದು ರಾಜಕುಮಾರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕುಮಾರ್ ಅವರ ಪ್ರತಿಕ್ರಿಯೆ
“ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ, ಸುಳ್ಳು ಆರೋಪ ಮಾಡಲಾಗಿದೆ. ಕಚೇರಿಯ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದರೆ ನಿಜಾಸ್ತಿ ಹೊರ ಬೀಳುತ್ತದೆ” ಎಂದು ರಾಜಕುಮಾರ್ ಪ್ರತಿಕ್ರಿಯಿಸಿದ್ದಾರೆ.

ತನಿಖೆ ಮುಂದುವರಿಕೆ
ಇದೀಗ ಇಬ್ಬರು ಅಧಿಕಾರಿಗಳ ನಡುವಿನ ಈ ಘಟನೆ ಬಿಗ್ ಹೈಡ್ರಾಮಾ ರೂಪ ಪಡೆದುಕೊಂಡಿದೆ. ಸಿಸಿಟಿವಿ ದೃಶ್ಯಾವಳಿಗಳು ಜೀ ಕನ್ನಡ ನ್ಯೂಸ್‌ಗೆ ಲಭ್ಯವಾಗಿದ್ದು, ಪೊಲೀಸ್ ಇಲಾಖೆ ಪ್ರಕರಣದ ತನಿಖೆ ಮುಂದುವರೆಸಿದೆ.


Spread the love
Share:

administrator

Leave a Reply

Your email address will not be published. Required fields are marked *